ಕರ್ನಾಟಕ

karnataka

ETV Bharat / city

ಅನುದಾನ ಕೊಟ್ಟು ಸರ್ಕಾರದ ಘನತೆ ಉಳಿಸಿಕೊಳ್ಳಬೇಕು: ಕರಾವಳಿ ಶಾಸಕರಿಂದ ಸಿಎಂಗೆ ಮನವಿ - Chief Minister BS Yeddyurappa

ಶಿಸ್ತಿನಿಂದ ಇರುತ್ತೇವೆ ಎಂಬ ಕಾರಣಕ್ಕೆ ಹಲವು ಬಾರಿ ನಮ್ಮನ್ನು ನಿರ್ಲಕ್ಷ್ಯ ಮಾಡಲಾಗಿದೆ. ಅನುದಾನ ಕೊಟ್ಟು ಸರ್ಕಾರದ ಘನತೆ, ಗೌರವ ಉಳಿಸಿಕೊಳ್ಳಿ ಎಂದು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಶಾಸಕರು ಸಿಎಂಗೆ ಒತ್ತಾಯಿಸಿದ್ದಾರೆ.

BS Yadiyurappa, Nalin kumar katil
ಬಿ.ಎಸ್​.ಯಡಿಯೂರಪ್ಪ, ನಳೀನ್​ ಕುಮಾರ್​ ಕಟೀಲ್​

By

Published : Jan 4, 2021, 9:57 PM IST

ಬೆಂಗಳೂರು:ಅನುದಾನ ಕೊಟ್ಟು ಸರ್ಕಾರದ ಘನತೆ ಉಳಿಸಿಕೊಳ್ಳಬೇಕು ಎಂದು ಕರಾವಳಿ ಭಾಗದ ಶಾಸಕರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದು, ನಮ್ಮನ್ನೆಲ್ಲಾ ನಿರ್ಲಕ್ಷ್ಯ ಮಾಡದಂತೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ...2023ರಿಂದ ಜೆಡಿಎಸ್ ಪರ್ವ ಪ್ರಾರಂಭ: ಭವಿಷ್ಯ ನುಡಿದ ಹೆಚ್​ಡಿಕೆ

ಕರಾವಳಿ ಭಾಗದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಶಾಸಕರ ಜೊತೆ ಕ್ಯಾಪಿಟಲ್ ಹೋಟೆಲ್​​ನಲ್ಲಿ ಸಿಎಂ ಸಮಾಲೋಚನೆ ನಡೆಸಿದರು. ಪಕ್ಷದ ರಾಜ್ಯಾಧ್ಯಕ್ಷ ನಳಿನ್​​ ಕುಮಾರ್ ಕಟೀಲ್ ಹಾಗೂ ಸಚಿವರ ಸಮ್ಮುಖದಲ್ಲಿ ಶಾಸಕರ ಅಹವಾಲು ಆಲಿಸಿದರು.

ಈ ವೇಳೆ ನಾವು ಕರಾವಳಿ ಭಾಗದವರು. ಯಾವತ್ತೂ ಸರ್ಕಾರಕ್ಕಾಗಲಿ, ಪಕ್ಷಕ್ಕಾಗಲಿ ಇರುಸು ಮುರುಸು ಉಂಟು ಮಾಡಿಲ್ಲ. ಶಿಸ್ತಿನಿಂದ ಇರುತ್ತೇವೆ ಎಂಬ ಕಾರಣಕ್ಕೆ ಹಲವು ಬಾರಿ ನಮ್ಮನ್ನು ನಿರ್ಲಕ್ಷ್ಯ ಮಾಡಲಾಗಿದೆ. ಆಡಳಿತ, ಅನುದಾನ ಎಲ್ಲಾ ವಿಷಯಗಳಲ್ಲೂ ಇದು ಆಗಿದೆ ಎಂದು ಹೇಳಿದ್ದಾರೆ.

ಸಮಾಲೋಚನೆ ಸಭೆ ಬಳಿಕ ಹೋಟೆಲ್​ನಿಂದ ಹೊರ ಬಂದ ಬಿಎಸ್​ವೈ

ಶಿಸ್ತಿನಿಂದ ಇರುತ್ತೇವೆ ಎಂದರೆ ಎಲ್ಲದಕ್ಕೂ ಸುಮ್ಮನೆ ಇರುತ್ತೇವೆ ಎಂದರ್ಥವಲ್ಲ. ನಮಗೆ ಪಾಲಿಸಿ ಮ್ಯಾಟರ್​ಗಳನ್ನು ಕೊಡಿ. ಕಾರ್ಯಕ್ರಮಗಳನ್ನು ಕೊಡಿ, ಅನುದಾನ ಕೊಟ್ಟು ಸರ್ಕಾರದ ಘನತೆ ಉಳಿಸಿಕೊಳ್ಳಿ ಎಂದು ಸಭೆಯಲ್ಲಿ ಮನವಿ ಮಾಡಿದರು. ಶಾಸಕರ ಮನವಿ ಒಪ್ಪಿಕೊಂಡ ಸಿಎಂ, ಎಲ್ಲವನ್ನೂ ಸರಿಪಡಿಸುವುದಾಗಿ ಭರವಸೆ ನೀಡಿದರು. ಏನೇ ಇದ್ದರೂ ನನ್ನನ್ನು ಸಂಪರ್ಕಿಸುವಂತೆ ಶಾಸಕರಿಗೆ ಸಿಎಂ ಸಲಹೆ ನೀಡಿದರು.

ABOUT THE AUTHOR

...view details