ಕರ್ನಾಟಕ

karnataka

ETV Bharat / city

ಬೆಂಗಳೂರು ವಿವಿ ಉಳಿಕೆ ಸೀಟ್​ಗಳ ಪ್ರವೇಶ ಪ್ರಕ್ರಿಯೆಗೆ ದಿನಾಂಕ ನಿಗದಿ

ಬೆಂಗಳೂರು ವಿಶ್ವವಿದ್ಯಾಲಯ ಹಾಗೂ ಸಂಯೋಜಿತ ಕಾಲೇಜುಗಳಲ್ಲಿ ಫೆಬ್ರವರಿ 22, 23 ಮತ್ತು 24 ರಂದು ಬೆಳಿಗ್ಗೆ 9 ಗಂಟೆಯಿಂದ 2020-21ನೇ ಸಾಲಿನ ಸ್ನಾತಕೋತ್ತರ ಕೋರ್ಸ್​ಗಳ ಉಳಿಕೆ ಸೀಟ್​ಗಳ ಪ್ರವೇಶ ಪ್ರಕ್ರಿಯೆ ನಡೆಯಲಿದೆ. ವಿದ್ಯಾರ್ಥಿಗಳು ಪ್ರವೇಶ ಪ್ರಕ್ರಿಯೆಯ ನಿಗದಿತ ಸಮಯದಲ್ಲಿ ಮೂಲ ದಾಖಲೆಗಳು ಹಾಗೂ ಶುಲ್ಕ ಪಾವತಿಸಬೇಕೆಂದು ಬೆಂಗಳೂರು ವಿವಿ ಪ್ರಕಟಣೆ ಹೊರಡಿಸಿದೆ.

Admission process for the remaining seats of the Bangalore VV
ಬೆಂಗಳೂರು ವಿವಿ ಸ್ನಾತಕೋತ್ತರ ಕೋರ್ಸ್​ಗಳ ಉಳಿಕೆ ಸೀಟ್​ಗಳ ಪ್ರವೇಶ ಪ್ರಕ್ರಿಯೆಗೆ ದಿನಾಂಕ ನಿಗದಿ

By

Published : Feb 17, 2021, 6:59 AM IST

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯ ಹಾಗೂ ಸಂಯೋಜಿತ ಕಾಲೇಜುಗಳಲ್ಲಿ 2020-21ನೇ ಸಾಲಿನ ಸ್ನಾತಕೋತ್ತರ ಕೋರ್ಸ್​ಗಳ ಉಳಿಕೆ ಸೀಟ್​ಗಳ ಪ್ರವೇಶ ಪ್ರಕ್ರಿಯೆಯು ಫೆಬ್ರವರಿ 22, 23 ಮತ್ತು 24 ರಂದು ಬೆಳಗ್ಗೆ 9 ಗಂಟೆಯಿಂದ ನಡೆಯಲಿದೆ.

ಬೆಂಗಳೂರು ವಿವಿ ಸ್ನಾತಕೋತ್ತರ ಕೋರ್ಸ್​ಗಳ ಉಳಿಕೆ ಸೀಟ್​ಗಳ ಪ್ರವೇಶ ಪ್ರಕ್ರಿಯೆಗೆ ದಿನಾಂಕ ನಿಗದಿ

22 ಮತ್ತು 24ರಂದು ಜ್ಞಾನಭಾರತಿ ಹಾಗೂ ಹೆಚ್.ಎನ್. ಸಭಾಂಗಣದಲ್ಲಿ ಅರ್ಥಶಾಸ್ತ್ರ, ಇತಿಹಾಸ, ರಾಜ್ಯಶಾಸ್ತ್ರ ವಿಷಯಕ್ಕೆ ಸಂಬಂಧಿಸಿದ ಪ್ರವೇಶ ಪ್ರಕ್ರಿಯೆ ನಡೆಯಲಿದೆ. ಅದೇ ದಿನ ರಸಾಯನಶಾಸ್ತ್ರ, ಜೀವಶಾಸ್ತ್ರ ಸೇರಿದಂತೆ ಉಳಿದ ಎಲ್ಲಾ ವಿಷಯಗಳ ಪ್ರವೇಶ ಪ್ರಕ್ರಿಯೆ ಪ್ರೊ. ಕೆ.ವೆಂಕಟಗಿರಿ ಗೌಡ ಸಭಾಂಗಣ ಹಾಗೂ ಜ್ಞಾನಭಾರತಿ ಆವರಣದಲ್ಲಿರುವ ಸಂಬಂಧಪಟ್ಟ ಸ್ನಾತಕೋತ್ತರ ವಿಭಾಗಗಳಲ್ಲಿ ನಡೆಯಲಿದೆ.

ಓದಿ:ರಾಜ್ಯದಲ್ಲಿ ಅಕ್ರಮ ಪಡಿತರ ಚೀಟಿ ಹಾವಳಿ: ಈವರೆಗೆ ಪತ್ತೆ ಮಾಡಿದ ಅಕ್ರಮ ಪಡಿತರ ಚೀಟಿ ಎಷ್ಟು ಗೊತ್ತಾ?

22 ಮತ್ತು 23ರಂದು ಜ್ಞಾನಭಾರತಿ ಕ್ಯಾಂಪಸ್​​ನಲ್ಲಿರುವ ಪ್ರೊ. ಎಂ.ಎಸ್. ತಿಮ್ಮಪ್ಪ ಸಭಾಂಗಣದ ಮನಃಶಾಸ್ತ್ರ ಬ್ಲಾಕ್​ನಲ್ಲಿ ವಾಣಿಜ್ಯಶಾಸ್ತ್ರ (ಎಂ.ಕಾಂ) ಪ್ರವೇಶ ಪ್ರಕ್ರಿಯೆ ನಡೆಯಲಿದೆ.

ವಿದ್ಯಾರ್ಥಿಗಳು ಪ್ರವೇಶ ಪ್ರಕ್ರಿಯೆಯ ನಿಗದಿತ ಸಮಯದಲ್ಲಿ ಮೂಲ ದಾಖಲೆಗಳು ಹಾಗೂ ಶುಲ್ಕ ಪಾವತಿಸಬೇಕೆಂದು ಬೆಂಗಳೂರು ವಿವಿ ಪ್ರಕಟಣೆ ಹೊರಡಿಸಿದೆ.

ABOUT THE AUTHOR

...view details