ಕರ್ನಾಟಕ

karnataka

ETV Bharat / city

ವಕೀಲ ಜಗದೀಶ್ ಫೇಸ್ ಬುಕ್ ಖಾತೆ ಸ್ಥಗಿತಗೊಳಿಸುವಂತೆ ಕೋರ್ಟ್ ಆದೇಶ - ಫೇಸ್ ಬುಕ್ ಸ್ಟಾರ್ ವಕೀಲ ಜಗದೀಶ್ ಖಾತೆ ರದ್ದುಪಡಿಸಲು ಕೋರ್ಟ್ ಆದೇಶ

ಪ್ರಚೋದನಕಾರಿ ಹೇಳಿಕೆಗಳನ್ನು ತೆರವು ಮಾಡುವಂತೆ ನಗರದ 1ನೇ ಎಸಿಎಂಎಂ ಕೋರ್ಟ್ ಫೇಸ್ ಬುಕ್ ಲೀಗಲ್ ಮ್ಯಾನೇಜರ್​​​ಗೆ ನಿರ್ದೇಶಿಸಿದೆ. ಕಳೆದ ಫೆ. 12ರಂದು ಕೋರ್ಟ್ ಆದೇಶ ಹೊರಡಿಸಿದ್ದು, ಅದರಂತೆ ಜಗದೀಶ್ ಖಾತೆ ಸ್ಥಗಿತಗೊಳಿಸಲಾಗಿದೆ.

ವಕೀಲ ಜಗದೀಶ್
ವಕೀಲ ಜಗದೀಶ್

By

Published : Feb 15, 2022, 10:08 PM IST

ಬೆಂಗಳೂರು:ಫೇಸ್ ಬುಕ್ ಸ್ಟಾರ್ ವಕೀಲ ಜಗದೀಶ್ ಮಹದೇವ್ ಅವರ ಫೇಸ್ ಬುಕ್ ಹಾಗೂ ಇನ್​​ಸ್ಟಾಗ್ರಾಂ ಖಾತೆಗಳನ್ನು ಸ್ಥಗಿತಗೊಳಿಸುವಂತೆ ನಗರದ 1ನೇ ಎಸಿಎಂಎಂ ಕೋರ್ಟ್ ಫೇಸ್ ಬುಕ್ ಸಂಸ್ಥೆಗೆ ಆದೇಶಿಸಿದೆ.

ವಕೀಲ ಜಗದೀಶ್ ಫೇಸ್ ಬುಕ್​​​ನಲ್ಲಿ ಐಪಿಎಸ್ ಅಧಿಕಾರಿ ರವಿ ಚೆನ್ನಣ್ಣವರ್ ವಿರುದ್ಧ ಮಾನಹಾನಿಕರ ಹೇಳಿಕೆಗಳನ್ನು ನೀಡಿದ್ದರು. ಇದೇ ವೇಳೆ, ಹಿರಿಯ ಪೊಲೀಸ್ ಅಧಿಕಾರಿಗಳು, ಮಾಧ್ಯಮಗಳು ಸೇರಿದಂತೆ ಹಲವರ ವಿರುದ್ಧ ಕ್ಷುಲ್ಲಕ ಹಾಗೂ ತೇಜೋವಧೆ ಹೇಳಿಕೆಗಳನ್ನು ಲೈವ್ ಮೂಲಕ ಪೋಸ್ಟ್ ಮಾಡಿದ್ದರು.

ಈ ಪ್ರಚೋದನಕಾರಿ ಹೇಳಿಕೆಗಳನ್ನು ತೆರವು ಮಾಡುವಂತೆ ನಗರದ 1ನೇ ಎಸಿಎಂಎಂ ಕೋರ್ಟ್ ಫೇಸ್ ಬುಕ್ ಲೀಗಲ್ ಮ್ಯಾನೇಜರ್​​​ಗೆ ನಿರ್ದೇಶಿಸಿದೆ. ಕಳೆದ ಫೆ. 12ರಂದು ಕೋರ್ಟ್ ಆದೇಶ ಹೊರಡಿಸಿದ್ದು, ಅದರಂತೆ ಜಗದೀಶ್ ಖಾತೆ ಸ್ಥಗಿತಗೊಳಿಸಲಾಗಿದೆ.

ವಕೀಲ ಜಗದೀಶ್ ಫೇಸ್ ಬುಕ್ ಖಾತೆ ಕಾಣೆಯಾದ ಮೇಲೆ ಅವರ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದು. ಜಗದೀಶ್ ಖಾತೆ ಡಿಲೀಟ್ ಮಾಡಿದ್ದು ಯಾರು. ಯಾಕೆ ಡಿಲೀಟ್ ಮಾಡಿದರು ಎಂಬ ಪ್ರಶ್ನೆಗಳನ್ನು ಎತ್ತಿದ್ದರು. ಇದೇ ವೇಳೆ, ಜಗದೀಶ್ ಬಾಯಿ ಮುಚ್ಚಿಸಲು ಹಾಗೂ ಭ್ರಷ್ಟರನ್ನ ರಕ್ಷಿಸಲು ಪೊಲೀಸ್ ಅಧಿಕಾರಿಗಳೇ ಖಾತೆಗಳನ್ನು ಡಿಲೀಟ್ ಮಾಡಿದ್ದಾರೆ ಎಂದು ಆರೋಪಿಸಿದ್ದರು.

For All Latest Updates

TAGGED:

ABOUT THE AUTHOR

...view details