ಬೆಂಗಳೂರು: ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿ ಹುದ್ದೆಗೆ ಕೊಡಗು ಮೂಲದ ವಕೀಲ ಚೆಪ್ಪುಡಿರ ಮೊನ್ನಪ್ಪ ಪೂಣಚ್ಚ ಅವರ ಹೆಸರು ಪರಿಗಣಿಸುವಂತೆ ಕೇಂದ್ರಕ್ಕೆ ಸುಪ್ರೀಂಕೋರ್ಟ್ ಮತ್ತೊಮ್ಮೆ ಶಿಫಾರಸು ಮಾಡಿದೆ.
ಮಂಗಳವಾರದಂದು ( ಫೆಬ್ರವರಿ 1) ನಡೆದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ಕೊಲಿಜಿಯಂ ಸಭೆಯ ವೇಳೆ ಈ ನಿರ್ಧಾರ ಕೈಗೊಳ್ಳಲಾಗಿದೆ.
ಸಿ ಎಂ ಪೂಣಚ್ಚ ಅವರ ಹೆಸರನ್ನು ಸುಪ್ರೀಂಕೋರ್ಟ್ ಕೊಲಿಜಿಯಂ 2021ರ ಅಕ್ಟೋಬರ್ನಲ್ಲಿ ಮೊದಲ ಬಾರಿಗೆ ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿ ಹುದ್ದೆಗೆ ಶಿಫಾರಸು ಮಾಡಿತ್ತು. ಶಿಫಾರಸು ಪರಿಗಣಿಸದ ಕೇಂದ್ರ ಸರ್ಕಾರ, ಕಡತವನ್ನು ಕೊಲಿಜಿಯಂಗೆ ಹಿಂದಿರುಗಿಸಿತ್ತು.