ಕರ್ನಾಟಕ

karnataka

ETV Bharat / city

ಆ್ಯಂಬುಲೆನ್ಸ್ ಸುಗಮ ಸಂಚಾರ ವಿಚಾರ.. ಟೆಂಡರ್ ದಾಖಲೆಗಳನ್ನು ಕೇಳಿದ ಹೈಕೋರ್ಟ್ - ಆಂಬ್ಯುಲೆನ್ಸ್ ನಿರ್ವಹಣಾ ವ್ಯವಸ್ಥೆ’ ಟೆಂಡರ್

ಅಪಘಾತ ಅಥವಾ ರೋಗದಿಂದ ತೀವ್ರ ಹಾನಿಗೊಳದಾಗ ರೋಗಿಯನ್ನು ಉಳಿಸುವ ಗೋಲ್ಡನ್ ಅವಧಿಯಲ್ಲಿ ಸಂಚಾರ ದಟ್ಟಣೆ ಮಧ್ಯೆಯೂ ಸುಮಗವಾಗಿ ಸಾಗಿಸಲು ಸರ್ಕಾರ ‘ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಆ್ಯಂಬುಲೆನ್ಸ್ ನಿರ್ವಹಣಾ ವ್ಯವಸ್ಥೆ’ ಟೆಂಡರ್ ಕರೆದಿತ್ತು. ಆದರೆ, ಅಕ್ರಮ ಆರೋಪಗಳು ಕೇಳಿ ಬಂದ ಹಿನ್ನೆಲೆ ಟೆಂಡರ್ ರದ್ದುಪಡಿಸಿದೆ..

ಹೈಕೋರ್ಟ್
ಹೈಕೋರ್ಟ್

By

Published : Jan 11, 2021, 7:01 PM IST

ಬೆಂಗಳೂರು :ಸಂಚಾರ ದಟ್ಟಣೆ ಮಧ್ಯೆಯೂ ಆ್ಯಂಬುಲೆನ್ಸ್‌ಗಳ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲು ಕರೆಯಲಾಗಿದ್ದ ‘ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಆ್ಯಂಬುಲೆನ್ಸ್ ನಿರ್ವಹಣಾ ವ್ಯವಸ್ಥೆ ಟೆಂಡರ್ ರದ್ದುಪಡಿಸಿರುವುದಕ್ಕೆ ಅಚ್ಚರಿ ವ್ಯಕ್ತಪಡಿಸಿರುವ ಹೈಕೋರ್ಟ್, ಈ ಕುರಿತ ದಾಖಲೆಗಳನ್ನು ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ಆ್ಯಂಬುಲೆನ್ಸ್​ಗಳ ಸುಗಮ ಸಂಚಾರಕ್ಕೆ ಸಂಬಂಧಿಸಿದಂತೆ ಭಾರತ ಪುನರುತ್ಥಾನ ಟ್ರಸ್ಟ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಈ ವೇಳೆ ಸರ್ಕಾರದ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಆ್ಯಂಬುಲೆನ್ಸ್ ನಿರ್ವಹಣಾ ವ್ಯವಸ್ಥೆ ಜಾರಿಗೆ ಕರೆಯಲಾಗಿದ್ದ ಟೆಂಡರ್‌ನ ರದ್ದುಪಡಿಸಲಾಗಿದೆ. ಸದ್ಯದಲ್ಲೇ ಹೊಸ ಟೆಂಡರ್ ಕರೆಯಲಾಗುತ್ತದೆ ಎಂದು ತಿಳಿಸಿದರು.

ಇದಕ್ಕೆ ಅಚ್ಚರಿ ವ್ಯಕ್ತಪಡಿಸಿದ ಪೀಠ, ಈವರೆಗೂ ಪ್ರಕ್ರಿಯೆಯಲ್ಲಿದ್ದ ಟೆಂಡರ್‌ನ ರದ್ದುಪಡಿಸಲಾಗಿದೆ ಎನ್ನುತ್ತೀರಿ. ಯಾವ ಕಾರಣಕ್ಕಾಗಿ ಟೆಂಡರ್ ಪ್ರಕ್ರಿಯೆ ರದ್ದು ಮಾಡಿದ್ದೀರಿ ಎಂಬುದಕ್ಕೆ ವಿವರಣೆ ನೀಡಿ ಎಂದು ತಾಕೀತು ಮಾಡಿತು.

ಅಲ್ಲದೇ, ಟೆಂಡರ್ ಪ್ರಕ್ರಿಯೆಯ ಕಡತ ಹಾಗೂ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿ. ಅವುಗಳನ್ನು ನ್ಯಾಯಾಲಯ ಪರಿಶೀಲಿಸಲಿದೆ ಎಂದು ತಿಳಿಸಿ ವಿಚಾರಣೆ ಮುಂದೂಡಿತು.

ಅಪಘಾತ ಅಥವಾ ರೋಗದಿಂದ ತೀವ್ರ ಹಾನಿಗೊಳಗಾದಾಗ ರೋಗಿಯನ್ನು ಉಳಿಸುವ ಗೋಲ್ಡನ್ ಅವಧಿಯಲ್ಲಿ ಸಂಚಾರ ದಟ್ಟಣೆ ಮಧ್ಯೆಯೂ ಸುಮಗವಾಗಿ ಸಾಗಿಸಲು ಸರ್ಕಾರ ‘ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಆ್ಯಂಬುಲೆನ್ಸ್ ನಿರ್ವಹಣಾ ವ್ಯವಸ್ಥೆ’ ಟೆಂಡರ್ ಕರೆದಿತ್ತು. ಆದರೆ, ಅಕ್ರಮ ಆರೋಪಗಳು ಕೇಳಿ ಬಂದ ಹಿನ್ನೆಲೆ ಟೆಂಡರ್ ರದ್ದುಪಡಿಸಿದೆ.

ABOUT THE AUTHOR

...view details