ಕರ್ನಾಟಕ

karnataka

ಹಣ ವಸೂಲಿ ಆರೋಪ : ಪ್ರತಿಷ್ಠಿತ ಖಾಸಗಿ ಆಸ್ಪತ್ರೆ ವಿರುದ್ಧ ವೃದ್ಧನಿಂದ ದೂರು

ಪೂಲಾ ಪ್ರಕಾರ, ಕೋವಿಡ್ -19 ಪಾಸಿಟಿವ್ ಪರೀಕ್ಷೆ ನಡೆಸಿದ ನಂತರ ಮಗ ಯಶ್ವಂತ್​ನನ್ನು ಮೇ 8ರಂದು ಆಸ್ಪತ್ರೆಗೆ ದಾಖಲಿಸಲಾಯಿತು. ಜೂನ್ 6 ರಂದು ಡಿಸ್ಚಾರ್ಜ್ ಮಾಡಲಾಯಿತು. ಆದ್ರೆ, ಯಶ್ವಂತ್​​ ಜೂನ್ 17ರಂದು ನಿಧನರಾದರು. ನನ್ನ ಮಗನನ್ನ ಡಿಸ್ಚಾರ್ಜ್ ಮಾಡುವಾಗ, ಆಸ್ಪತ್ರೆ 15,39,999 ರೂ. ಬಿಲ್ ಮಾಡಿತ್ತು. ನಾನು ಪೂರ್ಣ ಮೊತ್ತವನ್ನು ಪಾವತಿಸಿದ್ದೇನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ..

By

Published : Jul 6, 2021, 7:58 PM IST

Published : Jul 6, 2021, 7:58 PM IST

trinity-central-hospital
ಖಾಸಗಿ ಆಸ್ಪತ್ರೆ ವಿರುದ್ಧ ದೂರು

ಬೆಂಗಳೂರು :ಕೋವಿಡ್-19 ಸೋಂಕಿನಿಂದ ಬಳಲುತ್ತಿದ್ದ ಮಗನ ಚಿಕಿತ್ಸೆಗೆ ಮೂರು ಪಟ್ಟು ಅಧಿಕ ಶುಲ್ಕ ವಿಧಿಸಿರುವುದಾಗಿ ಆರೋಪಿಸಿ 63 ವರ್ಷದ ವೃದ್ಧರೊಬ್ಬರು ನಗರದ ಶೇಷಾದ್ರಿಪುರಂನ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯೊಂದರ ವಿರುದ್ಧ ಕ್ರಿಮಿನಲ್ ಕೇಸ್​​​ ದಾಖಲಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ಆಸ್ಪತ್ರೆಯನ್ನು ಸ್ವಸ್ತಿಕ್ ವೃತ್ತದ ಬಳಿಯ ಇರುವ ಎಸ್‌ಸಿ ರಸ್ತೆಯ ಟ್ರಿನಿಟಿ ಸೆಂಟ್ರಲ್ ಆಸ್ಪತ್ರೆ ಎಂದು ಗುರುತಿಸಲಾಗಿದೆ. ನಗರದ ಕೋತನೂರ್ ನಿವಾಸಿ ನಿವೃತ್ತ ಖಾಸಗಿ ಕಂಪನಿಯ ಉದ್ಯೋಗಿ ದೂರುದಾರ ನಾರಾಯಣಸ್ವಾಮಿ ಪೂಲಾ ಎನ್ನುವರು ತಮ್ಮ ಮಗನಾದ ಯಶ್ವಂತ್​ಗೆ ಸುಮಾರು ಒಂದು ತಿಂಗಳ ಕಾಲ ಚಿಕಿತ್ಸೆ ನೀಡಿದ್ದಕ್ಕೆ ಆಸ್ಪತ್ರೆ 15.3 ಲಕ್ಷ ರೂ. ಚಾರ್ಜ್ ಮಾಡಿದೆ ಎಂದು ದೂರಿದ್ದಾರೆ.

ಪೂಲಾ ಪ್ರಕಾರ, ಕೋವಿಡ್ -19 ಪಾಸಿಟಿವ್ ಪರೀಕ್ಷೆ ನಡೆಸಿದ ನಂತರ ಮಗ ಯಶ್ವಂತ್​ನನ್ನು ಮೇ 8ರಂದು ಆಸ್ಪತ್ರೆಗೆ ದಾಖಲಿಸಲಾಯಿತು. ಜೂನ್ 6 ರಂದು ಡಿಸ್ಚಾರ್ಜ್ ಮಾಡಲಾಯಿತು. ಆದ್ರೆ, ಯಶ್ವಂತ್​​ ಜೂನ್ 17ರಂದು ನಿಧನರಾದರು. ನನ್ನ ಮಗನನ್ನ ಡಿಸ್ಚಾರ್ಜ್ ಮಾಡುವಾಗ, ಆಸ್ಪತ್ರೆ 15,39,999 ರೂ. ಬಿಲ್ ಮಾಡಿತ್ತು. ನಾನು ಪೂರ್ಣ ಮೊತ್ತವನ್ನು ಪಾವತಿಸಿದ್ದೇನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಲು ಸರ್ಕಾರ ನಿಗದಿಪಡಿಸಿದ ಆಸ್ಪತ್ರೆಯ ಬೆಲೆಗೆ ಹೋಲಿಸಿದರೆ, ಅತಿ ಹೆಚ್ಚು ಬಿಲ್ ವಿಧಿಸಲಾಗಿದೆ. ಸರ್ಕಾರದ ದರ ಲೆಕ್ಕಾಚಾರದ ಪ್ರಕಾರ, ಬಿಲ್ 4,35,000 ರೂ. ಆಗಬೇಕಿತ್ತು. ಆದರೆ, 15,39,999 ರೂ.ಗಳ ಬಿಲ್ ಸ್ವೀಕರಿಸುವ ಮೂಲಕ ಆಸ್ಪತ್ರೆಯ ನಿರ್ವಹಣೆ ಶುಲ್ಕ ಉಲ್ಲಂಘಿಸಿದೆ. ದಯವಿಟ್ಟು ಸಂಬಂಧಪಟ್ಟ ಆಸ್ಪತ್ರೆಯ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಗಳನ್ನು ಜರುಗಿಸಿ ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.

ಪೂಲಾ ಅವರ ದೂರಿನ ಆಧಾರದ ಮೇಲೆ, ಪೊಲೀಸರು 2005ರ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ (ಎನ್‌ಡಿಎಂಎ) ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 420(ಮೋಸ ಮತ್ತು ಅಪ್ರಾಮಾಣಿಕವಾಗಿ ಆಸ್ತಿ ವಿತರಣೆ) ಅಡಿಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಅಗತ್ಯ ದಾಖಲೆಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ABOUT THE AUTHOR

...view details