ಬೆಂಗಳೂರು/ಹೈದರಾಬಾದ್:ಅಮೆಜಾನ್ ತನ್ನ ಪ್ಯಾಂಟ್ರಿ ಸ್ಟೋರ್ (Amazon Pantry Store) ಅನ್ನು 'ಅಮೆಜಾನ್ ಫ್ರೆಶ್'ನೊಂದಿಗೆ (Amazon fresh) ವಿಲೀನ ಮಾಡಿದೆ. ಇನ್ನು ಮುಂದೆ ಎಲ್ಲ ಬಗೆಯ ದಿನಸಿಗಳು ಅಮೆಜಾನ್ ಪ್ರೆಶ್ ಆನ್‌ಲೈನ್ ಸ್ಟೋರ್‌ನಡಿ (Amazon fresh online Store) ದೊರೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಈವರೆಗೂ ಅಮೆಜಾನ್ ಪ್ಯಾಂಟ್ರಿ ಹಾಗೂ ಅಮೆಜಾನ್ ಪ್ರೆಶ್ ಎರಡೂ ಸ್ಟೋರ್‌ಗಳು ಪ್ರತ್ಯೇಕವಾಗಿ ಕೆಲಸ ನಿರ್ವಹಿಸುತ್ತಿದ್ದವು. ಇದೀಗ ಪ್ಯಾಂಟ್ರಿ ಸ್ಟೋರ್ ಅನ್ನು ಅಮೆಜಾನ್ ಫ್ರೆಶ್ ಸ್ಟೋರ್‌ನಡಿ ವಿಲೀಗೊಳಿಸಲಾಗಿದೆ. ಹಣ್ಣು, ತರಕಾರಿ, ಮಾಂಸ, ಬೇಳೆ ಕಾಳು, ಸೌಂದರ್ಯ ವರ್ಧಕಗಳು, ವೈಯಕ್ತಿಕ ಆರೈಕೆ ಸೇರಿದಂತೆ ಎಲ್ಲವೂ ಅಮೆಜಾನ್ ಫ್ರೆಶ್‌ನಲ್ಲಿಯೇ ದೊರಕಲಿದೆ.
ಪ್ರಸ್ತುತ ಈ ವಿಲೀನವು ಬೆಂಗಳೂರು ಸೇರಿದಂತೆ ಭಾರತದ 300 ನಗರಗಳಲ್ಲಿ ಲಭ್ಯವಿರಲಿದೆ. ಅದರಲ್ಲೂ ಬೆಂಗಳೂರು ಸೇರಿದಂತೆ 14 ಮಹಾನಗರಗಳಲ್ಲಿ ಅಮೆಜಾನ್ ಪ್ರೆಶ್ ಮೂಲಕ ಆ ದಿನವೇ ಡೆಲಿವರಿ ಸೌಲಭ್ಯವನ್ನು (Home delivery service) ಪಡೆದುಕೊಳ್ಳಬಹುದು. ಉಳಿದ ನಗರಗಳು ಎರಡರಿಂದ ಮೂರು ದಿನಗಳ ಅವಧಿಯೊಳಗೆ ನೀವು ಆರ್ಡರ್ ಮಾಡಿದ ವಸ್ತುವು ನಿಮ್ಮ ಮನೆ ತಲುಪಲಿದೆ ಎಂದು ಸಂಸ್ಥೆ ಮಾಹಿತಿ ನೀಡಿದೆ.
ಕಳೆದ 18 ತಿಂಗಳಿನಿಂದ ಬಹಳಷ್ಟು ಗ್ರಾಹಕರು ಆನ್‌ಲೈನ್‌ನಲ್ಲಿಯೇ ದಿನಸಿಗಳನ್ನು ಖರೀದಿಸಲು ಆಸಕ್ತಿ (People buying groceries through online) ತೋರುತ್ತಿದ್ದಾರೆ. ಅಮೆಜಾನ್ ಇನ್‌ನಲ್ಲಿಯೇ (Amazon.in) ಶೇ.65ರಷ್ಟು ಜನರು ಗ್ರಾಸರಿ ಖರೀದಿಸಿದ್ದಾರೆ. ಅದರಲ್ಲೂ ಶೇ.85ರಷ್ಟು ಹೊಸಬರು ಅಮೆಜಾನ್ ಮೂಲಕ ಖರೀದಿಗೆ ಆಸಕ್ತಿ ತೋರಿಸಿರುವುದು ತಿಳಿದು ಬಂದಿದೆ. ಹೀಗಾಗಿ ಗ್ರಾಹಕರಿಗೆ ಇನ್ನಷ್ಟು ಅನುಕೂಲ ಮಾಡಿಕೊಡುವ ಉದ್ದೇಶದಿಂದ ಅಮೆಜಾನ್ ತನ್ನ ಪ್ಯಾಂಟ್ರಿ ಹಾಗೂ ಅಮೆಜಾನ್ ಫ್ರೆಶ್ ಎರಡನ್ನೂ ವಿಲೀನ ಮಾಡಲು ಯೋಜಿಸಿ, ಅದನ್ನು ಅನುಷ್ಟಾನಕ್ಕೆ ತರಲಾಗಿದೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.