ಕರ್ನಾಟಕ

karnataka

ETV Bharat / city

Kannada Movie '100': ಸಿನಿಮಾ ವೀಕ್ಷಣೆಗೆ ಆಗಮಿಸುವಂತೆ ಗೃಹ ಸಚಿವರಿಗೆ ರಮೇಶ್ ಅರವಿಂದ್ ಆಹ್ವಾನ - '100' ಸಿನಿಮಾ

ರಮೇಶ್ ಅರವಿಂದ್ ನಟಿಸಿ, ನಿರ್ದೇಶಿಸಿರುವ '100' ಸಿನಿಮಾ ನ.19ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈ ಹಿನ್ನೆಲೆಯಲ್ಲಿ ಸಿನಿಮಾ ವೀಕ್ಷಣೆಗೆ ಆಗಮಿಸುವಂತೆ ಗೃಹ ಸಚಿವ ಆರಗ ಜ್ಞಾನೇಂದ್ರ (Home Minister Araga Jnanendra) ಅವರಿಗೆ ನಟ ರಮೇಶ್ ಅರವಿಂದ್ (Actor Ramesh Aravind) ಆಹ್ವಾನ ನೀಡಿದರು.

Actor Ramesh Aravind invite home minister to watch 100 cinema
ಸಿನಿಮಾ ವೀಕ್ಷಣೆಗೆ ಆಗಮಿಸಿವಂತೆ ಗೃಹ ಸಚಿವರನ್ನು ಆಹ್ವಾನಿಸಿದ ರಮೇಶ್ ಅರವಿಂದ್

By

Published : Nov 11, 2021, 2:58 PM IST

ಬೆಂಗಳೂರು:ಕೊರೊನಾ ಲಾಕ್​​ಡೌನ್ ನಂತರ ಸಿನಿಮಾ‌ರಂಗದ ಚಟುವಟಿಕೆಗಳು ಗರಿಗೆದರಿವೆ. ಬಿಡುಗಡೆಗೆ ಸಿದ್ದವಾಗಿರುವ ತಮ್ಮ ನೂತನ ಸಿನಿಮಾ '100' ವೀಕ್ಷಣೆಗೆ ಆಗಮಿಸುವಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ನಟ ರಮೇಶ್ ಅರವಿಂದ್ (Actor Ramesh Aravind) ಆಹ್ವಾನ ನೀಡಿದ್ದಾರೆ.


ಗೃಹ ಸಚಿವರ ಗೃಹ ಕಚೇರಿಗೆ ಭೇಟಿ ನೀಡಿದ ರಮೇಶ್ ಅರವಿಂದ್ ಸಚಿವರನ್ನು ಭೇಟಿಯಾಗಿ ನೂತನವಾಗಿ ಬಿಡುಗಡೆಗೆ ಸಿದ್ಧವಿರುವ ಸಿನಿಮಾ ಬಗ್ಗೆ ವಿವರಣೆ ನೀಡಿದರು. ಈ ವೇಳೆ, ಸೈಬರ್ ಕ್ರೈಂ ಆಧಾರಿತ ಕಥಾ ಹಂದರವುಳ್ಳ ಚಿತ್ರ ವೀಕ್ಷಣೆಗೆ ಬರುವಂತೆ ಮನವಿ ಮಾಡಿದರು.

ಸಿನಿಮಾ ನಿರ್ಮಾಪಕ ರಮೇಶ್ ರೆಡ್ಡಿ ಹಾಗು ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ:ನವೆಂಬರ್ 19ರಂದು '100' ಚಿತ್ರ ರಾಜ್ಯಾದ್ಯಂತ ಬಿಡುಗಡೆ: ರಮೇಶ ಅರವಿಂದ್​

ABOUT THE AUTHOR

...view details