ಕರ್ನಾಟಕ

karnataka

ETV Bharat / city

ನನ್ನ ಮುಂದೆ ಇರುವುದು ಪಕ್ಷದ ಶಕ್ತಿ ಉಳಿಸು ಯೋಜನೆ ಮಾತ್ರ: ಹೆಚ್​.ಡಿ. ದೇವೇಗೌಡ - ಪ್ರಧಾನಿಯಾಗಿ 25 ವರ್ಷ

ಜುಲೈ ನಂತರ ಸದಸ್ಯತ್ವ ಅಭಿಯಾನ ಮಾಡುತ್ತೇವೆ. ಸಾಮೂಹಿಕ ನಾಯಕತ್ವಕ್ಕೆ‌ ಹೆಚ್ಚಿನ ಒತ್ತು ಕೊಡುತ್ತೇವೆ.‌ ಇದು ನನ್ನ ರಾಜಕೀಯ ಜೀವನದ ಉದ್ದೇಶ. ಪಕ್ಷದಲ್ಲಿ ಸಮರ್ಥ ನಾಯಕರಿದ್ದಾರೆ. ಅವರನ್ನು ಹೇಗೆ ಬಳಸಿಕೊಳ್ಳಬೇಕೆಂಬ ಬಗ್ಗೆ ನಿರ್ಧರಿಸುತ್ತೇವೆ. ಪಕ್ಷ ಬಿಟ್ಟು ಹೋದವರ ಬಗ್ಗೆ ನಾನು ಮಾತನಾಡಲ್ಲ. ತಾಲೂಕು ಮಟ್ಟದಿಂದ ರಾಜ್ಯಮಟ್ಟದವರೆಗೆ ಬಲಗೊಳಿಸುತ್ತೇವೆ..

all-i-have-to-save-party-energy-former-pm-devegowda-said
ಹೆಚ್​ಡಿ ದೇವೇಗೌಡ

By

Published : Jun 1, 2021, 10:27 PM IST

ಬೆಂಗಳೂರು : ಎರಡು ರಾಷ್ಟ್ರೀಯ ಪಕ್ಷಗಳ ಮಧ್ಯೆ ನಾವು ಬೆಳೆಯುವ ಆತ್ಮವಿಶ್ವಾಸವಿದೆ. ಅದಕ್ಕೆ ಸಾಮೂಹಿಕ ನಾಯಕತ್ವದಲ್ಲೇ ಹೋಗುತ್ತೇವೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರು ತಿಳಿಸಿದ್ದಾರೆ.

ದೇಶದ ಪ್ರಧಾನಿ ಹುದ್ದೆಗೇರಿ ಇಂದಿಗೆ 25 ವರ್ಷವಾದ ಹಿನ್ನೆಲೆ ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಸಂಜೆ ಸುದ್ದಿಗೋಷ್ಠಿ ನಡೆಸಿ ತಮ್ಮ ಮುಂದಿನ ಕಾರ್ಯಸೂಚಿ ಕುರಿತು ಮಾಹಿತಿ ನೀಡಿದರು. ನನ್ನ ಮುಂದೆ ಇರುವುದು ಪಕ್ಷದ ಶಕ್ತಿ ಉಳಿಸುವ ಯೋಜನೆ ಮಾತ್ರ. ಮುಖಂಡರನ್ನು ಒಟ್ಟಾಗಿ ಸೇರಿಸಿ ಶಕ್ತಿ‌ ತುಂಬುತ್ತೇನೆ‌.

ಆ ನಿರ್ಣಯವನ್ನು ಇವತ್ತು ಮಾಡುತ್ತೇನೆ. ನಮ್ಮದು ಪ್ರಾದೇಶಿಕ ಪಕ್ಷ. ಎರಡು ರಾಷ್ಟ್ರೀಯ ಪಕ್ಷಗಳ ಮಧ್ಯೆ ನಾವು ಬೆಳೆಯಬೇಕಿದೆ. ಅವರ ಆರ್ಥಿಕ ಶಕ್ತಿಯ ಬಗ್ಗೆ ನಾನು ವಿಮರ್ಶಿಸಲ್ಲ. ಪ್ರತಿಯೊಂದು ಪಕ್ಷ ಶಕ್ತಿ‌ ಹೆಚ್ಚಿಸಿಕೊಳ್ಳಬೇಕು.

ಎರಡು ತಿಂಗಳಲ್ಲಿ ಹೊಸ ರೂಪರೇಷೆ ಮಾಡ್ತೇವೆ. ಯುವ ಕಾರ್ಯಕರ್ತರನ್ನೂ ಒಟ್ಟುಗೂಡಿಸುತ್ತೇವೆ. ಸಾಮೂಹಿಕ ನಾಯಕತ್ವದ ಬಗ್ಗೆ ಕುಮಾರಸ್ವಾಮಿ ಅವರ ಜೊತೆ ಚರ್ಚಿಸುತ್ತೇನೆ ಎಂದು ತಿಳಿಸಿದರು.

ನನ್ನ ಮುಂದೆ ಇರುವುದು ಪಕ್ಷದ ಶಕ್ತಿ ಉಳಿಸು ಯೋಜನೆ ಮಾತ್ರ

ಘಟಕಗಳ ಬದಲಾವಣೆ : ಪಕ್ಷದಲ್ಲಿರುವ ವಿವಿಧ ಹಳೆಯ ಘಟಕಗಳನ್ನು ಜೂನ್, ಜುಲೈನಲ್ಲಿ ಬದಲಾವಣೆ ಮಾಡುತ್ತೇವೆ. ಪ್ರತಿ ತಾಲೂಕು, ಜಿಲ್ಲಾ ಘಟಕ ಬಲಗೊಳಿಸುತ್ತೇವೆ. ರಾಜ್ಯ ಘಟಕವನ್ನೂ ಬಲಗೊಳಿಸುತ್ತೇವೆ. ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಜೊತೆ ಚರ್ಚಿಸುತ್ತೇನೆ ಎಂದು ಹೇಳಿದರು.

ಸದಸ್ಯತ್ವ ಅಭಿಯಾನ : ಜುಲೈ ನಂತರ ಸದಸ್ಯತ್ವ ಅಭಿಯಾನ ಮಾಡುತ್ತೇವೆ. ಸಾಮೂಹಿಕ ನಾಯಕತ್ವಕ್ಕೆ‌ ಹೆಚ್ಚಿನ ಒತ್ತು ಕೊಡುತ್ತೇವೆ.‌ ಇದು ನನ್ನ ರಾಜಕೀಯ ಜೀವನದ ಉದ್ದೇಶ. ಪಕ್ಷದಲ್ಲಿ ಸಮರ್ಥ ನಾಯಕರಿದ್ದಾರೆ. ಅವರನ್ನು ಹೇಗೆ ಬಳಸಿಕೊಳ್ಳಬೇಕೆಂಬ ಬಗ್ಗೆ ನಿರ್ಧರಿಸುತ್ತೇವೆ. ಪಕ್ಷ ಬಿಟ್ಟು ಹೋದವರ ಬಗ್ಗೆ ನಾನು ಮಾತನಾಡಲ್ಲ. ತಾಲೂಕು ಮಟ್ಟದಿಂದ ರಾಜ್ಯಮಟ್ಟದವರೆಗೆ ಬಲಗೊಳಿಸುತ್ತೇವೆ. ಯಾರು ಪ್ರಾಮಾಣಿಕರಿದ್ದಾರೆ ಅವರಿಗೆ ಅವಕಾಶ ಕೊಡುತ್ತೇವೆ. ಕುಮಾರಸ್ವಾಮಿ ನಾಯಕತ್ವದಲ್ಲಿ ಶಕ್ತಿ ತುಂಬುತ್ತೇನೆ ಎಂದು ಅವರು ತಿಳಿಸಿದರು‌.

ಮಾಧ್ಯಮ, ಪತ್ರಿಕೆಗಳಿಗೆ ಹೆಚ್​ಡಿಡಿ ಧನ್ಯವಾದ : ನಾನು ಪ್ರಧಾನಿಯಾಗಿ 25 ವರ್ಷವಾಗಿದ್ದು, ಬೆಳ್ಳಿಹಬ್ಬ ಆಚರಣೆ ನಡೆಯುತ್ತಿದೆ. ಮಾಧ್ಯಮಗಳು ನನ್ನ ರಾಜಕೀಯ ಜೀವನ ವಿಶ್ಲೇಶಣೆ ಮಾಡಿವೆ. ನನಗೆ ಸಹಕಾರ ಕೊಟ್ಟು, ಕೈಲಾದ ಶಕ್ತಿ ತುಂಬಿದ್ದೀರಾ.. ನಿಮಗೆ ನಾನು ಅಭಾರಿಯಾಗಿದ್ದೇನೆ ಎಂದರು. ಕನ್ನಡದ ಎಲ್ಲಾ ಪತ್ರಿಕಗೆಳಲ್ಲಿ ಮೂರ್ನಾಲ್ಕು ಪುಟಗಳಲ್ಲಿ ಲೇಖನ ಬರೆದಿದ್ದಾರೆ. ರಾಜ್ಯದ ಜನರಿಗೆ ಕಾರ್ಯಕ್ರಮದ ಮಾಹಿತಿ ಕೊಟ್ಟಿದ್ದಾರೆ. ನಾವು ಏನೇನು ಕಾರ್ಯಕ್ರಮ ಕೊಟ್ಟಿದ್ದೆವು. ಅದೆಲ್ಲವನ್ನೂ ಇವತ್ತು ಮಾಧ್ಯಮ ವಿಶ್ಲೇಷಿಸಿವೆ. ಯಾರ ಮೇಲೂ ನಾನು ದ್ವೇಷ ಸಾಧಿಸಲ್ಲ. ಅವರ ಅನುಭವದ ಮೇಲೆ ವಿಶ್ಲೇಷಣೆ ಮಾಡಿದ್ದಾರೆ ಎಂದು ಅವರು ಹೇಳಿದರು.

ಲಾಕ್‌ಡೌನ್ ಮುಂದುವರೆಸುವುದು ಸೂಕ್ತ : ಲಾಕ್‌ಡೌನ್ ನಂತರ ಕೊರೊನಾ ಸೋಂಕು ಕಡಿಮೆಯಾಗುತ್ತಿದೆ. ಬೆಂಗಳೂರಿನಲ್ಲೂ ಸೋಂಕು‌ ಕಡಿಮೆಯಾಗಿದೆ. ಇನ್ನೆರಡು ವಾರ ಲಾಕ್‌ಡೌನ್ ಮುಂದುವರಿಸುತ್ತೇವೆಂದಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕುಮಾರಸ್ವಾಮಿ ಕೂಡ ಮುಂದುವರಿಕೆಗೆ ಹೇಳಿದ್ದಾರೆ. ನನ್ನ ಸಲಹೆಯೂ ಲಾಕ್‌ಡೌನ್ ಮುಂದುವರಿಸಬೇಕು. ಅಲ್ಲದೆ, ಬ್ಲ್ಯಾಕ್ ಮತ್ತು ವೈಟ್ ಫಂಗಸ್ ರಾಜ್ಯದಲ್ಲಿ ಹೆಚ್ಚಾಗುತ್ತಿದೆ. ಇದಕ್ಕೆ ಔಷಧಿ ಕೊರತೆ ಆಗದಂತೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಆಂತರಿಕ ವಿಚಾರ : ಬಿಜೆಪಿಯಲ್ಲಿ ಕುರ್ಚಿ ಕಿತ್ತಾಟ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಲು ನಿರಾಕರಿಸಿದ ಗೌಡರು, ಬಿಜೆಪಿ ಪಕ್ಷದ ಆಂತರಿಕ ವಿಚಾರ. ಈ ಸಮಯದಲ್ಲಿ ನಾನು ಈ ಬಗ್ಗೆ ಏನು ಮಾತಾಡೊಲ್ಲ. ಯಡಿಯೂರಪ್ಪ ಅವರನ್ನು ಎರಡು ವರ್ಷ ಮುಂದುವರೆಸಿದರೆ ನನ್ನ ಅಭ್ಯಂತರವೂ ಇಲ್ಲ. ಸಮಯ ಬಂದಾಗ ಈ ಬಗ್ಗೆ ಮಾತಾಡುತ್ತೇನೆ ಎ‌ಂದರು.

ABOUT THE AUTHOR

...view details