ಕರ್ನಾಟಕ

karnataka

ETV Bharat / city

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ 150 ಸ್ಥಾನ ಗಳಿಸಿಕೊಡಲು ನಾಯಕರೆಲ್ಲಾ ಒಗ್ಗಟ್ಟಾಗಿ ಶ್ರಮಿಸಿ : ರಾಹುಲ್ ಗಾಂಧಿ - Congress leader Rahul Gandhi

ಪಕ್ಷ ನಿಷ್ಠೆಯನ್ನು ಮೊದಲು ಪರಿಗಣಿಸಿ, ಅವರು ರಾಜಕೀಯ, ಕಾಂಗ್ರೆಸ್ ಪಕ್ಷದಲ್ಲಿ ಎಷ್ಟು ಸಮಯದಿಂದ ಇದ್ದಾರೆ ಎನ್ನುವುದು ಮುಖ್ಯವಲ್ಲ. ಅದರಿಂದ ನಾವು ಈಗಲೇ ಅಭ್ಯರ್ಥಿ ಆಯ್ಕೆಗೆ ನಿಯಮಾವಳಿ ರೂಪಿಸಿಕೊಳ್ಳಬೇಕು. ಬದ್ಧತೆ, ಪಕ್ಷ ಸಂಘಟನೆಗೆ ಕಾರ್ಯ ಕೈಗೊಳ್ಳುವವರಿಗೆ ಅವಕಾಶ ನೀಡುವಂತೆ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಕರೆ ನೀಡಿದರು..

Rahul Gandhi meeting with congress leaders of city
ಕಾಂಗ್ರೆಸ್​ ಮುಖಂಡರ ಜೊತೆ ರಾಹುಲ್​ ಗಾಂಧಿ ಸಭೆ

By

Published : Apr 1, 2022, 2:30 PM IST

ಬೆಂಗಳೂರು :ಕರ್ನಾಟಕ ನೈಜವಾಗಿ‌ ಕಾಂಗ್ರೆಸ್ ರಾಜ್ಯವಾಗಿದೆ. ಈಗ ಇಲ್ಲಿ ಭ್ರಷ್ಟ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ನಾವು 150 ಸ್ಥಾನಗಳನ್ನು ಗಳಿಸುವ ಗುರಿಯಲ್ಲಿ ಸಾಗಬೇಕು. ಮಾರ್ಜಿನ್ ಸ್ಥಾನಗಳ ನಿರೀಕ್ಷೆ ಬೇಡ. ಅದಕ್ಕಾಗಿ ಯಾವ ರೀತಿ ಜನರ ಬಳಿ ಹೋಗಬೇಕು. ಅವರ ಆಸೆ, ಅಗತ್ಯವನ್ನು ಅರಿಯುವ ಕಾರ್ಯ ಮಾಡಿ ಎಂದು ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಅಭಿಪ್ರಾಯಪಟ್ಟರು.

ಕಾಂಗ್ರೆಸ್​ ಮುಖಂಡರ ಜೊತೆ ರಾಹುಲ್​ ಗಾಂಧಿ ಸಭೆ

ನಗರ ಕಾಂಗ್ರೆಸ್​ ಮುಖಂಡರ ಜೊತೆ ಸಭೆ ನಡೆಸಿದ ಅವರು, ಪಕ್ಷ ಸಂಘಟನೆಯಲ್ಲಿ ಯಾರು ತೊಡಗಿದ್ದಾರೆ, ಯಾರು ತೊಡಗಿಲ್ಲ ಅನ್ನುವುದು ಅರಿವಾಗುತ್ತದೆ. ಹುಡುಕುವುದು ಬಹಳ ಸುಲಭ. ಪಕ್ಷ ನಿಷ್ಠೆಯನ್ನು ಮೊದಲು ಪರಿಗಣಿಸಿ, ಅವರು ರಾಜಕೀಯ, ಕಾಂಗ್ರೆಸ್ ಪಕ್ಷದಲ್ಲಿ ಎಷ್ಟು ಸಮಯದಿಂದ ಇದ್ದಾರೆ ಎನ್ನುವುದು ಮುಖ್ಯವಲ್ಲ. ಅದರಿಂದ ನಾವು ಈಗಲೇ ಅಭ್ಯರ್ಥಿ ಆಯ್ಕೆಗೆ ನಿಯಮಾವಳಿ ರೂಪಿಸಿಕೊಳ್ಳಬೇಕು. ಬದ್ಧತೆ, ಪಕ್ಷ ಸಂಘಟನೆಗೆ ಕಾರ್ಯ ಕೈಗೊಳ್ಳುವವರಿಗೆ ಅವಕಾಶ ನೀಡಬೇಕು. 150ಕ್ಕಿಂತ ಒಂದು ಸ್ಥಾನ ಸಹ ಕಡಿಮೆ ಬಾರದಂತೆ ನೋಡಿಕೊಳ್ಳಬೇಕು ಎಂದರು.

ಜನರಿಗೆ ಉದ್ಯೋಗ ಇಲ್ಲ. ನಿರುದ್ಯೋಗ ಸಮಸ್ಯೆಯಿಂದ ದೇಶದ ಅರ್ಥವ್ಯವಸ್ಥೆ ದುರ್ಬಲವಾಗಿದೆ. ತಪ್ಪು ಜಿಎಸ್ಟಿ, ನೋಟು ಅಮಾನ್ಯೀಕರಣ, ಸಣ್ಣ ಉದ್ಯಮಿಗಳ ಬಲ ಕಡಿಮೆ ಆಗಿರುವುದು ಸಮಸ್ಯೆಗೆ ಕಾರಣವಾಗಿದೆ. ಯಾವುದೇ ಉದ್ಯಮಿ ಉದ್ಯೋಗ ನೀಡಲು ಸಾಧ್ಯವಾಗುತ್ತಿಲ್ಲ. ಮುಂದೆ ಸಹ ಇವರು ದುರ್ಬಲವಾಗುತ್ತಾ ಸಾಗುತ್ತಾರೆ ಎಂದು ಹೇಳಿದರು.

ಹಿಂದೆ ನರೇಂದ್ರ ಮೋದಿ ಮೊದಲು ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತಿದ್ದರು. ಆದರೆ, ಇಲ್ಲಿ ದೇಶದಲ್ಲೇ ದೊಡ್ಡ ಭ್ರಷ್ಟ ಸರ್ಕಾರ ಇದೆ. 40% ಸರ್ಕಾರ ಇದೆ. ವೇದಿಕೆ ಮೇಲೆ ಭ್ರಷ್ಟಾಚಾರದ ಮಾತನ್ನಾಡಿದರೆ ಜನ ನಗುತ್ತಾರೆ. ಬಿಜೆಪಿ ಭ್ರಷ್ಟಾಚಾರ, ಬೆಲೆ ಏರಿಕೆ, ಜನಪರ ವಿಚಾರಗಳ ಮಾತನಾಡುವ ಶಕ್ತಿ ಹೊಂದಿಲ್ಲ. ಧರ್ಮ, ಜಾತಿಗಳ ನಡುವೆ ಗಲಾಟೆ ತಂದಿಟ್ಟು ಲಾಭ ಪಡೆಯಲು ಯತ್ನಿಸುತ್ತಿದೆ. ಈ ಸಂದರ್ಭ ನಮ್ಮ ಜವಾಬ್ದಾರಿ ಅರಿಯಬೇಕಿದೆ. ಉದ್ಯೋಗ, ಆರ್ಥಿಕ ಸ್ಥಿತಿ ಸುಧಾರಿಸುವುದಾಗಿದೆ. ಒಡೆಯುವುದು ಅವರ ಕಾರ್ಯ, ನಾವು ಜೋಡಿಸುವ ಕಾರ್ಯ ಮಾಡಬೇಕು ಎಂದರು.

ಇದನ್ನೂ ಓದಿ:ಬೆಂಗಳೂರು ನಗರ ಕಾಂಗ್ರೆಸ್ ಮುಖಂಡರ ಜೊತೆ ರಾಹುಲ್ ಗಾಂಧಿ ಸಭೆ

ರಾಜ್ಯದಲ್ಲಿ 70 ಲಕ್ಷ ಸದಸ್ಯತ್ವ ನೋಂದಣಿ ಮಾಡಿಸಿದ್ದಾರೆ. ಇದು ಸಣ್ಣ ವಿಚಾರವಲ್ಲ. ಬಿಜೆಪಿಯ ಸುಳ್ಳನ್ನು ಜನರ ಮುಂದಿಡಬೇಕು. ರಾಜ್ಯ ಹಾಗೂ ರಾಷ್ಟ್ರದಲ್ಲಿ ನಮ್ಮ ಸರ್ಕಾರ ಇದ್ದಾಗ ಮಾಡಿದ ಸಾಧನೆ ದೊಡ್ಡದಿದೆ. ಇಂದು ನಾವು ಅದನ್ನು ಜನರಿಗೆ ತಿಳಿಸಬೇಕಿದೆ. ಇದಕ್ಕೆ ರಾಜ್ಯದಲ್ಲಿ ಒಟ್ಟಾಗಿ ಶ್ರಮಿಸಿ 150 ಸ್ಥಾನ ಗೆಲ್ಲಿಸಿಕೊಂಡು ಬನ್ನಿ. ನೀವು ಯಾವಾಗ ಬೇಕಾದರೂ ಕರೆಯಿರಿ ರಾಜ್ಯದ ಯಾವುದೇ ಮೂಲೆಗೆ ಬರಲು ಸಿದ್ಧ. ನಮ್ಮ ಸರ್ಕಾರ ರಾಜ್ಯದಲ್ಲಿ ಬರಬೇಕಿದೆ. ಕರ್ನಾಟಕವನ್ನು ಮತ್ತೊಮ್ಮೆ ಸರಿದಾರಿಗೆ ತರಬೇಕೆಂದು ಸಲಹೆ ಇತ್ತರು.

ABOUT THE AUTHOR

...view details