ದೊಡ್ಡಬಳ್ಳಾಪುರ: ಗ್ರಾಮದಲ್ಲಿ ಆಗಾಗ್ಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿತ್ತು. ಜೊತೆಗೆ, ಇತ್ತೀಚೆಗೆ ಪತ್ನಿಯೂ ಬಿಟ್ಟಿ ಹೋಗಿದ್ದಳಂತೆ. ಇದರಿಂದ ಕಂಗಾಲಾಗಿ ಕೋಪಗೊಂಡ ಗ್ರಾಮದ ವ್ಯಕ್ತಿಯೊಬ್ಬ ಕಂಠಪೂರ್ತಿ ಮದ್ಯ ಸೇವಿಸಿ, ಟ್ರಾನ್ಸ್‌ಫಾರ್ಮ್ ಕಂಬವೇರಿ ಹೈಡ್ರಾಮ ನಡೆಸಿದ್ದಾನೆ. ದೊಡ್ಡಬಳ್ಳಾಪುರ ತಾಲೂಕಿನ ಉಜ್ಜನಿ ಗ್ರಾಮದಲ್ಲಿ ಕಳೆದ ರಾತ್ರಿ ಈ ಘಟನೆ ನಡೆಯಿತು.
45 ವರ್ಷ ಪ್ರಾಯದ ಈ ವ್ಯಕ್ತಿ 11 ಕೆವಿ ವಿದ್ಯುತ್ ಟ್ರಾನ್ಸ್‌ಫಾರ್ಮ್ ಕಂಬ ಏರಿದ್ದಾನೆ. ಇದನ್ನು ಕಂಡ ಗ್ರಾಮಸ್ಥರು ಕೂಡಲೇ ಲೈನ್ಮ್ಯಾನ್ಗೆ ವಿಷಯ ತಿಳಿಸಿ, ವಿದ್ಯುತ್ ಸಂಪರ್ಕ ಕಡಿತಗೊಳಿಸಿದರು. ಇದರಿಂದಾಗಿ ಪ್ರಾಣಾಪಾಯ ತಪ್ಪಿದೆ.