ಕರ್ನಾಟಕ

karnataka

ETV Bharat / city

ನಾಳೆಯೇ ನಿಮ್ಮ ಬ್ಯಾಂಕಿಂಗ್​ ಕೆಲಸ ಮುಗಿಸಿಕೊಳ್ಳಿ: ಯಾಕಂದ್ರೆ? - ಬ್ಯಾಂಕ್ ನೌಕರರ ಮುಷ್ಕರ ಸುದ್ದಿ

ಇದೇ ಮಂಗಳವಾರ ಬ್ಯಾಂಕ್ ನೌಕರರು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದು, ಬೃಹತ್ ಮಟ್ಟದಲ್ಲಿ ಪ್ರತಿಭಟನೆಗೆ ಸಜ್ಜಾಗಿದ್ದಾರೆ.‌ ಹೀಗಾಗಿ ಬ್ಯಾಂಕ್ ಕೆಲಸಗಳು ಇದ್ದಲ್ಲಿ ನಾಳೆಯೇ ಮುಗಿಸಿಕೊಳ್ಳಿ. ಯಾಕೆಂದರೆ ಅಕ್ಟೋಬರ್‌ 22 ರಂದು ಬ್ಯಾಂಕ್ ಸೇವೆ ಸ್ತಬ್ಧವಾಗಲಿದೆ.

ಅಕ್ಟೋಬರ್‌ 22 ರಂದು ಬ್ಯಾಂಕ್ ಸೇವೆ ಸ್ಥಗಿತ

By

Published : Oct 20, 2019, 7:02 PM IST

ಬೆಂಗಳೂರು: ಬ್ಯಾಂಕ್‌ಗಳ ವಿಲೀನಕ್ಕೆ ವಿರೋಧ ಹಾಗೂ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ದೇಶಾದ್ಯಂತ ಮುಷ್ಕರಕ್ಕೆ ಬ್ಯಾಂಕ್ ನೌಕರರು ಮುಂದಾಗಿದ್ದಾರೆ.

KPBEF ಹಾಗೂ BEFI ಸಂಘದಿಂದ ಮುಷ್ಕರಕ್ಕೆ ಕರೆ ನೀಡಲಾಗಿದ್ದು, ಇದೇ ಮಂಗಳವಾರ ಅಂದರೆ ಅಕ್ಟೋಬರ್‌ 22ರಂದು ಬ್ಯಾಂಕ್ ನೌಕರರು ಮುಷ್ಕರಕ್ಕೆ ಇಳಿಯಲಿದ್ದಾರೆ.‌

ಬೆಳಗ್ಗೆ 6 ರಿಂದ ಸಂಜೆ 6 ರವರೆಗೂ ಬ್ಯಾಂಕ್​ ಸೇವೆಗಳು ಸ್ಥಗಿತವಾಗಲಿದ್ದು, ಕರ್ನಾಟಕದಲ್ಲೂ ಮುಷ್ಕರಕ್ಕೆ ಬೆಂಬಲ ನೀಡಲಾಗುತ್ತಿದೆ.‌ ಎಸ್‌ಬಿಐ, ಕೆನರಾ, ಕಾರ್ಪೋರೇಷನ್ ಬ್ಯಾಂಕ್​ ಸೇರಿದಂತೆ ಹಲವು ಬ್ಯಾಂಕ್‌ಗಳ ನೌಕರರಿಂದ ಬೆಂಬಲ ವ್ಯಕ್ತವಾಗಿದೆ. ಬೆಂಗಳೂರಲ್ಲೂ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಸಲು ನೌಕರರು ಸಜ್ಜಾಗಿದ್ದಾರೆ.

ಅಕ್ಟೋಬರ್‌ 22 ರಂದು ಬ್ಯಾಂಕ್ ಸೇವೆ ಸ್ಥಗಿತ

ಕಳೆದ ತಿಂಗಳು ಸಹ ಮುಷ್ಕರಕ್ಕೆ ನೌಕರರು ಕರೆ ನೀಡಿದ್ದರು. ಆದರೆ ಕಾರಣಾಂತರಗಳಿಂದ ಪ್ರತಿಭಟನೆ ನಡೆಸಲಿಲ್ಲ. ಈ ಹಿನ್ನೆಲೆಯಲ್ಲಿ ಬರುವ ಮಂಗಳವಾರ ಮತ್ತೆ ಮುಷ್ಕರಕ್ಕೆ ಕರೆ ನೀಡಿದ್ದು, ಬೃಹತ್ ಮಟ್ಟದಲ್ಲಿ ಪ್ರತಿಭಟನೆಗೆ ಸಜ್ಜಾಗಿದ್ದಾರೆ.‌ ಹೀಗಾಗಿ ಬ್ಯಾಂಕ್ ಕೆಲಸಗಳು ಇದ್ದಲ್ಲಿ ನಾಳೆಯೇ ಮುಗಿಸಿಕೊಳ್ಳಿ.

ABOUT THE AUTHOR

...view details