ಕರ್ನಾಟಕ

karnataka

ETV Bharat / city

ನಾಳೆಯಿಂದ ರಾಜ್ಯಾದ್ಯಂತ ಎಲ್ಲ ಕ್ಲಿನಿಕ್- ನರ್ಸಿಂಗ್ ಹೋಂ ಓಪನ್ - ಬೆಂಗಳೂರು ಸುದ್ದಿ

ಜಯನಗರದ ಅಪೋಲೋ ಆಸ್ಪತ್ರೆಯಲ್ಲಿ ಮಹಿಳೆಗೆ ಚಿಕಿತ್ಸೆ ನೀಡದ ಪ್ರಕರಣ ಸಂಬಂಧ ನಾನ್ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ಬಿಡುತ್ತಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ಹೀಗಾಗಿ ಆರೋಗ್ಯ ಸಚಿವ ಶ್ರೀರಾಮುಲು IMA, PHNA ಸೇರಿದಂತೆ 7 ಬೇರೆ ಸಂಸ್ಥೆಯ ಮುಖ್ಯಸ್ಥರ ಜೊತೆ ಇಂದು ಸಭೆ ನಡೆಸಿದರು. ಹೀಗಾಗಿ ನಿಗದಿತ ಆಸ್ಪತ್ರೆಗಳಲ್ಲಿ ನಾಳೆಯಿಂದ ಎಲ್ಲಾ ನಾನ್ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ಸಮ್ಮತಿ ನೀಡಿದ್ದಾರೆ.

Shriramulu
ಶ್ರೀರಾಮುಲು

By

Published : May 13, 2020, 6:41 PM IST

ಬೆಂಗಳೂರು:ನಾಳೆಯಿಂದ ರಾಜ್ಯದ ಎಲ್ಲಾ ಕ್ಲಿನಿಕ್​ ಮತ್ತು ಆಸ್ಪತ್ರೆಗಳನ್ನು ತೆರೆಯಲು ಹಾಗೂ ನಿಗದಿತ ಆಸ್ಪತ್ರೆಗಳಲ್ಲಿ ಎಲ್ಲಾ ನಾನ್ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ಆರೋಗ್ಯ ಸಚಿವ ಶ್ರೀರಾಮುಲು ಸಮ್ಮತಿ ನೀಡಿದ್ದಾರೆ.

ಜಯನಗರದ ಅಪೋಲೋ ಆಸ್ಪತ್ರೆಯಲ್ಲಿ ಮಹಿಳೆಗೆ ಚಿಕಿತ್ಸೆ ನೀಡದ ಪ್ರಕರಣ ಸಂಬಂಧ ನಾನ್ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ಬಿಡುತ್ತಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ಹೀಗಾಗಿ ಆರೋಗ್ಯ ಸಚಿವ ಶ್ರೀರಾಮುಲು IMA, PHNA ಸೇರಿದಂತೆ 7 ಬೇರೆ ಸಂಸ್ಥೆಯ ಮುಖ್ಯಸ್ಥರ ಜೊತೆ ಇಂದು ಸಭೆ ನಡೆಸಿದರು. ಹೀಗಾಗಿ ನಿಗದಿತ ಆಸ್ಪತ್ರೆಗಳಲ್ಲಿ ನಾಳೆಯಿಂದ ಎಲ್ಲಾ ನಾನ್ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ಸಮ್ಮತಿ ನೀಡಿದ್ದಾರೆ. ಅಲ್ಲದೇ ರಾಜ್ಯದ ಎಲ್ಲ ಆಸ್ಪತ್ರೆಯನ್ನು ತೆರೆಯಲಾಗುತ್ತದೆ ಎಂದು ಮಾಧ್ಯಮಗೋಷ್ಠಿಯಲ್ಲಿ ಸಚಿವ ಸುರೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.

ಕೊರೊನಾಯೇತರ ರೋಗಿಗಳ ಶುಶ್ರೂಷೆಗಾಗಿ ವೈದ್ಯಕೀಯ ಸೇವೆಯನ್ನು ನಾಳೆಯಿಂದಲೇ ಪ್ರಾರಂಭಿಸಲು ಎಲ್ಲ ಸಂಘಟನೆಗಳು ಒಪ್ಪಿಗೆ ನೀಡಿವೆ.

ವಿಶೇಷ ಪ್ರಕರಣಗಳಲ್ಲಿ ಹೋಂ ಕ್ವಾರಂಟೈನ್...

ದೇಶೀಯ‌ ಮತ್ತು ಅಂತಾರಾಷ್ಟ್ರೀಯ ಪ್ರಯಾಣಿಕರಲ್ಲಿ ಗರ್ಭಿಣಿಯರು, 10 ವರ್ಷಕ್ಕೂ ಕೆಳಗಿನ ಮತ್ತು ಎಂಬತ್ತು ವರ್ಷ ಮೀರಿದ ಹಿರಿಯ ನಾಗರಿಕರು ಹಾಗೂ ಮಾರಣಾಂತಿಕ‌ ಕಾಯಿಲೆಯಿಂದ ಬಳಲುತ್ತಿರುವವರೆಗೆ ಹೋಂ ಕ್ವಾರಂಟೈನ್ ಅವಕಾಶ ಕಲ್ಪಿಸಲಾಗಿದೆ.

ರಾಜ್ಯದಲ್ಲಿ ಈವರೆಗೆ ಪರೀಕ್ಷಿಸಲಾಗಿರುವ 1,21,178 ಮಾದರಿಗಳ ಪೈಕಿ 959 ಮಾದರಿಗಳು ಖಚಿತಗೊಂಡಿವೆ.. ಇಂದು 4,645 ಮಾದರಿಗಳನ್ನು ಪರೀಕ್ಷೆಗೊಳಪಡಿಸಲಾಗಿದೆ.

ABOUT THE AUTHOR

...view details