ಕರ್ನಾಟಕ

karnataka

ETV Bharat / city

ಸತ್ತ ಆಫ್ರಿಕನ್ ದೇಶದ ಪ್ರಜೆ ವಿದ್ಯಾರ್ಥಿಯಲ್ಲ ಎಂದ ರವಾಂಡ ರಾಯಭಾರ ಕಚೇರಿ ಅಧಿಕಾರಿ - ಜೆ.ಸಿ.ನಗರದ ಠಾಣೆಯ ಮುಂಭಾಗ ಪ್ರತಿಭಟನೆ

ಆ ವ್ಯಕ್ತಿ ಅಕ್ರಮವಾಗಿ ರಾಜಧಾನಿಯಲ್ಲಿ ವಾಸವಾಗಿದ್ದನು. ಸತ್ತವನು ವಿದ್ಯಾರ್ಥಿಯೇ ಅಲ್ಲ ಎಂದು ರವಾಂಡ ದೇಶದ ರಾಯಭಾರ ಕಚೇರಿಯ ಅಧಿಕಾರಿ ಮೋಹನ್ ಸುರೇಶ್ ಹೇಳಿದ್ದಾರೆ.

BNG
BNG

By

Published : Aug 2, 2021, 10:43 PM IST

ಬೆಂಗಳೂರು: ಸೋಮವಾರ ಡ್ರಗ್ಸ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದ್ದ ವಿದೇಶಿ ಪ್ರಜೆ ಸಾವನ್ನಪ್ಪಿರುವ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಮೃತನ ಕಡೆಯವರು ಜೆ.ಸಿ.ನಗರದ ಠಾಣೆಯ ಮುಂಭಾಗ ಪ್ರತಿಭಟನೆ ನಡೆಸಿದ ಹಿನ್ನೆಲೆ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಈ ಸಂದರ್ಭದಲ್ಲಿ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್​ ಮಾಡಿದ ಘಟನೆ ವರದಿಯಾಗಿತ್ತು.

ಈ ಹಿನ್ನೆಲೆಯಲ್ಲಿ ರವಾಂಡ ದೇಶದ ರಾಯಭಾರ ಕಚೇರಿಯ ಅಧಿಕಾರಿ ಮೋಹನ್ ಸುರೇಶ್ ಇವತ್ತಿನ ಆಫ್ರಿಕನ್ ಪ್ರಜೆಗಳ ಪೊಲೀಸರ ಮೇಲಿನ ಹಲ್ಲೆಯ ಬಗೆಗೆ ಮಾತನಾಡಿ, ಎಲ್ಲ ಆಫ್ರಿಕನ್ ಸ್ಟುಡೆಂಟ್ಸ್ ಮಧ್ಯೆ ಕಮ್ಯೂನಿಕೇಟ್ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ಹೊಡೆಯಲು ಹೋಗಿ ಇಂಟರ್​​ನ್ಯಾಷನಲ್ ‌ಲೆವೆಲ್ ಸುದ್ದಿಯಾಗಿದೆ ಎಂದು ಹೇಳಿದರು.

ಇದನ್ನೂ ಓದಿ: ಬೆಂಗಳೂರು ಪೊಲೀಸರ ವಶದಲ್ಲಿದ್ದ ವಿದೇಶಿ ಪ್ರಜೆ ಸಾವು ಆರೋಪ: ಠಾಣೆ ಮುಂದೆ ಹೈಡ್ರಾಮಾ, ಖಾಕಿಯಿಂದ ಲಾಠಿ ಚಾರ್ಜ್

ಪೊಲೀಸರ ಮೇಲೆ ಹಲ್ಲೆ ಮಾಡಲಿಕ್ಕೆ ಮುಂದಾಗಬಾರದು, ಪೊಲೀಸರು ತಮ್ಮ ಡ್ಯೂಟಿ ಮಾಡಿದ್ದಾರೆ. ಸತ್ತವನು ವಿದ್ಯಾರ್ಥಿಯೇ ಅಲ್ಲ ಎಂದರು. ಆ ವ್ಯಕ್ತಿ ಅಕ್ರಮವಾಗಿ ರಾಜಧಾನಿಯಲ್ಲಿ ವಾಸವಾಗಿದ್ದನು. ಅಂಬಾಸಿಡರ್ ಜೊತೆ ಮಾತಾಡಿದ್ದೇನೆ. ಒರಿಜಿನಲ್ ಪಾಸ್ ಪೊರ್ಟ್ ಇಲ್ಲ. ಅವೆಲ್ಲವನ್ನು ಚೆಕ್ ರಾಯಭಾರ ಕಚೇರಿಯಲ್ಲಿ ಪರಿಶೀಲನೆ ಮಾಡುತ್ತೇವೆ. ಹೇಳಬೇಕೆಂದರೆ ಶೇ. 10 ರಷ್ಟು ಜನ ಸ್ಟೂಡೆಂಟ್ಸ್ ಆಗಿ ಡ್ರಗ್ ಪೆಡ್ಲಿಂಗ್ ನಗರದಲ್ಲಿ ಮಾಡುತ್ತಾರೆ ಎಂದು ಮಾಹಿತಿ ನೀಡಿದರು. ಇದೀಗ ಪ್ರಕರಣ ಸಿ.ಐ.ಡಿ.ಗೆ ವರ್ಗಾಯಿಸಲಾಗಿದ್ದು ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆಗೆ ಮುಂದಾಗಿದ್ದಾರೆ.

ABOUT THE AUTHOR

...view details