ಬೆಂಗಳೂರು :ಒಂದು ಟ್ವೀಟ್ ಹಾಕಿದ್ದಕ್ಕೆ ಸುಮೋಟೊ ಕೇಸ್ ಹಾಕಿ ಜೈಲಿಗೆ ಕಳುಹಿಸಿದ್ದಾರೆ. ಪಬ್ಲಿಕ್ ಸರ್ವೆಂಟ್ ಅಂದ್ರೆ ಸಾರ್ವಜನಿಕರ ಟ್ಯಾಕ್ಸ್ ಹಣ ವೇತನ ಪಡೆಯುವವರು. ಸಿಎಂ, ಎಂಎಲ್ಎ, ಜಡ್ಜ್ ಯಾರೇ ಆಗಿದ್ದರು ಯಾರೂ ಕೂಡ ಪ್ರಶ್ನಾತೀತರಲ್ಲ. ಪ್ರಶ್ನೆ ಮಾಡುವುದು ನಮ್ಮ ಹಕ್ಕು ಮಾತ್ರ ಅಲ್ಲ, ನಮ್ಮ ಜವಾಬ್ದಾರಿ ಎಂದು ನಟ ಚೇತನ್ ಹೇಳಿದರು.
ಜೈಲಿನಿಂದ ಬಿಡುಗಡೆ ಬಳಿಕ ಪರಪ್ಪನ ಅಗ್ರಹಾರದ ಬಳಿ ಮಾಧ್ಯಮಗಳಿಗೆ ನಟ ಚೇತನ್ ಪ್ರತಿಕ್ರಿಯೆ ನೀಡಿದರು. ನಮಗೆ ನ್ಯಾಯ ಸಿಗುತ್ತದೆ. ನಮ್ಮ ಹೋರಾಟ ಮುಂದುವರಿಯತ್ತೆ. ಬುದ್ದ, ಬಸವ, ಅಂಬೇಡ್ಕರ್, ಪೆರಿಯಾರ್, ಕುವೆಂಪು ಅವರ ಸಮಾನತೆಯ ತತ್ವದ ಮೇಲೆ ಉತ್ತಮ ಸಮಾಜ ಕಟ್ಟುತ್ತೇವೆ. ಸಮಾನತೆಗಾಗಿ ನಮ್ಮ ಹೋರಾಟ ಮುಂದುವರಿಯುತ್ತೆ ಎಂದರು.
ಪೊಲೀಸರು ನನ್ನ ವಿರುದ್ಧ ಸುಮೋಟೊ ಕೇಸ್ ಹಾಕಿರುವುದು ಅಸಂವಿಧಾನಿಕವಾದದ್ದು. ಏಕೆಂದ್ರೆ, ನನ್ನ ಟ್ವೀಟ್ನಲ್ಲಿ ಯಾವುದೇ ಪ್ರಚೋದನಕಾರಿ ಹೇಳಿಕೆ, ಅವಹೇಳನ ಮಾಡುವಂತದ್ದು ಇರಲಿಲ್ಲ. ಆದ್ರೂ ಕೇಸ್ ಹಾಕಿದ್ರು. ಆದ್ರೆ, ಕೆಲವರು ರೇಪ್ ಬಗ್ಗೆ, ಅಲ್ಪಸಂಖ್ಯಾತರ ಬಗ್ಗೆ ಮಾತಾಡ್ತಾರೆ. ಅವರ ಮೇಲೆ ಕೇಸ್ ಹಾಕಿಲ್ಲ. ನಾನು ಮಹಿಳಾ ವಿರೋಧಿ ಹೇಳಿಕೆ ನೀಡಿದ್ದನ್ನು ಪ್ರಶ್ನಿಸಿ ಟ್ವೀಟ್ ಮಾಡಿದ್ದಕ್ಕೆ ಅರೆಸ್ಟ್ ಮಾಡಿದ್ದಾರೆ ಎಂದು ನಟ ಚೇತನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.