ಬೆಂಗಳೂರು: ನಮಗೂ ಸಭಾಪತಿ ಸ್ಥಾನ ಕೊಡಬೇಕು. ನಾವೇನೂ ಸನ್ಯಾಸಿಗಳಲ್ಲ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಹೇಳಿದ್ದಾರೆ.
ವಿಧಾನಸೌಧದಲ್ಲಿ ವಿಧಾನಪರಿಷತ್ನಲ್ಲಿ ಸಭಾಪತಿ ವಿರುದ್ಧ ಬಿಜೆಪಿ ಅವಿಶ್ವಾಸ ನಿರ್ಣಯ ಮಂಡನೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಅವಿಶ್ವಾಸ ನಿರ್ಣಯ ಮಂಡನೆಗೆ ನಮ್ಮ ಬೆಂಬಲವೂ ಇದೆ. ನಾವು ಸಹಿ ಹಾಕಿ ಇಟ್ಟುಕೊಂಡಿದ್ದೇವೆ. ವರಿಷ್ಠರು ಹೇಳಿದ ತಕ್ಷಣ ವಿಧಾನಪರಿಷತ್ ಕಾರ್ಯದರ್ಶಿಗೆ ಕೊಡುತ್ತೇವೆ. ಹೊರಟ್ಟಿ ಅವರು ಸಭಾಪತಿ ಆಗಬೇಕು ಅಂತಾ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ, ವಿಧಾಸಭೆಯ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಸ್ಪಷ್ಟತೆ ಇದೆ. ಸಭಾಪತಿ ಸ್ಥಾನ ಜೆಡಿಎಸ್ಗೆ ಸಿಗಲಿದೆ. ಈಗಾಗಲೇ ಹೆಚ್.ಡಿ. ದೇವೇಗೌಡರು ನನ್ನನ್ನು ಸಭಾಪತಿ ಮಾಡೋ ತೀರ್ಮಾನ ಮಾಡಿದ್ದಾರೆ. ಈ ವಿಚಾರ ನನ್ನ ಬಳಿ ಚರ್ಚೆ ಮಾಡಿಯೇ ತೀರ್ಮಾನ ಆಗಬೇಕಿದೆ ಎಂದರು.
ಬಿಜೆಪಿಯಲ್ಲೂ ಸಭಾಪತಿ ಸ್ಥಾನಕ್ಕೆ ಆಕಾಂಕ್ಷಿಗಳಿರಬಹುದು. ನಾವೇನು ರಾಜಕೀಯ ಸನ್ಯಾಸಿಗಳಲ್ಲ. ಸಭಾಪತಿ ವಿಚಾರವನ್ನ ದೇವೇಗೌಡ, ಕುಮಾರಸ್ವಾಮಿ ಅವರು ತೀರ್ಮಾನ ಮಾಡ್ತಾರೆ. ಜೆಡಿಎಸ್ನಲ್ಲಿ 13 ಸದಸ್ಯರಿದ್ದಾರೆ ಎಂದರು.
ಜನತಾ ಪರಿವಾರ ಒಗ್ಗೂಡಿಸಲು ಮುಂದಾಗಿದ್ದೇವೆ:ಜನತಾ ಪರಿವಾರ ಒಗ್ಗೂಡಿಸಲು ಮುಂದಾಗಿದ್ದೇವೆ. ಮಧು ಬಂಗಾರಪ್ಪ ಮನವೊಲಿಕೆ ಮಾಡ್ತೇವೆ. ಅದೇ ರೀತಿ ಜಿ.ಟಿ. ದೇವೇಗೌಡರನ್ನೂ ಭೇಟಿ ಮಾಡ್ತೇವೆ. ಗುಬ್ಬಿ ಶ್ರೀನಿವಾಸ್ ಸೇರಿ ಯಾರ್ಯಾರು ಅಸಮಧಾನಿತರಿದ್ದಾರೋ ಅವರೆಲ್ಲರ ಮನವೊಲಿಸುತ್ತೇವೆ ಎಂದು ಹೊರಟ್ಟಿ ಹೇಳಿದರು.