ಬೆಂಗಳೂರು: ಕೊರೊನಾದಿಂದ ಇಡೀ ದೇಶವೇ ತತ್ತರಿಸಿ ಹೋಗಿದ್ದು, ಇದರ ಎಫೆಕ್ಟ್ ಎಲ್ಲ ಕ್ಷೇತ್ರದ ಮೇಲು ಆಗಿದೆ. ಜನರು ಕಷ್ಟ ಪಡುತ್ತಿದ್ದು, ಕೋವಿಡ್‌ನಿಂದಾಗಿ ಪ್ರಾಣಿ ಸಂಕುಲಕ್ಕೂ ಸಮಸ್ಯೆಯಾಗಿದೆ. ಲಾಕ್‌ಡೌನ್‌ನಿಂದಾಗಿ ಕರ್ನಾಟಕ ರಾಜ್ಯದ ಮೃಗಾಲಯಗಳ ನಿರ್ವಹಣೆ ಮಾಡುವುದು ಕಷ್ಟವಾಗಿತ್ತು. ಹೀಗಾಗಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕರ್ನಾಟಕದಲ್ಲಿರುವ 9 ಮೃಗಾಲಯದ ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳಲು ನೀಡಿದ ಕರೆಗೆ ಅಭೂತಪೂರ್ವ ಬೆಂಬಲ ಸಿಕ್ಕಿದ್ದು, ಇಂದು ದತ್ತು ಮತ್ತು ದೇಣಿಗೆ ರೂಪದಲ್ಲಿ 01 ಕೋಟಿ ರೂಪಾಯಿಗೂ ಹೆಚ್ಚಿನ ಮೊತ್ತ ಹರಿದು ಬಂದಿದೆ.
ಓದಿ: ದರ್ಶನ್ ಮನವಿಗೆ ಅಭಿಮಾನಿಗಳಿಂದ ಅಭೂತಪೂರ್ವ ಬೆಂಬಲ.. ರಾಜ್ಯದ ಜೂಗಳಿಗೆ ಹರಿದುಬಂತು ಹಣ
ಡಿ ಬಾಸ್ ಮನವಿಗೆ ಸ್ಪಂದಿಸಿರುವ ಅಭಿಮಾನಿಗಳು, ಪ್ರಾಣಿಗಳನ್ನು ದತ್ತು ಪಡೆಯುತ್ತಿದ್ದಾರೆ. ಮೃಗಾಲಯಗಳಲ್ಲಿ ಪ್ರಾಣಿ - ಪಕ್ಷಿಗಳನ್ನ ದತ್ತು ಪಡೆದಿದ್ದರಿಂದ ನಾಲ್ಕು ದಿನಕ್ಕೆ 70 ಲಕ್ಷ ರೂಪಾಯಿ ದೇಣಿಗೆ ಸಂಗ್ರಹವಾಗಿತ್ತು. ಇದೀಗ ಆರು ದಿನಗಳಲ್ಲಿ 3,881 ಮಂದಿ ರಾಜ್ಯದ ವಿವಿಧ ಮೃಗಾಲಯಗಳಲ್ಲಿ ಪ್ರಾಣಿಗಳನ್ನು ದತ್ತು ಪಡೆದಿದ್ದಾರೆ. ಇದರಿಂದ 1 ಕೋಟಿ ರೂಪಾಯಿಗೂ ಹೆಚ್ಚಿನ ಹಣ ದೇಣಿಗೆ ರೂಪದಲ್ಲಿ ಸಂಗ್ರಹವಾಗಿದೆ ಎಂದು ಜೂ ಅಥಾರಿಟಿ ಆಫ್ ಕರ್ನಾಟಕ ಟ್ವೀಟ್ ಮೂಲಕ ಮಾಹಿತಿ ನೀಡಿದೆ.
ದರ್ಶನ್ ಮಾತಿಗೆ ಓಗೊಟ್ಟು ಅಭಿಮಾನಿಗಳು, ಸಿನಿಮಾ ಸ್ನೇಹಿತರು ಹಾಗು ಪ್ರಾಣಿ ಪ್ರಿಯರು ಪ್ರಾಣಿ - ಪಕ್ಷಿಗಳನ್ನ ದತ್ತು ಸ್ವೀಕರಿಸಿದ್ದಾರೆ. ಈ ಮೂಲಕ ನಟ ದರ್ಶನ್ ಗೆ ಜೂ ಆಫ್ ಕರ್ನಾಟಕ ಧನ್ಯವಾದ ಹೇಳಿದೆ.