ಕರ್ನಾಟಕ

karnataka

ETV Bharat / city

ಪಿಎಸ್ಐ​ ಅಕ್ರಮ ನೇಮಕಾತಿ ಪ್ರಕರಣ: ಅಮೃತ್ ಪೌಲ್ ವಿಚಾರಣೆ - PSI scam

PSI recruitment scam.. ಪಿಎಸ್​ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಎಡಿಜಿ ಉಮೇಶ್ ಕುಮಾರ್ ಸಮ್ಮುಖದಲ್ಲಿ ಡಿವೈಎಸ್​ಪಿ ಶೇಖರ್ ಅವರು ಅಂದಿನ ನೇಮಕಾತಿ ಎಡಿಜಿಪಿ ಅಮ್ರಿತ್ ಪೌಲ್ ಅವರನ್ನ ವಿಚಾರಣೆ ನಡೆಸ್ತಿದ್ದಾರೆ‌.

ಅಮ್ರಿತ್ ಪೌಲ್
ಅಮ್ರಿತ್ ಪೌಲ್

By

Published : May 26, 2022, 2:01 PM IST

ಬೆಂಗಳೂರು: ಪಿಎಸ್​ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣ ಕೊನೆಗೂ ತಾರ್ಕಿಕ ಅಂತ್ಯ ಕಾಣುತ್ತಿದೆ. ಸಿಐಡಿಯ ತನಿಖಾಧಿಕಾರಿಗಳಿಂದ ಅಂದಿನ ನೇಮಕಾತಿ ಎಡಿಜಿಪಿಯಾಗಿದ್ದ ಅಮೃತ್​ ಪೌಲ್​ ಅವರ ವಿಚಾರಣೆ ನಡೆಸಲಾಗುತ್ತಿದೆ. ಈ ಹಿಂದೆ ಅಮೃತ್ ಪೌಲ್ ಆಪ್ತ ಅಧಿಕಾರಿ ಡಿವೈಎಸ್​ಪಿ ಶಾಂತರಾಜು ಅವರನ್ನ ಸಿಐಡಿ ಬಂಧಿಸಿತ್ತು. ಶಾಂತಕುಮಾರ್ ಹೇಳಿಕೆ ಮೇಲೆ ಸದ್ಯ ಆಂತರಿಕ ಭದ್ರತಾ ವಿಭಾಗದ ಎಡಿಜಿಪಿಯಾಗಿರುವ ಅಮೃತ್ ಪೌಲ್ ಅವರನ್ನ ವಿಚಾರಣೆ ನಡೆಸಲಾಗುತ್ತಿದೆ.

ಸಿಐಡಿ ಎಡಿಜಿ ಉಮೇಶ್ ಕುಮಾರ್ ಸಮ್ಮುಖದಲ್ಲಿ ಡಿವೈಎಸ್​ಪಿ ಶೇಖರ್ ಅವರು ಅಮೃತ್​ ಪೌಲ್ ವಿಚಾರಣೆ ನಡೆಸ್ತಿದ್ದಾರೆ‌. ನಿನ್ನೆ ಸಂಜೆ 4.30 ರಿಂದ ರಾತ್ರಿ 7 ಗಂಟೆವರೆಗೆ ವಿಚಾರಣೆ ನಡೆಸಿದ್ದ ಅಧಿಕಾರಿಗಳು ಮತ್ತೆ ಇಂದು ಬೆಳಗ್ಗೆ 11 ಗಂಟೆಯಿಂದ ಮತ್ತೆ ವಿಚಾರಣೆ ಮುಂದುವರೆಸಿದ್ದಾರೆ. ಕಳೆದ ವಾರ ಶಾಂತಕುಮಾರ್ ಬಂಧಿಸಿದ್ದ ಸಿಐಡಿ, ಸಾಕಷ್ಟು ಮಾಹಿತಿ ಕಲೆ ಹಾಕಿತ್ತು. ಕೆಲ‌ ಸಾಕ್ಷ್ಯಾಧಾರಗಳು ಸಿಕ್ಕ ಕಾರಣ ಎಡಿಜಿಪಿಯನ್ನು ವಿಚಾರಣೆ ನಡೆಸಲಾಗ್ತಿದೆ.

ಇದನ್ನೂ ಓದಿ:ಪಿಎಸ್ಐ ಪರೀಕ್ಷೆ ಅಕ್ರಮ : ಕಿಂಗ್​ಪಿನ್​​ ಆರ್.ಡಿ ಪಾಟೀಲ್ ಮತ್ತೆ ಸಿಐಡಿ ವಶಕ್ಕೆ!

ABOUT THE AUTHOR

...view details