ಕರ್ನಾಟಕ

karnataka

ETV Bharat / city

ಆಲಂ ಪಾಷಾ ಜಮೀನು ಪ್ರಕರಣಕ್ಕೆ ಮರುಜೀವ: ಸಿಎಂ ಬಿಎಸ್​ವೈಗೆ ಮತ್ತೊಂದು ಕಂಟಕ - Businessman Alam Pasha

ಸರ್ಕಾರದಿಂದ ಮಂಜೂರು ಮಾಡಿದ್ದ ಜಮೀನನ್ನು ಅಕ್ರಮವಾಗಿ ಹಿಂಪಡೆದ ಆರೋಪ ಪ್ರಕರಣದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧದ ಖಾಸಗಿ ದೂರು ರದ್ದುಪಡಿಸಿದ ಲೋಕಾಯಕ್ತ ಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆಗೆ ಒಳಪಡಿಸಲು ಹೈಕೋರ್ಟ್ ಅಂಗೀಕಾರ ನೀಡಿದೆ.

highcourt
ಹೈಕೋರ್ಟ್

By

Published : Jan 5, 2021, 10:28 PM IST

ಬೆಂಗಳೂರು:ಉದ್ಯಮಿ ಆಲಂ ಪಾಷಾ ಒಡೆತನಕ್ಕೆ ಸೇರಿದ ಕಂಪನಿಗೆ ದೇವನಹಳ್ಳಿ ಇಂಡಸ್ಟ್ರಿಯಲ್ ಪಾರ್ಕ್‌ನಲ್ಲಿ ಸರ್ಕಾರದಿಂದ ಮಂಜೂರು ಮಾಡಿದ್ದ ಜಮೀನನ್ನು ಅಕ್ರಮವಾಗಿ ಹಿಂಪಡೆ ಆರೋಪ ಪ್ರಕರಣದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧದ ಖಾಸಗಿ ದೂರು ರದ್ದುಪಡಿಸಿದ ಲೋಕಾಯಕ್ತ ಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯನ್ನು ಹೈಕೋರ್ಟ್ ವಿಚಾರಣೆಗೆ​ ಅಂಗೀಕರಿಸಿದೆ.

ಇದನ್ನೂ ಓದಿ...ಪಶ್ಚಿಮ ಘಟ್ಟದಲ್ಲಿ ರಸ್ತೆ ಅಗಲೀಕರಣ ಪ್ರಶ್ನಿಸಿ ಅರ್ಜಿ: ಸಂಬಂಧಪಟ್ಟ ಎಲ್ಲಾ ಇಲಾಖೆಗಳಿಗೆ 'ಹೈ' ನೋಟಿಸ್​​

ಪ್ರಕರಣದ ಹಿನ್ನೆಲೆ:ದೇವನಹಳ್ಳಿಯ ಇಂಡಸ್ಟ್ರಿಯಲ್ ಹಾರ್ಡ್​ವೇರ್ ಪಾರ್ಕ್‌ನಲ್ಲಿ 26 ಎಕರೆ ಜಮೀನನ್ನು ತಮ್ಮ ಕಂಪನಿಗೆ ಸರ್ಕಾರ 2010-11ರಲ್ಲಿ ಮಂಜೂರು ಮಾಡಿತ್ತು. ನಂತರ 2011ರಲ್ಲಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ, ಕೈಗಾರಿಕಾ ಸಚಿವ ಮುರಗೇಶ್ ನಿರಾಣಿ ನಕಲಿ ದಾಖಲೆ ಸೃಷ್ಟಿಸಿ ಜಮೀನನ್ನು ಹಿಂಪಡೆದಿದ್ದಾರೆ. ಹಿಂಪಡೆದ ಜಮೀನನ್ನು ಬೇರೆ ಕಂಪನಿಗೆ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿ ಆಲಂ ಪಾಷಾ 2016ರಲ್ಲಿ ಲೋಕಾಯುಕ್ತ ಕೋರ್ಟ್‌ಗೆ ಖಾಸಗಿ ದೂರು ದಾಖಲಿಸಿದ್ದರು.

ದೂರು ದಾಖಲಿಸಲು ಪೂರ್ವಾನುಮತಿ ಪಡೆದಿಲ್ಲ ಎಂದು ತಿಳಿಸಿದ್ದ ಲೋಕಾಯುಕ್ತ ವಿಶೇಷ ನ್ಯಾಯಾಲಯ, ಪಾಷಾ ದೂರನ್ನು ವಜಾಗೊಳಿಸಿತ್ತು. ಈ ಆದೇಶ ರದ್ದುಪಡಿಸಲು ಕೋರಿ ಪಾಷಾ 2016ರಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈಗ ಹೈಕೋರ್ಟ್ ಪೂರ್ವಾಮತಿ ಪಡೆಯುವುದು ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿರುವ ನ್ಯಾ. ಮೈಕಲ್ ಕುನ್ಹಾ, ಪ್ರಕರಣ ವಿಚಾರಣೆಗೆ ಆದೇಶ ನೀಡಿದ್ದಾರೆ.

ABOUT THE AUTHOR

...view details