ಕರ್ನಾಟಕ

karnataka

ETV Bharat / city

ಏಕಾಏಕಿ ಅಮೆಜಾನ್ ದಾಸ್ತಾನು ಸಂಗ್ರಾಹಣ ಮುಚ್ಚುವುದಕ್ಕೆ ಖಂಡನೆ : ಕಂಪನಿ ಮುಂದೆ ಕಾರ್ಮಿಕರ ಪ್ರತಿಭಟನೆ - ಮಂಡೂರು ‌ಸಮೀಪವಿರುವ ಡೆಲಿವೆರಿ ಪ್ರೈವೇಟ್ ಲಿಮಿಟೆಡ್​​

ಕಳೆದ 4 ತಿಂಗಳಿಂದ ಇಎಸ್​​ಐ, ಪಿಎಫ್ ಸರಿಯಾಗಿ ನೋಂದಣಿ ಮಾಡಿಲ್ಲ. ಈಗ ಏಕಾಏಕಿ ಕಂಪನಿ ಮುಚ್ಚಲು ಹುನ್ನಾರ ನಡೆಯುತ್ತಿದೆ. ಇದರ ಬಗ್ಗೆ ಮಾತನಾಡಿದವರನ್ನು ಕೆಲಸದಿಂದ ವಜಾ ಮಾಡುತ್ತಿದ್ದಾರೆ ಎಂದು ದೂರಿದರು. ಕಳೆದ ಐದಾರು ತಿಂಗಳಿಂದ ಹಂತ ಹಂತವಾಗಿ 8 ರಿಂದ 10 ಕಾರ್ಮಿಕರನ್ನು ಕೆಲಸದಿಂದ ಮನೆಗೆ ಕಳುಹಿಸುತ್ತಿದ್ದಾರೆ..

amazon employees protest in bengaluru news
ಕಂಪನಿ ಮುಂದೆ ಕಾರ್ಮಿಕರ ಪ್ರತಿಭಟನೆ

By

Published : Jan 8, 2021, 8:55 PM IST

ಮಹದೇವಪುರ :ಡೆಲಿವೆರಿ ಪ್ರೈವೇಟ್ ಲಿಮಿಟೆಡ್​​ನ ಅಮೆಜಾನ್ ದಾಸ್ತಾನು ‌‌ಸಂಗ್ರಾಹಣವನ್ನು ಏಕಾಏಕಿ ಮುಚ್ಚುತ್ತಿರುವುದನ್ನು ಖಂಡಿಸಿ ಇಂದು ನೂರಾರು ಕಾರ್ಮಿಕರು ಕಂಪನಿ ಮುಂದೆ ಪ್ರತಿಭಟನೆ ನಡೆಸಿದರು.

ಕಂಪನಿ ಮುಂದೆ ಕಾರ್ಮಿಕರ ಪ್ರತಿಭಟನೆ

ಓದಿ: ಉಜಿರೆ ಬಾಲಕನ ಅಪಹರಣ ಪ್ರಕರಣ: ಇನ್ನೋರ್ವ ಆರೋಪಿ ಬಂಧನ

ಮಹದೇವಪುರ ಕ್ಷೇತ್ರದ ಮಂಡೂರು ‌ಸಮೀಪವಿರುವ ಡೆಲಿವೆರಿ ಪ್ರೈವೇಟ್ ಲಿಮಿಟೆಡ್​​ನ ಅಮೆಜಾನ್ ದಾಸ್ತಾನು ಸಂಗ್ರಹಣಾ ಕಟ್ಟಡದಲ್ಲಿ ನೂರಕ್ಕೂ ಹೆಚ್ಚು ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಏಕಾಏಕಿ ಕಂಪನಿಯನ್ನು ಮುಚ್ಚುತ್ತಿರುವುದರಿಂದ ಕೊರೊನಾ ಸಂಧರ್ಭದಲ್ಲಿ ಕಾರ್ಮಿಕರ ಬದುಕು ಬೀದಿಗೆ ಬರಲಿದೆ ಎಂದು ಪ್ರತಿಭಟನಾಕಾರರು ದೂರಿದರು.

ಪ್ರತಿಭಟನೆ ಮಾಡುತ್ತಿರುವ ನೌಕರ ರಾಕೇಶ್ ಎಂಬುವರು ಮಾತನಾಡಿ, ಕಳೆದ ನಾಲ್ಕು-ಐದು ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ನಮಗೆ ಗುತ್ತಿಗೆದಾರರು ನಮ್ಮ ವೇತನವನ್ನು ಸರಿಯಾಗಿ ವಿತರಣೆ ಮಾಡುತ್ತಿಲ್ಲ. ವಿಪರೀತವಾದ ಕೆಲಸ, ಆದರೆ ವೇತನ ಕಡಿಮೆ ನೀಡುತ್ತಿದ್ದಾರೆ.

ಕಳೆದ 4 ತಿಂಗಳಿಂದ ಇಎಸ್​​ಐ, ಪಿಎಫ್ ಸರಿಯಾಗಿ ನೋಂದಣಿ ಮಾಡಿಲ್ಲ. ಈಗ ಏಕಾಏಕಿ ಕಂಪನಿ ಮುಚ್ಚಲು ಹುನ್ನಾರ ನಡೆಯುತ್ತಿದೆ. ಇದರ ಬಗ್ಗೆ ಮಾತನಾಡಿದವರನ್ನು ಕೆಲಸದಿಂದ ವಜಾ ಮಾಡುತ್ತಿದ್ದಾರೆ ಎಂದು ದೂರಿದರು. ಕಳೆದ ಐದಾರು ತಿಂಗಳಿಂದ ಹಂತ ಹಂತವಾಗಿ 8 ರಿಂದ 10 ಕಾರ್ಮಿಕರನ್ನು ಕೆಲಸದಿಂದ ಮನೆಗೆ ಕಳುಹಿಸುತ್ತಿದ್ದಾರೆ.

ಕೂಡಲೇ ನಮ್ಮನ್ನು ಕಂಪನಿಯ ನೌಕರರು ಎಂದು ಘೋಷಿಸುವ ಮೂಲಕ ಗುತ್ತಿಗೆದಾರರ ಶೋಷಣೆಯಿಂದ ತಪ್ಪಿಸಬೇಕು. ಕಂಪನಿ ಮುಚ್ಚುವುದೇ ಆದರೆ ನಮ್ಮಗೆ ಐದು ತಿಂಗಳ ಸಂಬಳವನ್ನು ನೀಡಬೇಕು. ಉದ್ದೇಶ ಪೂರ್ವಕವಾಗಿ ಕಾರ್ಮಿಕರನ್ನು ಕೆಲಸದಿಂದ ವಜಾಗೊಳಿಸಬಾರದೆಂದು ಕಂಪನಿಯ ಆಡಳಿತ ಮಂಡಳಿಯಿಂದ ಕಾರ್ಮಿಕರಿಗೆ ಲಿಖಿತ ರೂಪದಲ್ಲಿ ಬರೆದು ಭರವಸೆಯನ್ನು ನೀಡಬೇಕು, ಅಲ್ಲಿಯವರೆಗೂ ತಾವು ಕೆಲಸ ಮಾಡುವುದಿಲ್ಲ ಎಂದು ಕಾರ್ಮಿಕರು ಪಟ್ಟು ಹಿಡಿದು ಕುಳಿತಿದ್ದಾರೆ.

ABOUT THE AUTHOR

...view details