ಕರ್ನಾಟಕ

karnataka

ETV Bharat / city

ಮನೆ ಮಾರಾಟದ ಬಗ್ಗೆ ಅಭಿನಯ ಚಕ್ರವರ್ತಿ ಹೇಳಿದ್ದೇನು? - actor kiccha sudeep watch mane maratakkide film

ಸ್ಯಾಂಡಲ್​ವುಡ್​ನಲ್ಲಿ ಕ್ಯಾಚೀ ಟೈಟಲ್​ನಿಂದ ಗಮನ ಸೆಳೆದು, ಕಳೆದ ವಾರವಷ್ಟೇ ರಿಲೀಸ್ ಆಗಿದ್ದ ಮನೆ ಮಾರಾಟಕ್ಕಿದೆ ಸಿನಿಮಾವನ್ನ ನಟ ಕಿಚ್ಚ ಸುದೀಪ್​ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮನೆ ಮಾರಾಟಕ್ಕಿದೆ ಸಿನಿಮಾ
ಮನೆ ಮಾರಾಟಕ್ಕಿದೆ ಚಿತ್ರತಂಡದೊಂದಿಗೆ ಸುದೀಪ್​

By

Published : Nov 27, 2019, 12:37 PM IST

ಬೆಂಗಳೂರು:ಸ್ಯಾಂಡಲ್​ವುಡ್​ನಲ್ಲಿ ಕ್ಯಾಚೀ ಟೈಟಲ್​ನಿಂದ ಗಮನ ಸೆಳೆದು, ಕಳೆದ ವಾರವಷ್ಟೇ ರಿಲೀಸ್ ಆಗಿದ್ದ ’ಮನೆ ಮಾರಾಟಕ್ಕಿದೆ’ ಸಿನಿಮಾವನ್ನ ನಟ ಕಿಚ್ಚ ಸುದೀಪ್​ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮನೆ ಮಾರಾಟಕ್ಕಿದೆ ಸಿನಿಮಾದ ಬಗ್ಗೆ ಟ್ವೀಟ್​ ಮಾಡಿ,ಮೆಚ್ಚುಗೆ ವ್ಯಕ್ತಪಡಿಸಿದ ಸುದೀಪ್​

ಹಾರರ್ ಕಾನ್ಸೆಪ್ಟ್​ನೊಂದಿದೆ ಪಕ್ಕಾ ಕಾಮಿಡಿ ಎಂಟಟೈನ್​ನೊಂದಿಗೆ ಬಂದ ಸಿನಿಮಾ ಇದಾಗಿದೆ. ಚಿತ್ರತಂಡ ಸುದೀಪ್​ಗಾಗಿ ವಿಶೇಷ ಪ್ರದರ್ಶನ ಏರ್ಪಾಡು ಮಾಡಿದ್ದು, ನಿರ್ದೇಶಕ ಮಂಜು ಸ್ವರಾಜ್, ನಟ ರವಿಶಂಕರ್, ನಟಿ ಕಾರುಣ್ಯ ರಾಮ್, ನಟರಂಗ, ಸಂಗೀತ ನಿರ್ದೇಶಕ ಅಭಿಮಾನ್ ರಾಯ್ ಜೊತೆ ಸಿನಿಮಾ ನೋಡಿದ ಕಿಚ್ಚ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮನೆ ಮಾರಾಟಕ್ಕಿದೆ ಚಿತ್ರತಂಡದೊಂದಿಗೆ ಸುದೀಪ್​

ಸಿನಿಮಾದ ಬಗ್ಗೆ ಟ್ವೀಟ್​ ಮಾಡಿರುವ ಸುದೀಪ್​, ಈ ಸಿನಿಮಾದ ಹೊಸ ಐಡಿಯಾ ಹಾಗೂ ಕಾನ್ಸೆಪ್ಟ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಶೃತಿ ಹರಿಹರನ್ ಈ ಸಿನಿಮಾದಲ್ಲಿ ನೋಡಲು ಚೆನ್ನಾಗಿ ಕಾಣ್ತಾರೆ. ಸಾಧು ಕೋಕಿಲ, ರವಿಶಂಕರ್, ಚಿಕ್ಕಣ್ಣ, ಕುರಿ ಪ್ರತಾಪ್ ಚೆನ್ನಾಗಿ ನಟಿಸಿದ್ದಾರೆ ಎಂದು ಮನೆ ಮಾರಾಟಕ್ಕಿದೆ ಚಿತ್ರತಂಡದ ಬೆನ್ನು ತಟ್ಟಿದ್ದಾರೆ.

ABOUT THE AUTHOR

...view details