ಕರ್ನಾಟಕ

karnataka

ETV Bharat / city

ಪರಿಹಾರ ಪ್ಯಾಕೇಜ್​ನಲ್ಲಿ ಕೃಷಿಕರಿಗೆ ಕೊರತೆ ಇರೋದು ನಿಜ, ಇದು ಕಷ್ಟ ಕಾಲದ ಪ್ಯಾಕೇಜ್: ಬಿ.ಸಿ.ಪಾಟೀಲ್

ಪ್ಯಾಕೇಜ್​​ನಲ್ಲಿ ಕೃಷಿಕರಿಗೆ ಕೊರತೆ ಇರೋದು ನಿಜ. ಜೀವನದಲ್ಲಿ ಯಾರಿಗೂ ತೃಪ್ತಿ ಅನ್ನೋದು ಇರಲ್ಲ. ಕೃಷಿಕರಿಗೆ, ಹೂ ಬೆಳೆಗಾರರಿಗೆ ಪರಿಹಾರ ನೀಡಿದ್ದಾರೆ. ಸಂಕಷ್ಟದ ಈ ಪ್ಯಾಕೇಜ್​​ಅನ್ನ ನಾನು ಸ್ವಾಗತಿಸುತ್ತೇನೆ ಎಂದು ಬಿ.ಸಿ.ಪಾಟೀಲ್ ಹೇಳಿದ್ದಾರೆ.

Agriculture Minister B.C. Patil
ಕೃಷಿ ಸಚಿವ ಬಿ.ಸಿ.ಪಾಟೀಲ್

By

Published : May 20, 2021, 1:53 PM IST

ಬೆಂಗಳೂರು: ಪರಿಹಾರ ಪ್ಯಾಕೇಜ್​ನಲ್ಲಿ ಕೃಷಿಕರಿಗೆ ಕೊರತೆ ಇರೋದು ನಿಜ. ಆದರೆ, ಕೋವಿಡ್ ಕಷ್ಟ ಕಾಲದಲ್ಲಿ ಈ ಪ್ಯಾಕೇಜ್ ಕೊಟ್ಟಿದ್ದಾರೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.

ಕಾವೇರಿ ನಿವಾಸದಲ್ಲಿ ಸಿಎಂ ಭೇಟಿಯಾಗಿ ಬಳಿಕ ಮಾತನಾಡಿದ ಅವರು, ಪ್ಯಾಕೇಜ್​​ನಲ್ಲಿ ಕೃಷಿಕರಿಗೆ ಕೊರತೆ ಇರೋದು ನಿಜ. ಜೀವನದಲ್ಲಿ ಯಾರಿಗೂ ತೃಪ್ತಿ ಅನ್ನೋದು ಇರಲ್ಲ. ಕೃಷಿಕರಿಗೆ, ಹೂ ಬೆಳೆಗಾರರಿಗೆ ಪರಿಹಾರ ನೀಡಿದ್ದಾರೆ. ಸಂಕಷ್ಟದ ಈ ಪ್ಯಾಕೇಜ್​ಅನ್ನ ನಾನು ಸ್ವಾಗತಿಸುತ್ತೇನೆ ಎಂದರು.

ಇನ್ನು, ಕೇಂದ್ರ ಸರ್ಕಾರ ಕೂಡ ಮಹತ್ವದ ನಿರ್ಧಾರ ತೆಗೆದುಕೊಂಡಿದೆ‌. ರಸಗೊಬ್ಬರದ ಬೆಲೆಯನ್ನು ಮೊದಲಿನಂತೆ ನೀಡುತ್ತಿದ್ದು, ಪ್ರಧಾನಿ ಮೋದಿ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದ್ದಾರೆ.

ಕೊಪ್ಪಳ ಜಿಲ್ಲೆಯಲ್ಲಿ ಆಕ್ಸಿಜನ್ ಸಮಸ್ಯೆ ಇರುವ ಬಗ್ಗೆ ಸಿಎಂ ಭೇಟಿಯಾಗಿ ಮನವಿ‌ ಸಲ್ಲಿಸಿ 300 ಬೆಡ್ ಹೆಚ್ಚಳ, ಆಕ್ಸಿಜನ್ ಹಾಗೂ ಕಂಟೈನರ್​ಗೆ ಕೇಳಿದ್ದೇವೆ. ಕೊಪ್ಪಳ ಜಿಲ್ಲೆಯಲ್ಲಿ ಬುಧವಾರ 623 ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಐವರು ಮೃತಪಟ್ಟಿದ್ದಾರೆ. ಪರಿಸ್ಥಿತಿ ನೋಡಿಕೊಂಡು ಕರ್ಫ್ಯೂ ವಿಸ್ತರಣೆ ಮಾಡಲಾಗುವುದು ಎಂದರು.

ಓದಿ:ಲಾಕ್‌ಡೌನ್ ಯಶಸ್ವಿಗಾಗಿ ಇನ್ನಷ್ಟು ಬಿಗಿ ಕ್ರಮ: ಬಸವರಾಜ ಬೊಮ್ಮಾಯಿ

ABOUT THE AUTHOR

...view details