ಬೆಂಗಳೂರು : ಲಾಕ್‌ಡೌನ್ ವೇಳೆ ಸುಖಾಸುಮ್ಮನೆ ಓಡಾಡುತ್ತಿದ್ದವರ ವಾಹನಗಳನ್ನು ಪೊಲೀಸರು ಸೀಜ್ ಮಾಡಿದ್ದು, ಬೆಂಗಳೂರಿನಲ್ಲಿ ಇದುವರೆಗೂ 1,151 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.
ಎರಡನೇ ಅಲೆಯ ಕೊರೊನಾ ಮಹಾಮಾರಿ ಎಲ್ಲೆಡೆ ರಣಕೇಕೆ ಹಾಕುತ್ತಿದೆ. ಎಷ್ಟೋ ಜನರಿಗೆ ಸರಿಯಾದ ಚಿಕಿತ್ಸೆ ಹಾಗೂ ಬೆಡ್ ಸಿಗದೇ ಸಾವನಪ್ಪಿದ್ದಾರೆ. ಹೀಗಾಗಿ, ಸರ್ಕಾರ ವೀಕೆಂಡ್ ಕರ್ಪ್ಯೂ ಜಾರಿ ಮಾಡಿದೆ.
ಅಗತ್ಯ ವಸ್ತುಗಳಿರುವ ಅಂಗಡಿಗಳನ್ನು ಹೊರತು ಪಡಿಸಿ ಇನ್ನುಳಿದ ಎಲ್ಲಾ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಲಾಗಿದೆ. ಆದ್ರೂ ಕೂಡ ಕೆಲವರು ಮನೆಯಿಂದ ಹೊರಗೆ ಬರುತ್ತಿದ್ದಾರೆ. ಹೀಗಾಗಿ, ನಗರದಲ್ಲಿ ಕರ್ಪ್ಯೂ ಉಲ್ಲಂಘಿಸಿದವರ ವಿರುದ್ಧ ಪೋಲಿಸ್ ಇಲಾಖೆ ಕ್ರಮಕೈಗೊಂಡಿದೆ.
ನಗರದಲ್ಲಿ ಸುಖಾ ಸುಮ್ಮನೆ ಓಡಾಡುತ್ತಿದ್ದವರ ವಾಹನಗಳನ್ನು ಸೀಜ್ ಮಾಡಿದ್ದು, ಬೆಂಗಳೂರಿನಲ್ಲಿ ಇದುವರೆಗೂ 1,151 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಅನಗತ್ಯವಾಗಿ ಹೊರ ಬಂದವರ ಬೈಕ್, ಕಾರುಗಳನ್ನು ಪೊಲೀಸರು ಮುಲಾಜಿಲ್ಲದೆ ಸೀಜ್ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಈವರೆಗೂ 1,151 ವಾಹನಗಳು ಸೀಜ್ ಮಾಡಲಾಗಿದೆ. ಇದರಲ್ಲಿ ದ್ವಿಚಕ್ರ ವಾಹನ - 1,041, ಆಟೋಗಳು - 45, ಕಾರು -65 ಸೇರಿವೆ.