ಕರ್ನಾಟಕ

karnataka

ETV Bharat / city

ಈ ಬಾರಿ ವಿಶೇಷವಾಗಿ ಜರುಗಲಿರುವ 'ಅಕ್ಕ' ಕನ್ನಡ ಸಮ್ಮೇಳನ - 11th Akka sammelana

ಎರಡು ವರ್ಷಗಳಿಗೊಮ್ಮೆ ನಡೆಯುವ ಅಕ್ಕ ವಿಶ್ವ ಕನ್ನಡ ಸಮ್ಮೇಳನ ಈ ಬಾರಿ ಸೆಪ್ಟೆಂಬರ್ 4,5,6 ರಂದು ಜರುಗಲಿದೆ. ಈ 11ನೇ ಅಕ್ಕ ಸಮ್ಮೇಳವನ್ನು ವಿಶೇಷವಾಗಿ ಆಚರಿಸಲು ಆಯೋಜಕರು ನಿರ್ಧರಿಸಿದ್ದಾರೆ.

AKKA conference
'ಅಕ್ಕ'

By

Published : Aug 29, 2020, 6:52 PM IST

ಕೊರೊನಾ ಭೀತಿ ನಡುವೆಯೂ ಈ ಬಾರಿ 'ಅಕ್ಕ' ಸಮ್ಮೇಳನ (ಅಮೇರಿಕ ಕನ್ನಡ ಕೂಟಗಳ ಆಗರ) ಬಹಳ ವಿಶೇಷವಾಗಿ ನಡೆಯಲಿದೆ. ಅದೇ 'ವಾಸ್ತವ ಕನ್ನಡ ಸಮ್ಮೇಳನ'. ಈ ವಾಸ್ತವ ವಿಶ್ವ ಕನ್ನಡ ಸಮ್ಮೇಳನ ವಿಶ್ವಾದ್ಯಂತ ಕನ್ನಡಿಗರ ಮನೆ ಮನೆಗೆ ತಲುಪಲು ಎಲ್ಲಾ ವ್ಯವಸ್ಥೆ ಮಾಡಲಾಗಿದೆ.

ಪತ್ರಿಕಾ ಪ್ರಕಟಣೆ
ಪತ್ರಿಕಾ ಪ್ರಕಟಣೆ

ಎರಡು ವರ್ಷಗಳಿಗೊಮ್ಮೆ ನಡೆಯುವ ವಿಶ್ವ ಕನ್ನಡ ಸಮ್ಮೇಳನಕ್ಕೆ ಈಗ 20 ವರ್ಷಗಳು ತುಂಬಿದೆ. ಈಗಾಗಲೇ ನಡೆದಿರುವ 10 ಸಮ್ಮೇಳನಗಳಲ್ಲಿ ಸುಮಾರು 50 ಸಾವಿರ ವ್ಯಕ್ತಿಗಳು ಭಾಗವಹಿಸಿದ್ದಾರೆ. ಈಗ 11ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನ ಸೆಪ್ಟೆಂಬರ್ 4, 5, 6 ರಂದು ನಡೆಯುತ್ತಿದೆ. ಈ ಬಾರಿಯ ವಾಸ್ತವ ವಿಶ್ವ ಕನ್ನಡ ಸಮ್ಮೇಳನದ ಬಗ್ಗೆ ಮತ್ತಷ್ಟು ಮಾಹಿತಿಗಳು ಸದ್ಯದಲ್ಲೇ ದೊರೆಯಲಿದೆ. ಈ ವಿಚಾರವಾಗಿ 'ಅಕ್ಕ' ಅಧ್ಯಕ್ಷ ತುಮಕೂರು ದಯಾನಂದ್​​​​​​​​​​​ ಹಾಗೂ ಅಕ್ಕ ಚೇರ್ಮನ್ ಅಮರನಾಥ್ ಗೌಡ ಅವರು ಜಂಟಿಯಾಗಿ ಪತ್ರಿಕಾ ಪ್ರಕಟಣೆ ಹೊರಡಿಸಲಿದ್ದಾರೆ.

'ಅಕ್ಕ' ಅಧ್ಯಕ್ಷ ತುಮಕೂರು ದಯಾನಂದ್
'ಅಕ್ಕ' ಚೇರ್ಮನ್ ಅಮರನಾಥ್ ಗೌಡ

ABOUT THE AUTHOR

...view details