ಬೆಂಗಳೂರು : ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಬೈಕ್ ಅಪಘಾತದಿಂದ ಬನ್ನೇರುಘಟ್ಟದ ಅಪೋಲೊ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ಮಿದುಳು ನಿಷ್ಕ್ರಿಯ ಆಗಿರುವ ಕುರಿತು ಈಗಾಗಲೇ ವೈದ್ಯರು ಖಚಿತ ಪಡಿಸಿದ್ದು, ಸದ್ಯ ಸಂಚಾರಿ ವಿಜಯ್ ಅಂಗಾಂಗ ದಾನಕ್ಕೆ ಕುಟುಂಬಸ್ಥರು ಸಮ್ಮತಿ ಸೂಚಿಸಿದ್ದಾರೆ. ಆಸ್ಪತ್ರೆಯಲ್ಲಿ ಎರಡನೇ ಅಪ್ನಿಯಾ ಟೆಸ್ಟ್ ಆರಂಭವಾಗಿದೆ.
ಅಪ್ನಿಯಾದಲ್ಲಿ ಒಟ್ಟು 10 ರೀತಿಯ ಟೆಸ್ಟ್‌ಗಳು ನಡೆಯಲಿದ್ದು, ಈ ಪರೀಕ್ಷೆಗಳ ವೇಳೆ ಮೆದುಳು ಪ್ರತಿಕ್ರಿಯಿಸದೆ ಇದ್ದರೆ ಬ್ರೈನ್ ಡೆಡ್ ಎಂದು ಘೋಷಣೆ ಮಾಡಲಾಗತ್ತೆ. ಬಳಿಕ ಅಂಗಾಂಗ ತೆಗೆಯುವ ಪ್ರಕ್ರಿಯೆ ಶುರುವಾಗಲಿದೆ.
ಅಂಗಾಂಗ ಕಸಿ ಪ್ರಕ್ರಿಯೆ ಹೇಗೆ?
ಮಧ್ಯಾಹ್ನ 12 ಗಂಟೆಯಲ್ಲಿ ಅಪ್ನಿಯಾ ಟೆಸ್ಟ್ ಮಾಡಲಾಗಿದ್ದು, 6 ಗಂಟೆಯ ಅಂತರದ ಬಳಿಕ ಇದೀಗ ಮತ್ತೊಂದು ಟೆಸ್ಟ್ ಮಾಡಲಾಗುತ್ತೆ. ಅಪ್ನಿಯಾ ಟೆಸ್ಟ್‌ನಲ್ಲಿ ಮೆದುಳು ಕೆಲಸ ಮಾಡುತ್ತಿದೆಯಾ ಎನ್ನುವುದನ್ನು ಖಚಿತಪಡಿಸಿಕೊಳ್ಳಲಾಗತ್ತೆ. ಕಣ್ಣಿನ ಮೇಲೆ ಹತ್ತಿಯಿಂದ ಸವರುವುದು, ಕಿವಿಯಲ್ಲಿ ತಣ್ಣೀರು ಹಾಕುವುದು ಸೇರಿದಂತೆ ಹೀಗೆ 10 ಟೆಸ್ಟ್ ಮಾಡಲಾಗತ್ತೆ.
ಈ ಪರೀಕ್ಷೆಗಳಲ್ಲಿ ಮೆದುಳು ಸ್ಪಂದಿಸದೇ ಇದ್ದರೆ ಬ್ರೈನ್ ಡೆಡ್ ಎಂದು ಘೋಷಣೆ ಮಾಡಲಾಗತ್ತೆ. ಬಳಿಕ ವೈದ್ಯರ ತಂಡ ವಿಜಯ್ ಅವರ ಕುಟುಂಬದವರಿಂದ Form 10ಕ್ಕೆ ಸಹಿ ಪಡೆಯುತ್ತೆ. ಇದಾದ ನಂತರ ಅಂಗಾಂಗ ದಾನದ ಒಪ್ಪಿಗೆ ಪತ್ರಕ್ಕೂ ಕುಟುಂಬದವರಿಂದ ಸಹಿ ಪಡೆಯಲಾಗತ್ತೆ.
ಇದನ್ನೂ ಓದಿ: ಸಂಚಾರಿ ವಿಜಯ್ ಅವರ ತೆರೆಕಾಣಬೇಕಾದ ಸಿನಿಮಾಗಳೆಷ್ಟು ಗೊತ್ತಾ?
ನಂತರ ಆಪರೇಷನ್ ಥಿಯೇಟರ್‌ನಲ್ಲಿ ಅಂಗಾಂಗ ತೆಗೆಯುವ ಪ್ರಕ್ರಿಯೆ ನಡೆಯಲಿದ್ದು, ಬ್ರೈನ್ ಡೆಡ್ ಆದ ನಟನ ಹೃದಯ, ಶ್ವಾಸಕೋಶ, ಕಿಡ್ನಿ, ಕಣ್ಣು, ಪ್ಯಾಂಕ್ರಿಯಾಸ್ ತೆಗೆಯಬಹುದು. ಮತ್ತೊಂದು ವೈದ್ಯರ ತಂಡ ಅಂಗಾಂಗ ಪಡೆಯುವ ರೋಗಿಗಳ ಬಗ್ಗೆ ಮಾಹಿತಿ ಕಲೆ ಹಾಕಿ ತಯಾರಿರುವಂತೆ ಆಸ್ಪತ್ರೆಗಳಿಗೆ ಸೂಚನೆ ನೀಡಿರುತ್ತದೆ.
ಅಂಗಾಂಗ ತೆಗೆದ ಬಳಿಕ ಅದರಲ್ಲಿನ ಬ್ಲಡ್ ಸೆಲ್‌ಗಳನ್ನ ತೆಗೆದು ಲಿಕ್ವಿಡ್ ಹಾಕಿ ಐಸ್ ಬಾಕ್ಸ್‌ನಲ್ಲಿ ಪ್ಯಾಕ್ ಮಾಡಲಾಗುತ್ತೆ. ಕಿಡ್ನಿಯನ್ನು ಜಯನಗರ TTK ಬ್ಲಡ್ ಬ್ಯಾಂಕ್‌ಗೆ ಕಳಿಸಿಕೊಡಲಾಗತ್ತೆ. ಅಲ್ಲಿ DNA ಮ್ಯಾಚ್ ಆಗುವ ರೋಗಿಗಳನ್ನು ಪತ್ತೆ ಮಾಡಿ ನಂತರ ಕಿಡ್ನಿ ಕಸಿಗೆ ಕಳಿಸಿಕೊಡಲಾಗುತ್ತೆ. ಇಂದು ರಾತ್ರಿಯೊಳಗೆ ಎಲ್ಲಾ ಪ್ರಕ್ರಿಯೆಗಳು ಮುಗಿಯಲಿವೆ.