ಕರ್ನಾಟಕ

karnataka

ETV Bharat / city

ಮಳೆ ಲೆಕ್ಕಿಸದೇ ಆಟೋ ಚಾಲಕರ ಸಂಘ, ಎಐಟಿಯುಸಿ ಪ್ರತಿಭಟನೆ - ಎಐಟಿಯುಸಿ ಕಾರ್ಮಿಕರು ಪ್ರತಿಭಟನೆ

ಮಾಲೀಕರ ಪರವಾದ ನೀತಿ ಕಾರ್ಮಿಕರಿಗೆ ಬೇಡ, ಕಾರ್ಮಿಕರಿಗೆ ಇನ್ನ್ಮುಂದೆ ನ್ಯಾಯ ಕೇಳಲು ಆಗಲ್ಲ ಎಂದು ಎಐಟಿಯುಸಿ ಕಾರ್ಮಿಕರು ಪ್ರತಿಭಟನೆ ನಡೆಸಿದರು.

protest
ಪ್ರತಿಭಟನೆ

By

Published : Nov 26, 2020, 2:07 PM IST

ಬೆಂಗಳೂರು:ನಿವಾರ್ ಸ್ಲೈಕೋನ್ ಎಫೆಕ್ಟ್ ನಡುವೆಯೂ ಇಂಡಸ್ಟ್ರಿಯಲ್ ಡಿಸ್​​​ಪ್ಯೂಟ್ ಆಕ್ಟ್ ವಿರುದ್ಧ ಎಐಟಿಯುಸಿ ಕಾರ್ಮಿಕರು ಛತ್ರಿ ಹಿಡಿದುಕೊಂಡು ಧರಣಿಯ ಭಾಗಿಯಾಗಿದ್ದಾರೆ.

ಎಐಟಿಯುಸಿ ಪ್ರೊಟೆಸ್ಟ್​

ರೈಲ್ವೆ ನಿಲ್ದಾಣದಿಂದ ಫ್ರೀಡಂ‌ ಪಾರ್ಕ್‌ನವರೆಗೆ ಕಾರ್ಮಿಕರು‌ ಮತ್ತು ಆಟೋ ಚಾಲಕರು ಮೆರವಣಿಗೆಯಲ್ಲಿ ಭಾಗಿಯಾದರು.‌ ಪ್ರತಿಭಟನೆಯಲ್ಲಿ‌ ಸಾವಿರಕ್ಕೂ ಹೆಚ್ಚು ಜನರು ಭಾಗಿಯಾಗಿದ್ದು, ಕಾರ್ಮಿಕ ನೀತಿ‌ ಕಾಯ್ದೆ ವಿರೋಧಿಸಿ‌ ರ‍್ಯಾಲಿನಡೆಸಲಾಯಿತು. ಮಾಲೀಕರ ಪರವಾದ ನೀತಿ ಕಾರ್ಮಿಕರಿಗೆ ಬೇಡ, ಕಾರ್ಮಿಕರಿಗೆ ಇನ್ನ್ಮುಂದೆ ನ್ಯಾಯ ಕೇಳಲು ಆಗಲ್ಲ, ಖಾಯಂ ಉದ್ಯೋಗ ಸಹ ಈ‌ ಕಾಯ್ದೆಯಿಂದ ಕೇಳಲು ಆಗಲ್ಲ, ಇದು ಸಾಂಕೇತಿಕ ಹೋರಾಟ ಮಾತ್ರ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಧರಣಿ ನಡೆಸಿದ್ದಾರೆ.

ಇನ್ನು ಪ್ರತಿಭಟನೆಯಲ್ಲಿ ಆಟೋಗಳು, ಇಂಡಸ್ಟ್ರಿಯಲ್ ನೌಕರರು, ಕೇಂದ್ರ ಸಂಘಟನೆ ಎಐಟಿಯುಸಿ, ಸಿಐಟಿಯುಸಿ, ಸ್ವಾತಂತ್ರ್ಯ ಫೆಡರೇಷನ್​ಗಳು ಸಂಘಟನೆಗಳು ಭಾಗಿಯಾಗಿದ್ದವು.

ಕರ್ನಾಟಕ ಇಂಡಸ್ಟ್ರೀಸ್ ವರ್ಕರ್ಸ್ ಫೆಡರೇಷನ್​ನ, ಉಪಾಧ್ಯಕ್ಷ, ಗಂಗಬೈರಯ್ಯ ನೇತೃತ್ವದಲ್ಲಿ‌ ನಡೆಯುತ್ತಿರುವ ‌ರ‍್ಯಾಲಿ‌ ನಡೆಯುತ್ತಿದೆ. ಒಂದೆಡೆ ಆಟೋ ಚಾಲಕರ ಪ್ರತಿಭಟನೆಯಾದರೆ ಮತ್ತೊಂದೆಡೆ ಎಐಟಿಯುಸಿ ಕಾರ್ಮಿಕರಿಂದ ಹೋರಾಟ ನಡೆಯುತ್ತಿದೆ.

ABOUT THE AUTHOR

...view details