ಬೆಂಗಳೂರು: ಕೋವಿಡ್ನಿಂದ ಸಾಕಷ್ಟು ಸಂಕಷ್ಟಕ್ಕೆ ಒಳಗಾಗಿರುವ ಬಿಎಂಟಿಸಿ ತನ್ನ ಪ್ರಯಾಣಿಕರು ಸೆಳೆಯಲು ಸರ್ಕಸ್ ಮಾಡುತ್ತಲೇ ಇದೆ. ಇದೀಗ ಸಂಸ್ಥೆಯು ಹವಾನಿಯಂತ್ರಿತ ವಜ್ರ ಸೇವೆಗಳಿಗೆ ಹೆಚ್ಚಿನ ಪ್ರಯಾಣಿಕರನ್ನು ಆಕರ್ಷಿಸಲು ಮುಂದಾಗುತ್ತಿದೆ.
ಸಾಮಾನ್ಯರಿಗೂ ಕೈಗೆಟುಕುತ್ತದೆ ವಜ್ರ ಬಸ್ ಸೇವೆ: ಪ್ರಯಾಣ ದರ ಇಳಿಕೆ ಬಿಎಂಟಿಸಿ ನಿರ್ಧಾರ - ಬೆಂಗಳೂರಿನಲ್ಲಿ ಬಸ್ ಪ್ರಯಾಣದರಗಳು
ಬಿಎಂಟಿಸಿ ಈಗಾಗಲೇ ನಷ್ಟದಲ್ಲಿದೆ. ಕೊರೊನಾದಿಂದಾಗಿಯೂ ಕೂಡಾ ಸಂಸ್ಥೆಯ ನಷ್ಟ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಜನಸಾಮಾನ್ಯರನ್ನು ಸೆಳೆಯಲು ಹೊಸ ನಿರ್ಧಾರ ಕೈಗೊಳ್ಳಲು ಮುಂದಾಗಿದೆ.
ಬಿಎಂಟಿಸಿ
ಇದನ್ನೂ ಓದಿ:ನಷ್ಟದಲ್ಲಿ ಮುಳುಗಿದೆ ಬಿಎಂಟಿಸಿ; ಕಟ್ಟಡಗಳ ಅಡಮಾನ ಇಟ್ಟು ಸಾಲಕ್ಕೆ ಮೊರೆ!
ಇದಕ್ಕಾಗಿ ಜನವರಿ 1ರಿಂದ ಬಸ್ ಪ್ರಯಾಣ ದರ, ಮಾಸಿಕ ಮತ್ತು ದೈನಂದಿನ ಪಾಸ್ ದರವನ್ನು ಕಡಿಮೆ ಮಾಡಲು ನಿರ್ಧರಿಸಿದೆ. ಶುಲ್ಕ ಮತ್ತು ಪಾಸ್ ದರಗಳು ಶೇಕಡಾ 20ರಷ್ಟು ಕಡಿಮೆಯಾಗುತ್ತವೆ. ಆದರೆ ಸಾಮಾನ್ಯ ಬಸ್ಸುಗಳು ಮತ್ತು ವಾಯುವಜ್ರ ಸೇವೆಗಳ ದರಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.