ಕರ್ನಾಟಕ

karnataka

ETV Bharat / city

ಚಳಿಗಾಲದಲ್ಲಿ ಮಧ್ಯಮಕ್ಕೆ ಕುಸಿದ ವಾಯು ಗುಣಮಟ್ಟ: ಮಾಲಿನ್ಯ ಹೆಚ್ಚಳಕ್ಕೆ ಕಾರಣ ಇಲ್ಲಿದೆ... - ಚಳಿಗಾಲದಲ್ಲಿ ವಾಯುಗುಣಮಟ್ಟ ಕುಸಿತ

ಚಳಿಗಾಲದಲ್ಲಿ ಮೋಡದ ಪದರ ನಿರ್ಮಾಣವಾಗಿರುವುದರಿಂದ ಧೂಳಿನ ಕಣಗಳು ಹಗುರವಾಗಿ ಪದರದ ಮಧ್ಯದಲ್ಲಿ ಸೇರುತ್ತವೆ. ದಪ್ಪ ಮೋಡದ ಪದರ ದಾಟಿ ಹೋಗಲು ಸಾಧ್ಯವಾಗದೆ, ಮಾಲಿನ್ಯ ಕಾರಕಗಳು ವಾತಾವರಣದಲ್ಲಿ ವಿಲೀನಗೊಳ್ಳುತ್ತವೆ. ಹೀಗಾಗಿ, ಉಸಿರಾಟದ ಗಾಳಿಯಲ್ಲೇ ಮಾಲಿನ್ಯಕಾರಕಗಳ ಪ್ರಮಾಣ ಅಧಿಕವಾಗುತ್ತದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ತಿಳಿಸಿದರು.

air-pollution
ವಾಯುಮಾಲಿನ್ಯ

By

Published : Dec 30, 2020, 5:46 PM IST

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ವಾಯುಮಾಲಿನ್ಯ ಪ್ರಮಾಣ ವರ್ಷದಿಂದ ವರ್ಷಕ್ಕೆ ಮಿತಿ ಮೀರುತ್ತಿರುವುದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಂಕಿ-ಅಂಶಗಳಿಂದ ಗೊತ್ತಾಗಿದೆ. ಜೊತೆಗೆ ಮಳೆಗಾಲ, ಬೇಸಿಗೆಗಾಲಕ್ಕೆ ಹೋಲಿಸಿದರೆ ಚಳಿಗಾಲದಲ್ಲೇ ವಾಯು ಮಾಲಿನ್ಯದ ಪ್ರಮಾಣ ಹೆಚ್ಚಾಗಿದೆ.

ಬೇಸಿಗೆಗಾಲದಲ್ಲಿ ಸಮಾಧಾನಕರವಾಗಿದ್ದ (51-100) ವಾಯುಗುಣಮಟ್ಟ ಚಳಿಗಾಲದಲ್ಲಿ ಮಧ್ಯಮ ಪ್ರಮಾಣಕ್ಕೆ (101-200) ಕುಸಿದಿದೆ. ವಾಹನಗಳು ಹೊರಸೂಸುವ ಹೊಗೆ, ಧೂಳು, ನಿರ್ಮಾಣ ಕಾಮಗಾರಿಗಳಿಂದ ಬರುವ ಧೂಳು ವಾತಾವರಣವನ್ನು ಕಲುಷಿತಗೊಳಿಸುತ್ತಿದೆ. ಚಿಕ್ಕ ಮಕ್ಕಳಿಗೆ, ಅಸ್ತಮಾ ಸಮಸ್ಯೆ, ವಯಸ್ಕರು, ಶ್ವಾಸಕೋಶ ಹಾಗೂ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವವರಿಗೆ ಚಳಿಗಾಲದಲ್ಲಿ ಹೊರಗೆ ಓಡಾಟ ಹೆಚ್ಚು ಸಮಸ್ಯೆ ತಂದೊಡ್ಡಲಿದೆ.

ಓದಿ:ಈ ವರ್ಷ ಅಪರಾಧ ಪ್ರಮಾಣದಲ್ಲಿ ಇಳಿಕೆ: ಸೈಬರ್, ಡ್ರಗ್ಸ್​ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ

ವಾಯುಮಾಲಿನ್ಯ ಹೆಚ್ಚಾಗಲು ಕಾರಣ:ಚಳಿಗಾಲದಲ್ಲಿ ಉಂಟಾಗುವ ಹವಾಮಾನ ಬದಲಾವಣೆಯೇ ವಾಯುಮಾಲಿನ್ಯಕ್ಕೆ ಕಾರಣವಾಗಿದೆ. ಚಳಿಗಾಲದಲ್ಲಿ ಮೋಡಗಳು ವಾತಾವರಣದ ತೇವಾಂಶ ಹೀರಿಕೊಂಡು ಭಾರವಾಗಿ ಬಿಡುತ್ತವೆ. ಇದು ಭಾರವಾದಾಗ ವಾತಾವರಣದಲ್ಲಿ ಹೆಚ್ಚು ಎತ್ತರಕ್ಕೆ ಹೋಗಲು ಸಾಧ್ಯವಾಗುವುದಿಲ್ಲ.‌ ಹೆಚ್ಚು ಚದುರುವುದೂ ಇಲ್ಲ. ಇದು ವಾತಾವರಣದಲ್ಲಿ ಒಂದು ಪದರದ ರೀತಿಯಲ್ಲಿ ನಿರ್ಮಾಣವಾಗುತ್ತದೆ.

ಸಾಮಾನ್ಯ ದಿನಗಳಲ್ಲಿ ವಾಯುಮಾಲಿನ್ಯಕ್ಕೆ ಕಾರಣವಾಗುವ ಧೂಳು, ಹೊಗೆಯ ಮಾಲಿನ್ಯಕಾರಕ ಕಣಗಳಾದ ಪಿಎಂ-10 ಹಾಗೂ ಪಿಎಂ 2.5 ಗಾಳಿಯಲ್ಲಿ ಮೇಲಕ್ಕೇರಿ ಆಕಾಶಕ್ಕೆ ಹೋಗುತ್ತವೆ. ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಿದ್ದಷ್ಟೂ ಗಾಳಿ ಬಿಸಿಯಾಗಿ ಮೇಲೇರುವುದರಿಂದ ಈ ಪ್ರಕ್ರಿಯೆ ನಡೆಯುತ್ತದೆ.

ಬೆಂಗಳೂರಿನಲ್ಲಿ ದಾಖಲಾದ ವಾಯುಮಾಲಿನ್ಯ ಪ್ರಮಾಣ

ಆದರೆ, ಚಳಿಗಾಲದಲ್ಲಿ ಮೋಡದ ಪದರ ನಿರ್ಮಾಣವಾಗಿರುವುದರಿಂದ ಧೂಳಿನ ಕಣಗಳು ಹಗುರವಾಗಿ ಪದರದ ಮಧ್ಯದಲ್ಲಿ ಸೇರುತ್ತವೆ. ದಪ್ಪ ಮೋಡದ ಪದರ ದಾಟಿ ಹೋಗಲು ಸಾಧ್ಯವಾಗದೆ, ಮಾಲಿನ್ಯ ಕಾರಕಗಳು ವಾತಾವರಣದಲ್ಲಿ ವಿಲೀನಗೊಳ್ಳುತ್ತವೆ. ಉಸಿರಾಟದ ಗಾಳಿಯಲ್ಲೇ ಮಾಲಿನ್ಯಕಾರಕಗಳ ಪ್ರಮಾಣ ಅಧಿಕವಾಗುತ್ತದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ತಿಳಿಸಿದರು.

ಚಳಿಗಾಲದಲ್ಲಿ ಜೋರಾದ ಗಾಳಿ ಬೀಸಿದಾಗ ಈ ಧೂಳಿನ ಕಣಗಳು ಹರಡಿ ಹೆಚ್ಚು ವಾಯುಮಾಲಿನ್ಯ ಉಂಟಾಗಲು ಕಾರಣವಾಗುತ್ತದೆ. ಬೇಸಿಗೆಯಲ್ಲಿ ಒಂದು ಕಿಮೀಗಿಂತಲೂ ಹೆಚ್ಚಿನ ಎತ್ತರಕ್ಕೆ ಏರುವ ಧೂಳಿನ ಕಣಗಳು, ಚಳಿಗಾಲದಲ್ಲಿ 1ಕಿಮೀಗಿಂತ ಹೆಚ್ಚು ಎತ್ತರ ಹೋಗುವುದಿಲ್ಲ. ಇದರಿಂದ ವಾಯುಮಾಲಿನ್ಯದ ಮಟ್ಟ ಏರಿಕೆಯಾಗಿರುತ್ತದೆ. ನಗರದ ವಿವಿಧೆಡೆ ವಾಯುಗುಣಮಟ್ಟ ಅಳೆಯುವ ಮಾಪನಗಳನ್ನು ಮಾಲಿನ್ಯ ನಿಯಂತ್ರಣ ಮಂಡಳಿ ಅಳವಡಿಸಿದ್ದು, ಪ್ರತಿದಿನ ಅಂಕಿ-ಅಂಶಗಳನ್ನು ಪರಿಶೀಲಿಸಲಾಗುತ್ತದೆ.

ABOUT THE AUTHOR

...view details