ಕರ್ನಾಟಕ

karnataka

ETV Bharat / city

ದರ್ಶನ್ ಬಹಳ ಶಕ್ತಿಯುತರು, ವಿವಾದವನ್ನು ಬಗೆಹರಿಸಿಕೊಳ್ತಾರೆ: ನಿಖಿಲ್ ಕುಮಾರಸ್ವಾಮಿ - ನಟ ದರ್ಶನ್​ ಸಾಲ ವಂಚನೆ ಪ್ರಕರಣ

ದರ್ಶನ್ ಶಕ್ತಿಯುತರಾಗಿದ್ದು, ವಿವಾದವನ್ನು ಸ್ವತಃ ಅವರೇ ಬಗೆಹರಿಸಿಕೊಳ್ಳುತ್ತಾರೆ ಎಂದು ನಟ ಹಾಗೂ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್​ ಕುಮಾರಸ್ವಾಮಿ ಹೇಳಿದರು.

actor-darshan-will-solve-his-controversial
ನಿಖಿಲ್​ ಕುಮಾರಸ್ವಾಮಿ

By

Published : Jul 13, 2021, 5:13 PM IST

ದೇವನಹಳ್ಳಿ:ನಟ ದರ್ಶನ್​ ಅವರು ನಮ್ಮ ಚಿತ್ರರಂಗದ ಹಿರಿಯ ಕಲಾವಿದರು. ಅವರು ಶಕ್ತಿಯುತವಾಗಿದ್ದು, ವಿವಾದವನ್ನು ಬಗೆಹರಿಸಿಕೊಳ್ಳುತ್ತಾರೆ ಎಂದು ನಿಖಿಲ್​ ಕುಮಾರಸ್ವಾಮಿ ಹೇಳಿದ್ದಾರೆ.

ನಿಖಿಲ್​ ಕುಮಾರಸ್ವಾಮಿ ಹೇಳಿಕೆ

ಪಕ್ಷ ಸಂಘಟನೆ ವಿಚಾರಕ್ಕೆ ದೇವನಹಳ್ಳಿಗೆ ಆಗಮಿಸಿದ್ದ ನಿಖಿಲ್, ದರ್ಶನ್ ಬಹಳ ಶಕ್ತಿಯುತವಾಗಿದ್ದಾರೆ. ಹಿರಿಯ ನಟರಾಗಿ ನಮ್ಮ ಇಂಡಸ್ಟ್ರಿಗೆ ಕೊಡುಗೆ ಕೊಟ್ಟಿದ್ದಾರೆ. ಕಳೆದ ಎರಡು-ಮೂರು ದಿನಗಳಿಂದ ವಿವಾದ ನಡೆಯುತ್ತಿದೆ. ಭಗವಂತ ಅವರಿಗೆ ಶಕ್ತಿ ಕೊಟ್ಟಿದ್ದು, ವಿವಾದವನ್ನು ಸ್ವತಃ ಅವರೇ ಬಗೆಹರಿಸಿಕೊಳ್ಳುತ್ತಾರೆ ಎಂದು ಹೇಳಿದರು.

ಸುಮಲತಾ ವಿಚಾರಕ್ಕೆ ಪ್ರತಿಕ್ರಿಯಿಸುತ್ತಾ, ಕೆಲವು ದಿನಗಳಿಂದ ನಡೆದ ನಾಟಕದ ಚರ್ಚೆ ಮಾಡುವ ಬದಲು ಜನರೇ ತೀರ್ಮಾನ ಮಾಡಲೆಂದು ವರಿಷ್ಠರು ಮತ್ತು ನಮ್ಮ ನಾಯಕರು ತೀರ್ಮಾನಿಸಿದ್ದಾರೆ ಮತ್ತು ಟ್ವೀಟ್ ಸಹ ಮಾಡಲಾಗಿದೆ. ಈ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲವೆಂದರು.

ABOUT THE AUTHOR

...view details