ಕರ್ನಾಟಕ

karnataka

'ಯುವರತ್ನ'ನ ಅಂತಿಮಯಾತ್ರೆ: ತೆರೆದ ಗಾಜಿನ ವಾಹನದಲ್ಲಿ ಪುನೀತ್​​ ಕೊನೆ ಪಯಣ

By

Published : Oct 31, 2021, 6:32 AM IST

Updated : Oct 31, 2021, 7:16 AM IST

ನಟ ಪುನೀತ್‍ರಾಜ್‍ಕುಮಾರ್ ಪಾರ್ಥಿವ ಶರೀರದ ಮೆರವಣಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಹಾದು ಹೋಗಿದ್ದು, ಈ ವೇಳೆ ಸಾವಿರಾರು ಅಭಿಮಾನಿಗಳು ನೆಚ್ಚಿನ ನಟನ ಅಂತಿಮ ದರ್ಶನ ಪಡೆದುಕೊಂಡರು.

Actor Puneeth Rajkumar's Last Rites
Actor Puneeth Rajkumar's Last Rites

ಬೆಂಗಳೂರು:ಹೃದಯಾಘಾತದಿಂದ ನಿಧನರಾಗಿರುವ ಸ್ಯಾಂಡಲ್​ವುಡ್​ ಪವರ್​​ ಸ್ಟಾರ್ ಪುನೀತ್ ರಾಜ್​ಕುಮಾರ್ ಅವರ​ ಪಾರ್ಥಿವ ಶರೀರದ ಅಂತಿಮಯಾತ್ರೆ ಕಂಠೀರವ ಸ್ಟುಡಿಯೋ ಆವರಣ ತಲುಪಿದೆ.

'ಯುವರತ್ನ'ನ ಅಂತಿಮಯಾತ್ರೆ... ಗಾಜಿನ ವಾಹನದಲ್ಲಿ ಪುನೀತ್​​ ಕೊನೆ ಪಯಣ

ಕಂಠೀರವ ಸ್ಟೇಡಿಯಂನಿಂದ ಬೆಳಗ್ಗೆ 5 ಗಂಟೆಗೆ ಅಂತಿಮ ಯಾತ್ರೆ ಆರಂಭವಾಯಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಳಗ್ಗೆ ಕಂಠೀರವ ಸ್ಟೇಡಿಯಂಗೆ ಆಗಮಿಸಿ, ಪುನೀತ್ ರಾಜ್​ಕುಮಾರ್​ ಅವರ ಹಣೆಗೆ ಮುತ್ತಿಟ್ಟರು. ಇದಾದ ಬಳಿಕ ಹೂವಿನಿಂದ ಅಲಂಕೃತಗೊಂಡ ತೆರೆದ ಗಾಜಿನ ವಾಹನದಲ್ಲಿ ಜನ ಮೆಚ್ಚಿದ ನಟನ ಪಾರ್ಥಿವ ಶರೀರದ ಮೆರವಣಿಗೆ ಆರಂಭಿಸಲಾಯಿತು.

ಕಂಠೀರವ ಕ್ರೀಡಾಂಗಣದ ಹಿಂಭಾಗದ ದ್ವಾರದಲ್ಲಿ ಮೆರವಣಿಗೆ ಪ್ರಾರಂಭಿಸಿ, RRMR ರಸ್ತೆ, ಹಡ್ಸನ್ ವೃತ್ತ, ಪೊಲೀಸ್ ಕಾರ್ನರ್, ಕೆ.ಜಿ. ರಸ್ತೆ, ಮೈಸೂರು ಬ್ಯಾಂಕ್ ವೃತ್ತ, ಪೋಸ್ಟ್ ಆಫೀಸ್ ರಸ್ತೆ, ಕೆ.ಆರ್. ವೃತ್ತದಲ್ಲಿ ಎಡಕ್ಕೆ ತಿರುಗಿ ಶೇಷಾದ್ರಿ ರಸ್ತೆ, ಮಹಾರಾಣಿ ಮೇಲು ಸೇತುವೆ, ಸಿಐಡಿ ಜಂಕ್ಷನ್, ಚಾಲುಕ್ಯ ವೃತ್ತ, ಹಳೇ ಹೈಗ್ರೌಂಡ್ಸ್ ಜಂಕ್ಷನ್‍ನಲ್ಲಿ ಎಡಕ್ಕೆ ತಿರುವು ಪಡೆದು ಟಿ. ಚೌಡಯ್ಯ ರಸ್ತೆ, ವಿಂಡ್ಸರ್ ಮ್ಯಾನರ್ ಜಂಕ್ಷನ್, ಬಿಡಿಎ ಮುಖ್ಯ ಕಚೇರಿ, ಪಿ.ಜಿ. ಹಳ್ಳಿ ಕ್ರಾಸ್, ಕಾವೇರಿ ಜಂಕ್ಷನ್ ಬಳಿಕ, ಬಾಷ್ಯಂ ವೃತ್ತ, ಸ್ಯಾಂಕಿ ರಸ್ತೆ, ಮಲ್ಲೇಶ್ವರಂ 18ನೇ ಕ್ರಾಸ್‍, ಮಾರಮ್ಮ ವೃತ್ತ, ಬಿಎಚ್‍ಇಎಲ್ ಸರ್ವೀಸ್ ರಸ್ತೆ, ಬಿಎಚ್‍ಇಎಲ್ ವೃತ್ತ, ಯಶವಂತಪುರ ವೃತ್ತ, ಮೆಟ್ರೊ ಷಾಪ್, ಮಾರಪ್ಪನ ಪಾಳ್ಯ, ಗೋವರ್ಧನ ಥಿಯೇಟರ್ ಜಂಕ್ಷನ್, ಆರ್.ಎಂ.ಸಿ ಯಾರ್ಡ್ ಪೊಲೀಸ್ ಠಾಣೆ, ಎಂಇಐ ಬಸ್ ನಿಲ್ದಾಣ, ಗೊರಗುಂಟೆಪಾಳ್ಯ ಜಂಕ್ಷನ್, ಎಇಎಂಟಿಐ ಜಂಕ್ಷನ್, ಲಾರಿ ಅಸೋಸಿಯೇಷನ್ ಕಚೇರಿ, ಎಫ್‍ಟಿಐ ವೃತ್ತ ಮಾರ್ಗವಾಗಿ ಸಾಗಿ ಅಂತಿಮ ಯಾತ್ರೆ ಕಂಠೀರವ ಸ್ಟುಡಿಯೋ ತಲುಪಿತು.

ಪುನೀತ್ ಪಾರ್ಥಿವ ಶರೀರದ ಅಂತಿಮ ಯಾತ್ರೆ ಶುರುವಾಗುತ್ತಿದ್ದಂತೆ ಸಾವಿರಾರು ಅಭಿಮಾನಿಗಳು ನೆಚ್ಚಿನ ನಟನಿಗೆ ಜೈಕಾರ ಹಾಕಿದರು. ಜೊತೆಗೆ, ರಸ್ತೆಯ ಎರಡೂ ಕಡೆಗಳಲ್ಲಿ ನಿಂತು ಜಯಘೋಷ ಮೊಳಗಿಸಿದರು.

Last Updated : Oct 31, 2021, 7:16 AM IST

ABOUT THE AUTHOR

...view details