ಕರ್ನಾಟಕ

karnataka

ETV Bharat / city

ಏಷ್ಯನ್​​​ ಅಭಿವೃದ್ಧಿ ಬ್ಯಾಂಕ್​​ನೊಂದಿಗೆ 500 ಮಿಲಿಯನ್ ಡಾಲರ್ ಸಾಲದ ಒಪ್ಪಂದಕ್ಕೆ ಬಿಎಂಆರ್​ಸಿಎಲ್ ಸಹಿ

ಏಷ್ಯನ್ ಡೆವೆಲಪ್​ಮೆಂಟ್​ ಬ್ಯಾಂಕ್​ನೊಂದಿಗೆ ಬಿಎಂಆರ್​ಸಿಎಲ್ ಸುಮಾರು 500 ಮಿಲಿಯನ್ ಡಾಲರ್​ ಸಾಲದ ಒಪ್ಪಂದ ಮಾಡಿಕೊಂಡಿದೆ.

adb-signed-with-bmrcl
ಏಷ್ಯನ್​​​ ಅಭಿವೃದ್ಧಿ ಬ್ಯಾಂಕ್​​ನೊಂದಿಗೆ 500 ಮಿಲಿಯನ್ ಡಾಲರ್ ಸಾಲದ ಒಪ್ಪಂದಕ್ಕೆ ಬಿಎಂಆರ್​ಸಿಎಲ್ ಸಹಿ

By

Published : Aug 20, 2021, 12:39 AM IST

ಬೆಂಗಳೂರು:ಏಷನ್ ಅಭಿವೃದ್ಧಿ ಬ್ಯಾಂಕ್​​ನೊಂದಿಗೆ 500 ಮಿಲಿಯನ್ ಡಾಲರ್ ಸಾಲದ ಒಪ್ಪಂದಕ್ಕೆ ಬಿಎಂಆರ್​ಸಿಎಲ್ (ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ) ಸಂಸ್ಥೆ ಗುರುವಾರ ಸಹಿ ಹಾಕಿದೆ.

ಮೆಟ್ರೋ ರೈಲು ಯೋಜನೆಯ ಅಡಿಯಲ್ಲಿ 53.19 ಕಿ.ಮೀ ಉದ್ದದ ಹೊರ ವರ್ತುಲ ರಸ್ತೆಯನ್ನು ರೂ.14,188 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಗೊಳಿಸಲು ಭಾರತ ಸರ್ಕಾರ ಜೂನ್ 2021ರಲ್ಲಿ ಅನುಮೋದನ ನೀಡಿತ್ತು. ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಾಲದ ರೂಪದಲ್ಲಿ ಈಗಾಗಲೇ ರೂ. 3,973 ಕೋಟಿ ರೂ ಬಿಡುಗಡೆ ಮಾಡಿವೆ. ಹೊಸ ಮಾರ್ಗಗಳ ಭೂಸ್ವಾಧೀನದ ವೆಚ್ಚವಾದ 2,762 ಕೋಟಿ ರೂ ರಾಜ್ಯ ಸರ್ಕಾರ ಭರಿಸುತ್ತಿದೆ ಎಂದು ಸಂಸ್ಥೆ ತಿಳಿಸಿದೆ.

318 ಮಿಲಿಯನ್ ಡಾಲರ್ ( 2317 ಕೋಟಿ ರೂ.) ಹಣವನ್ನು ಈಗಾಗಲೇ ಜೈಕಾ ಸಂಸ್ಥೆ ಸಾಲದ ರೂಪದಲ್ಲಿ ಕೊಡಲಿದೆ. ಉಳಿದ 500 ಮಿಲಿಯನ್ ಡಾಲರ್ (3,643 ಕೋಟಿ ರೂಪಾಯಿ) ಕೊಡಲು ಏಷ್ಯನ್ ಅಭಿವೃದ್ಧಿ ಬ್ಯಾಂಕ್ ಒಪ್ಪಿಕೊಂಡಿದ್ದು ಇಂದು ಪತ್ರಗಳಿಗೆ ಸಹಿ ಮಾಡಲಾಗಿದೆ ಎಂದು ಬಿಎಂಆರ್​ಸಿಎಲ್ ಹೇಳಿದೆ.

ಈ ಒಪ್ಪಂದದೊಂದಿಗೆ ಬೆಂಗಳೂರು ಮೆಟ್ರೋ ರೈಲು ಯೋಜನೆಯ 2ಎ ಮತ್ತು 2ಬಿ ಹಂತಗಳಿಗೆ ಬೇಕಾಗಿರುವ ಆರ್ಥಿಕ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ನಮ್ಮ ಮೆಟ್ರೋ ಸಂಸ್ಥೆ ಮಾಹಿತಿ ನೀಡಿದೆ.

ABOUT THE AUTHOR

...view details