ಕರ್ನಾಟಕ

karnataka

ETV Bharat / city

ಪುನೀತ್ ರಾಜ್​​ಕುಮಾರ್​​​​​ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ... ನಟ ಯೋಗಿ ಸಾಥ್​ - ಪುನೀತ್ ರಾಜ್​ಕುಮಾರ್ ಅಂತ್ಯಕ್ರಿಯೆ

ಸ್ಯಾಂಡಲ್​ವುಡ್​ನ ಪವರ್​ ಸ್ಟಾರ್ ಪುನೀತ್ ರಾಜ್​ಕುಮಾರ್ ಅಂತ್ಯಕ್ರಿಯೆ ಇಂದು ನಡೆಯಲಿದ್ದು, ಅದಕ್ಕಾಗಿ ಕಂಠೀರವ ಸ್ಟುಡಿಯೋದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

Actor puneeth Rajkumar last rites
Actor puneeth Rajkumar last rites

By

Published : Oct 31, 2021, 4:46 AM IST

ಬೆಂಗಳೂರು:ಚಂದನವನದ ಯುವರತ್ನ ಪುನೀತ್ ರಾಜ್​ಕುಮಾರ್​ ಅಂತ್ಯಕ್ರಿಯೆ ಇಂದು ನಡೆಯಲಿದ್ದು, ಅದಕ್ಕಾಗಿ ಕಂಠೀರವ ಸ್ಟುಡಿಯೋದಲ್ಲಿ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬೆಳಗ್ಗೆ 3 ಗಂಟೆಯಿಂದಲೇ ಪ್ರಾರಂಭವಾದ ಅಂತ್ಯಸಂಸ್ಕಾರದ ಸಿದ್ಧತೆಗಳಿಗೆ ಲೂಸ್ ಮಾದ ಖ್ಯಾತಿಯ ನಟ ಯೋಗಿ ಸಾಥ್ ನೀಡಿದರು.

ಪುನೀತ್ ರಾಜ್​​ಕುಮಾರ್​​​​​ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ

ಕಂಠೀರವ ಕ್ರೀಡಾಂಗಣದಿಂದ ಅಂತಿಮ ಯಾತ್ರೆ ಆರಂಭಗೊಳ್ಳಲಿದ್ದು, ಇದಾದ ಬಳಿಕ ಕಂಠೀರವ ಸ್ಟುಡಿಯೋದಲ್ಲಿ ಪುನೀತ್​ ರಾಜ್​ ಕುಮಾರ್​ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವದೊಂದಿಗೆ ನಡೆಯಲಿದೆ.

ಇದನ್ನೂ ಓದಿರಿ:ಪುನೀತ್ ರಾಜ್​​ಕುಮಾರ್​ ಅಂತ್ಯಕ್ರಿಯೆ: ಕುಟುಂಬ ಸದಸ್ಯರು, ಗಣ್ಯರಿಗೆ ಮಾತ್ರ ಅವಕಾಶ

ಕುಟುಂಬ ಸದಸ್ಯರ ಇಚ್ಛೆಯಂತೆ ಬೆಳಗ್ಗೆ 10 ಗಂಟೆಗೆ ಡಾ. ರಾಜ್ ಕುಮಾರ್, ಪಾರ್ವತಮ್ಮ ರಾಜ್ ಕುಮಾರ್ ಅವರ ಅಂತ್ಯಸಂಸ್ಕಾರ ನಡೆಸಿದ ರೀತಿಯಲ್ಲೇ ಶಾಸ್ತ್ರೋಕ್ತವಾಗಿ ಅಂತ್ಯಕ್ರಿಯೆ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ.

ABOUT THE AUTHOR

...view details