ಕರ್ನಾಟಕ

karnataka

ETV Bharat / city

ವಿದ್ಯುತ್ ಚಿತಾಗಾರದ ಮುಂದೆ ಸೋಂಕಿತ ಮಹಿಳೆಯ ಶವ ಬಿಟ್ಟು ಹೋದ ಆ್ಯಂಬುಲೆನ್ಸ್ ಡ್ರೈವರ್! - Bangalore corona news

ಶಾಂತಿನಗರದ ಬಿಬಿಎಂಪಿ ವಿದ್ಯುತ್ ಚಿತಾಗಾರದ ಮುಂದೆ ಕೋವಿಡ್ ಸೋಂಕಿಗೆ ಬಲಿಯಾದ ಮಹಿಳೆಯ ಶವ ಬಿಟ್ಟು ಕಂಫರ್ಟ್ ಆಸ್ಪತ್ರೆ ಆ್ಯಂಬುಲೆನ್ಸ್ ಡ್ರೈವರ್ ಬಿಟ್ಟು ಹೋಗಿದ್ದಾರೆ. ನಂತರ ಕುಟುಂಬದವರು ಬೇರೆ ಆ್ಯಂಬುಲೆನ್ಸ್ ತರಿಸಿ ರಾತ್ರಿಯಿಡಿ ಅದರಲ್ಲೇ ಮೃತ ಮಹಿಳೆಯ ಶವ ಇರಿಸಿದ್ದಾರೆ. ಸದ್ಯ ಬಿಬಿಎಂಪಿ ಸಿಬ್ಬಂದಿ ಅಂತ್ಯ ಸಂಸ್ಕಾರ ನೆರವೇರಿಸಿದೆ.

corona
ಮಹಿಳೆಯ ಶವ ಬಿಟ್ಟು ಹೋದ ಆ್ಯಂಬುಲೆನ್ಸ್ ಡ್ರೈವರ್

By

Published : Jul 11, 2020, 1:14 PM IST

ಬೆಂಗಳೂರು:ವಿದ್ಯುತ್ ಚಿತಾಗಾರದ ಮುಂದೆ, ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ ಮಹಿಳೆಯ ಮೃತದೇಹ ಬಿಟ್ಟು ಹೋದ ಘಟನೆ ಬೆಂಗಳೂರಿನ ಶಾಂತಿನಗರದಲ್ಲಿ ನಡೆದಿದೆ.

ಶಾಂತಿನಗರದ ಬಿಬಿಎಂಪಿ ವಿದ್ಯುತ್ ಚಿತಾಗಾರದ ಮುಂದೆ ಕೋವಿಡ್ ಸೋಂಕಿನಿಂದ ಬಲಿಯಾದ ಮಹಿಳೆಯ ಶವವನ್ನು ಬಿಟ್ಟು ಕಂಫರ್ಟ್ ಆಸ್ಪತ್ರೆ ಆ್ಯಂಬುಲೆನ್ಸ್ ಡ್ರೈವರ್ ಬಿಟ್ಟು ಹೋಗಿದ್ದಾರೆ. ಸಿವಿ ರಾಮನ್ ನಗರದ ಕಂಫರ್ಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಾಂತಿನಗರದ 30 ವರ್ಷದ ಮಹಿಳೆ ನಿನ್ನೆ ಕೊರೊನಾಗೆ ಬಲಿಯಾಗಿದ್ದಾರೆ. ಚಿಕಿತ್ಸೆ ದೊರೆಯದೇ ಸಾವನ್ನಪ್ಪಿರುವ ಆರೋಪವೂ ಕೇಳಿ ಬಂದಿದೆ.

ಮಹಿಳೆಯ ಶವ ಬಿಟ್ಟು ಹೋದ ಆ್ಯಂಬುಲೆನ್ಸ್ ಡ್ರೈವರ್

ಆಸ್ಪತ್ರೆ ಆ್ಯಂಬುಲೆನ್ಸ್​ನಲ್ಲಿ ಶವ ಪರೀಕ್ಷೆಗಾಗಿ ಮಹಿಳೆಯ ಪಾರ್ಥಿವ ಶರೀರವನ್ನು ಕೊಂಡೊಯ್ಯುವುದಾಗಿ ತಿಳಿಸಿದ್ದರೆ, ನಂತರ ವಿದ್ಯುತ್ ಚಿತಾಗಾರದ ಮುಂದೆ ಬಿಟ್ಟು ಹೋಗಿದ್ದಾರೆ. ನಂತರ ಕುಟುಂಬದವರು ಬೇರೆ ಆ್ಯಂಬುಲೆನ್ಸ್ ತರಿಸಿ ರಾತ್ರಿಯಿಡೀ ಅದರಲ್ಲೇ ಮೃತ ಮಹಿಳೆಯ ಶವ ಇರಿಸಿದ್ದಾರೆ. ಇದೀಗ ಬಿಬಿಎಂಪಿ ಸಿಬ್ಬಂದಿ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.

ABOUT THE AUTHOR

...view details