ಕರ್ನಾಟಕ

karnataka

ETV Bharat / city

ಕೇಂದ್ರದ ಆರ್ಥಿಕ ವಿರೋಧಿ ನೀತಿ ಖಂಡಿಸಿ ನಾಳೆಯಿಂದಲೇ ರಾಜ್ಯಾದ್ಯಂತ ಪ್ರತಿಭಟನೆ: ದಿನೇಶ್​ ಗುಂಡೂರಾವ್​​ - bangalore news

ಕೇಂದ್ರದ ಆರ್ಥಿಕ ವಿರೋಧಿ ನೀತಿ ಖಂಡಿಸಿ ನಾಳೆಯಿಂದಲೇ ರಾಜ್ಯಾದ್ಯಂತ ಪ್ರತಿಭಟನೆ ನಡೆಸೋದಾಗಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್

By

Published : Nov 3, 2019, 3:26 PM IST

Updated : Nov 3, 2019, 3:37 PM IST


ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಯಾರ ಮಾತೂ ಕೇಳದೇ ದೇಶವನ್ನು ಸರ್ವನಾಶದತ್ತ ಒಯ್ಯುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ.

ಕೇಂದ್ರದ ಆರ್ಥಿಕ ವಿರೋಧಿ ನೀತಿ ಖಂಡಿಸಿ ನಾಳೆಯಿಂದಲೇ ರಾಜ್ಯಾದ್ಯಂತ ಪ್ರತಿಭಟನೆ: ದಿನೇಶ್ ಗುಂಡೂರಾವ್

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೇಶದ ಆರ್ಥಿಕ ವ್ಯವಸ್ಥೆ ಐಸಿಯುನಲ್ಲಿದೆ. ಉದ್ಯೋಗ ಸೃಷ್ಟಿ ಕೋಮಾವಸ್ಥೆಯಲ್ಲಿದೆ. ಉದ್ಯೋಗ ಸೃಷ್ಟಿಯಿರಲಿ, ಇರೋ ಉದ್ಯೋಗ ಉಳಿಸಿಕೊಳ್ಳಲು ಆಗ್ತಿಲ್ಲ. ದೇಶ ಆರ್ಥಿಕ ತುರ್ತು ಪರಿಸ್ಥಿತಿಯಲ್ಲಿರೋ ಹಾಗೆ ಕಾಣ್ತಿದೆ. ಐದೂವರೆ ವರ್ಷದ ಹಿಂದೆ ಮೋದಿ ಪ್ರಧಾನಿ ಆದಾಗ ಜನರಲ್ಲಿ ಸಾಕಷ್ಟು ಆಸೆ ಹುಟ್ಟಿಸಿದ್ರು. ಇಂದು ಆರ್​ಸಿಇಪಿ ಸಹಿಗೆ ಮುಂದಾಗಿದ್ದಾರೆ. ನೋಟು ಅಮಾನ್ಯಗೊಳಿಸಿ ಸಮಸ್ಯೆ ಉಂಟು ಮಾಡಿದರು. ಜಿಎಸ್​ಟಿ ತಂದರೂ ಕೂಡ ಜಿಡಿಪಿ ಕುಸಿದಿದೆ. ಪ್ರತಿಪಕ್ಷವನ್ನು ವಿಶ್ವಾಸಕ್ಕೆ ಪಡೆಯುವ, ಚರ್ಚಿಸುವ ಕಾರ್ಯ ಮಾಡುತ್ತಿಲ್ಲ. ಇದರಿಂದ ಕೇಂದ್ರ ಸರ್ಕಾರದ ಆರ್ಥಿಕ ವಿರೋಧಿ ನೀತಿ ಖಂಡಿಸಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನೆ ಹಮ್ಮಿಕೊಳ್ಳುತ್ತಿದ್ದೇವೆ ಎಂದರು.

ಮೋದಿ ಸರ್ಕಾರದ ಆರ್ಥಿಕ ತೀರ್ಮಾನಗಳ ಹಾಗೂ ಆರ್‌ಸಿಇಬಿ ವಿರುದ್ಧ ಕಾಂಗ್ರೆಸ್​ನಿಂದ ವಿವಿಧ ಜಿಲ್ಲೆಗಳಲ್ಲಿ ಬೃಹತ್ ಹೋರಾಟ ನಡೆಸಲಾಗುವುದು. ಆರ್ಥಿಕ‌ ಮುಗ್ಗಟ್ಟನ್ನ ಎದುರಿಸುವ ಸಂದರ್ಭದಲ್ಲೇ ಫ್ರೀ ಟ್ರೇಡ್ ಅಗ್ರಿಮೆಂಟ್ ಮಾಡಿಕೊಳ್ಳಲು ಮೋದಿ ಮುಂದಾಗಿದ್ದಾರೆ. ಹೀಗಾಗಿ ಬೆಂಗಳೂರಿನಲ್ಲಿ ನಂವೆಬರ್​ 11ನೇ ತಾರೀಖು ಮತ್ತು ರಾಜ್ಯಾದ್ಯಂತ 9ರಂದು ಪ್ರತಿಭಟನೆ ನಡೆಸಲು ಸೂಚಿಸಿದ್ದೇವೆ. ಇದರ ಹೊರತಾಗಿ ನ. 4ರಂದು ಮುಂಡಗೋಡ, 5ರಂದು ಶಿವಮೊಗ್ಗ, 6ರಂದು ವಿಜಯಪುರ, 14ರಂದು ರಾಯಚೂರು ಮತ್ತು ಚಿತ್ರದುರ್ಗ, ಹಾಸನ ಜಿಲ್ಲೆಗಳಲ್ಲಿ ಬೃಹತ್ ಪ್ರತಿಭಟನೆ ನಡೆಸಲಿದ್ದೇವೆ. ಆರ್​ಸಿಇಪಿ‌ ವಿರುದ್ಧ ಬೆಂಗಳೂರಿನಲ್ಲಿ ನಾಳೆ ಕಾಂಗ್ರೆಸ್ ಕಿಸಾನ್ ಸಂಘ ರೈಲ್ ರೊಖೋ ಪ್ರತಿಭಟನೆ ನಡೆಸಲಿದೆ ಎಂದರು.

ನಿರುದ್ಯೋಗ ಸಮಸ್ಯೆ ಹೆಚ್ಚಿದೆ: ದೇಶದಲ್ಲಿ 8.19% ನಿರುದ್ಯೋಗ ಇದೆ. ಸ್ವಾತಂತ್ರ್ಯ ಬಂದ ನಂತರ ಇಷ್ಟು ನಿರುದ್ಯೋಗ ಯಾವತ್ತು ಇರಲಿಲ್ಲ. 16 ವರ್ಷದಲ್ಲೇ ಖಾಸಗಿ ಬಂಡವಾಳ ಅತೀ ಕಡಿಮೆ ಹೂಡಿಕೆಯಾಗಿದೆ. ಮೋದಿ ಗುಜರಾತ್ ಸಿಎಂ ಆಗಿದ್ದಾಗ ಕಾಂಗ್ರೆಸ್ ಜಿಎಸ್‌ಟಿ ಜಾರಿಗೆ ತರಲು ಹೊರಟಾಗ ವಿರೋಧಿಸಿದ್ರು. ಆದ್ರೆ, ಅವರು ಪ್ರಧಾನಿ ಆದಾಗ ಏನು ತಯಾರಿ ಮಾಡಿಕೊಳ್ಳದೆ ಜಿಎಸ್‌ಟಿ ಜಾರಿಗೆ ತಂದ್ರು. ದೇಶದ ಪ್ರಗತಿಗೆ ಪೂರಕವಾಗಬೇಕಿದ್ದ ಜಿಎಸ್‌ಟಿ ಈಗ ದೇಶಕ್ಕೆ ಮಾರಕವಾಗ್ತಿದೆ ಎಂದರು.

ಇನ್ನು, ಯಡಿಯೂರಪ್ಪ ಆಡಿಯೋ ವಿಚಾರವಾಗಿ ಮಾತನಾಡಿದ ಅವರು, ಎಲ್ಲರೂ ಕೂಡ ಬಿಜೆಪಿ ನಾಯಕರೇ ಇದರಲ್ಲಿ ಇರೋದು. ನನ್ನ ಧ್ವನಿ ಅಲ್ಲ ಅಂತ ಯಡಿಯೂರಪ್ಪ ಎಲ್ಲೂ ಹೇಳಿಲ್ಲ. ಇದು ಸಂವಿಧಾನ ಬಾಹಿರ ಎಂದು ಸ್ಪಷ್ಟವಾಗಿ ಗೊತ್ತಾಗಿದೆ. ಸುಪ್ರೀಂಕೋರ್ಟ್ ಮುಂದೆಯೂ ಕೂಡ ಈ ವಿಚಾರ ಸಲ್ಲಿಸುತ್ತೇವೆ. ನಮಗೆ ಯಾರು ಆಡಿಯೋ ಬಿಡುಗಡೆ ಮಾಡಿದಾರೆ ಅನ್ನೋದು ಮುಖ್ಯ ಅಲ್ಲ. ಬಿಜೆಪಿ ಬೇಕಿದ್ದರೆ ಆಂತರಿಕ ತನಿಖೆ ಮಾಡಿಕೊಳ್ಳಲಿ. ಆದರೆ ಬಿಜೆಪಿಯಲ್ಲಿ ಎಷ್ಟು ಭಿನ್ನಾಭಿಪ್ರಾಯ ಇದೆ ಅನ್ನೋದು ಇದರಿಂದಲೇ ಗೊತ್ತಾಗುತ್ತದೆ. ಇಷ್ಟು ಬಾರಿ ಯಡಿಯೂರಪ್ಪ ತಾನೇ ಮಾಡಿಸಿದ್ದೇನೆ ಅಂತ ಹೇಳಿದಾಗ ನಾವು ಸುಮ್ಮನೆ ಕೂರೋದಕ್ಕೆ ಆಗತ್ತಾ? ರಾಷ್ಟ್ರೀಯ ಅಧ್ಯಕ್ಷರ ನೇತೃತ್ವದಲ್ಲೇ ಆಪರೇಷನ್ ಕಮಲ ನಡೆದಿರೋದು ಪ್ರೂವ್ ಆಯ್ತಲ್ಲಾ? ಇವರೆಲ್ಲಾ ರಾಜೀನಾಮೆ ಯಾಕ್ ಕೊಟ್ರು ಅನ್ನೋದು ಇದರಲ್ಲೇ ಗೊತ್ತಾಯ್ತಲ್ಲ ಎಂದರು.

Last Updated : Nov 3, 2019, 3:37 PM IST

ABOUT THE AUTHOR

...view details