ನಟ ರಮೇಶ್ ಅರವಿಂದ್ ಕೊರೊನಾ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಈ ಬಗ್ಗೆ ವಿಡಿಯೋ ಮಾಡಿರುವ ಅವರು, ನಿಮಗೆ ಸಣ್ಣ ಲಕ್ಷಣ ಕಂಡುಬಂದರೆ ಪ್ರಭಾವ ಬಳಸಿ ಆಸ್ಪತ್ರೆಗೆ ಅನಗತ್ಯವಾಗಿ ದಾಖಲಾಗಬೇಡಿ ಎಂದು ಮನವಿ ಮಾಡಿದ್ದಾರೆ.
ಪ್ರಭಾವ ಬಳಸಿ ಅನಗತ್ಯವಾಗಿ ಆಸ್ಪತ್ರೆಗೆ ದಾಖಲಾಗಬೇಡಿ..ರಮೇಶ್ ಅರವಿಂದ್ ಮನವಿ - Sandalwood actor Ramesh arvind
ಕೆಮ್ಮು, ನೆಗಡಿ ಕಾಣಿಸಿಕೊಳ್ಳುತ್ತಿದ್ದಂತೆ ಪ್ರಭಾವ ಬಳಸಿ ಅನಗತ್ಯವಾಗಿ ಆಸ್ಪತ್ರೆಗೆ ದಾಖಲಾಗಬೇಡಿ. ರಾಜ್ಯದಲ್ಲಿ ಕೆಲವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಬೆಡ್ ಸಿಗುತ್ತಿಲ್ಲ. ಆದ್ದರಿಂದ ಮನೆಯಲ್ಲೇ ಚಿಕಿತ್ಸೆ ಪಡೆಯುವ ಮೂಲಕ ಅಗತ್ಯವಿರುವವರಿಗೆ ಬೆಡ್ ಬಿಟ್ಟುಕೊಡಿ ಎಂದು ನಟ ರಮೇಶ್ ಅರವಿಂದ್ ಮನವಿ ಮಾಡಿದ್ದಾರೆ.
ಸಣ್ಣ ಲಕ್ಷಣ ಇದ್ದಲ್ಲಿ, ಮನೆಯಲ್ಲೇ ಚಿಕಿತ್ಸೆ ಪಡೆದು ಅವಶ್ಯಕತೆ ಇರುವ ರೋಗಿಗಳಿಗೆ ಬೆಡ್ ಸಮಸ್ಯೆ ಆಗದಂತೆ ನೋಡಿಕೊಳ್ಳಿ ಎಂದು ನಟ ರಮೇಶ್ ಅರವಿಂದ್ ಮನವಿ ಮಾಡಿದ್ದಾರೆ. ಸರ್ಕಾರ ರಮೇಶ್ ಅರವಿಂದ್ ಅವರನ್ನು ಕೊರೊನಾ ನಿಯಂತ್ರಣ ರಾಯಭಾರಿಯನ್ನಾಗಿ ಆಯ್ಕೆ ಮಾಡಿದೆ. ರಕ್ತದಲ್ಲಿ ಆಕ್ಸಿಜನ್ ಪ್ರಮಾಣ ಕಡಿಮೆ ಇರುವವರಿಗೆ ಚಿಕಿತ್ಸೆ ಅವಶ್ಯಕತೆ ಇರುತ್ತದೆ. ಅದರೆ ಪ್ರಭಾವ ಬಳಸಿ, ಹಣ ಬಳಸಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುವ ಬದಲು ಮನೆಯಲ್ಲೇ ಚಿಕಿತ್ಸೆ ಪಡೆದು ಅವಶ್ಯಕತೆ ಇರುವವರಿಗೆ ಸಹಕರಿಸಿ.
ಕೊರೊನಾ ಮಾರಣಾಂತಿಕ ಕಾಯಿಲೆ ಅಲ್ಲ, ನೆಗಡಿ, ಕೆಮ್ಮು, ಶೀತದ ರೀತಿ ಅದೊಂದು ಚಿಕ್ಕ ಕಾಯಿಲೆ ಅಷ್ಟೇ. ಎಷ್ಟೋ ಜನರಿಗೆ ಅದು ಬಂದು ಹೋಗಿರುತ್ತದೆ. ಆದರೆ ಅವರಿಗೆ ತಿಳಿದಿರುವುದಿಲ್ಲ. ಕೊರೊನಾಗೆ ಹೆದರುವ ಅಗತ್ಯ ಇಲ್ಲ, ಆದರೆ ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಿ, ಆಗ್ಗಾಗ್ಗೆ ಕೈ ತೊಳೆಯುವ ಮೂಲಕ ಎಚ್ಚರಿಕೆಯಿಂದ ಇದ್ದರೆ ನಿಮ್ಮ ಬಳಿ ಕೊರೊನಾ ಸುಳಿಯುವುದಿಲ್ಲ ಎಂದು ರಮೇಶ್ ಅರವಿಂದ್ ಹೇಳಿದ್ದಾರೆ.