ಕರ್ನಾಟಕ

karnataka

ETV Bharat / city

ಗುರಿ ತಪ್ಪಿದ ಕಲ್ಲು: ಗಂಡ-ಹೆಂಡತಿ ಜಗಳಕ್ಕೆ ಪಕ್ಕದ ಮನೆ ಅಜ್ಜಿ ಬಲಿ - ಜೆ.ಜೆ.ನಗರ ಪೊಲೀಸರು

ಹೆಂಡತಿಗೆ ಎಸೆದ ಕಲ್ಲು ಗುರಿ ತಪ್ಪಿ ಪಕ್ಕದ ಮನೆ ಅಜ್ಜಿಯ ತಲೆಗೆ ತಾಗಿ, ವೃದ್ಧೆ ಬಲಿಯಾಗಿರುವ ಘಟನೆ ಬೆಂಗಳೂರಿನ ಜೆ‌.ಜೆ.ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜನತಾ ಕಾಲೋನಿಯಲ್ಲಿ ನಡೆದಿದ್ದು, ಪರಾರಿಯಾದ ಆರೋಪಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಪಶ್ಚಿಮ ವಿಭಾಗ ಡಿಸಿಪಿ ರಮೇಶ್ ಬಾನೋತ್

By

Published : Sep 13, 2019, 5:04 PM IST

ಬೆಂಗಳೂರು:‌ ವ್ಯಕ್ತಿಯೊಬ್ಬ ಕೋಪದಿಂದ ಹೆಂಡತಿಗೆ ಕಲ್ಲು ಎಸೆಯಲು ಹೋಗಿ, ಗುರಿ ತಪ್ಪಿ ವೃದ್ಧೆಯೊಬ್ಬರ ತಲೆಗೆ ತಾಕಿದ ಪರಿಣಾಮ ವೃದ್ಧೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜೆ‌.ಜೆ.ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜನತಾ ಕಾಲೋನಿಯಲ್ಲಿ ನಡೆದಿದೆ.

ಪಶ್ಚಿಮ ವಿಭಾಗ ಡಿಸಿಪಿ ರಮೇಶ್ ಬಾನೋತ್

ಮಿಂಟೊ‌ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಲಲಿತಮ್ಮ ಸಾವನ್ನಪ್ಪಿದ ವೃದ್ಧೆ.ಮಂಜುನಾಥ್, ಕಲ್ಲು ಎಸೆದ ಆರೋಪಿ.

ಲಲಿತಮ್ಮನ ಜೊತೆ ಗಂಡ, ಮಕ್ಕಳು ಯಾರು ಇಲ್ಲದೆ ಒಬ್ಬರೇ ವಾಸವಾಗಿದ್ದರು. ನಿನ್ನೆ ತಡರಾತ್ರಿ ಆರೋಪಿ ಮಂಜುನಾಥ್ ಹಾಗೂ ಸುನಂದ ದಂಪತಿ ನಡುವೆ ಹಣದ ವಿಚಾರಕ್ಕಾಗಿ ಮನೆಯಲ್ಲಿ ಜಗಳ ನಡೆದಿದೆ. ನೋಡು ನೋಡುತ್ತಿದ್ದಂತೆ ಗಲಾಟೆ ತಾರಕಕ್ಕೇರಿದ್ದು,‌ ಆಕ್ರೋಶದಿಂದ ಮನೆಯಿಂದ ಹೊರಬಂದ ಮಂಜುನಾಥ್, ಹೆಂಡತಿಗೆ ಸ್ಥಳದಲ್ಲೇ ಇದ್ದ ಕಲ್ಲು ಎತ್ತಿ ಎಸೆದಿದ್ದಾನೆ. ಆದರೆ ಕಲ್ಲೇಟು ಅಲ್ಲೇ ಕೂತಿದ್ದ ಪಕ್ಕದ ಮನೆಯ ಲಲಿತಮ್ಮಳ ತಲೆಗೆ ತಾಕಿ ಗಂಭೀರ ಗಾಯಗೊಂಡು ಸಾವನ್ನಪ್ಪಿದ್ದಾರೆ. ಇದರಿಂದ ಗಾಬರಿಗೊಂಡಿದ್ದ ಆರೋಪಿ ಪರಾರಿಯಾಗಿದ್ದನು.

ಆರೋಪಿ ಮಂಜುನಾಥ್​​

ಇದೀಗ ಪರಾರಿಯಾಗಿದ್ದ ಆರೋಪಿ ಮಂಜುನಾಥ್​ನನ್ನು ಜೆ.ಜೆ.ನಗರ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ABOUT THE AUTHOR

...view details