ಕರ್ನಾಟಕ

karnataka

ETV Bharat / city

ಯುವತಿ ಮೇಲೆ ಆ್ಯಸಿಡ್ ದಾಳಿ : ಪೂರ್ವ ತಯಾರಿ ಮಾಡಿಕೊಂಡಿದ್ದ ಕಿರಾತಕ! - Acid Attack On Young Woman at Bengaluru

Acid Attack On Young Woman : ಯುವತಿಯ ಹೇಳಿಕೆ ದಾಖಲಿಸಿದ ಕಾಮಾಕ್ಷಿ ಪಾಳ್ಯ ಪೊಲೀಸರು ಎಫ್ಐಆರ್ ದಾಖಲಿಕೊಂಡು ದಾಳಿಕೋರನ ಪತ್ತೆಗಾಗಿ ಮೂರು ತಂಡ ರಚಿಸಿಕೊಂಡಿದ್ದಾರೆ..

Acid Attack On Young Woman
ಆ್ಯಸಿಡ್ ದಾಳಿ ಪ್ರಕರಣ

By

Published : Apr 29, 2022, 12:33 PM IST

ಬೆಂಗಳೂರು :ನಗರದ ಸುಂಕದ‌ಕಟ್ಟೆಯಲ್ಲಿ ನಡೆದ ಯುವತಿ ಮೇಲಿನ ಆ್ಯಸಿಡ್ ದಾಳಿಗೆ ಆರೋಪಿ ನಾಗೇಶ್ ಪೂರ್ವ ತಯಾರಿ ಮಾಡಿಕೊಂಡಿದ್ದ ಎಂಬ ವಿಚಾರ ಬಯಲಾಗಿದೆ. ಹೇಗೆ ದಾಳಿ ಮಾಡಬೇಕು, ನಂತರ ಹೇಗೆ ಎಸ್ಕೇಪ್ ಆಗಬೇಕು ಎಂಬುದನ್ನ ಆರೋಪಿ ಮೊದಲೇ ಪ್ಲ್ಯಾನ್ ಮಾಡಿಕೊಂಡಿದ್ದನಂತೆ.

ಬೆಳಗ್ಗೆ 8.15ಕ್ಕೆ ತಂದೆಯ ಜತೆ ಮನೆ ಬಿಟ್ಟಿದ್ದ ಯುವತಿ 8.30ರ ಸುಮಾರಿಗೆ ಮುತ್ತೂಟ್ ಫೈನಾನ್ಸ್ ಕಚೇರಿ ತಲುಪಿದ್ದಳು. ಥಿನ್ ಗ್ಲೌಸ್ ಹಾಗೂ ಬಾಟಲಿಯಲ್ಲಿ ಆ್ಯಸಿಡ್ ಇಟ್ಟುಕೊಂಡಿದ್ದ ಆರೋಪಿ ಅಷ್ಟೊತ್ತಿಗಾಗಲೇ ಆಟೋದಲ್ಲಿ ಯುವತಿಗಾಗಿ ಕಾದು ಕುಳಿತಿದ್ದ. ಕಚೇರಿ ಬಳಿ ಬಂದಿದ್ದ ಯುವತಿ ಸಿಬ್ಬಂದಿ ಯಾರೂ ಇಲ್ಲದ‌ ಕಾರಣ ಹೊರಗಡೆ ನಿಂತಿದ್ದಳು.

8:35ರ ಸುಮಾರಿಗೆ ಆರೋಪಿ ನಾಗೇಶ್ ಕೈಯಲ್ಲಿ ಬಾಟಲ್‌ ಹಿಡಿದು ಬರುವುದನ್ನ ಗಮನಿಸಿದ್ದ ಯುವತಿ ಮೆಟ್ಟಿಲು ಇಳಿದು ಓಡಿದ್ದಳು. ಅದೇ ಸಂದರ್ಭದಲ್ಲಿ ಕಿರಾತಕ ಆಕೆಯ ತಲೆ‌ ಮೇಲಿಂದ ಸುಮಾರು ಒಂದು ಲೀಟರ್‌ನಷ್ಟು ಆ್ಯಸಿಡ್ ಸುರಿದಿದ್ದ. ಅಂದುಕೊಂಡ ಕೆಲಸ ಆಗುತ್ತಿದ್ದಂತೆ ಆರೋಪಿ ನೇರವಾಗಿ ಆಟೋದಲ್ಲೇ ಕೋರ್ಟ್‌ನತ್ತ ಹೋಗಿದ್ದ‌.

ಕೋರ್ಟ್ ಬಳಿ ಕಂಡ ಕಂಡ ವಕೀಲರ ಕಾಲು ಹಿಡಿದು ಪ್ರಕರಣದ ಪರ ವಕಾಲತ್ತು ವಹಿಸುವಂತೆ ಬೇಡಿಕೊಂಡಿದ್ದ. ಆದರೆ, ಆ್ಯಸಿಡ್ ದಾಳಿ ಪ್ರಕರಣವಾಗಿದ್ದರಿಂದ ಯಾರೊಬ್ಬರೂ ಆರೋಪಿಯ ಪರ ವಕಾಲತ್ತು ವಹಿಸುವ ಮನಸ್ಸು ಮಾಡಿರಲಿಲ್ಲ. ಇದರಿಂದಾಗಿ ಭಯಗೊಂಡ ನಾಗೇಶ್ ಬೆಂಗಳೂರು ಬಿಟ್ಟು ಪರಾರಿಯಾಗಿದ್ದ.

ಇತ್ತ ಆ್ಯಸಿಡ್ ದಾಳಿಯಿಂದ ನರಳಿದ್ದ ಯುವತಿ ತನ್ನ ತಂದೆಗೆ ಕರೆ ಮಾಡಿ ಕಚೇರಿ ಬಳಿ ಕರೆಸಿಕೊಂಡಿದ್ದಳು. ಬಳಿಕ 8.50ರ ಸುಮಾರಿಗೆ ಮಾಹಿತಿ ತಿಳಿದ ಪೊಲೀಸರು ಬಂದು ಆ್ಯಂಬುಲೆನ್ಸ್ ಮೂಲಕ ಸಂತ್ರಸ್ತೆಯನ್ನ ಸಮೀಪದ ಲಕ್ಷ್ಮಿ ಆಸ್ಪತ್ರೆಗೆ ರವಾನಿಸಿದ್ದರು. ಸುಮಾರು 10.40ಕ್ಕೆ ಸಂತ್ರಸ್ತೆಯ ಹೇಳಿಕೆ ದಾಖಲಿಸಿಕೊಂಡಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಸಂತ್ರಸ್ತೆಯನ್ನು 11.40ಕ್ಕೆ ಲಕ್ಷ್ಮಿ ಆಸ್ಪತ್ರೆಯಿಂದ ಸೇಂಟ್ ಜಾನ್ಸ್ ಆಸ್ಪತ್ರೆಗೆ ರವಾನಿಸಲಾಯಿತು.

ಆರೋಪಿ ಪತ್ತೆಗಾಗಿ ಮೂರು ತಂಡ ರಚನೆ : ಇತ್ತ ಯುವತಿಯ ಹೇಳಿಕೆ ದಾಖಲಿಸಿದ ಕಾಮಾಕ್ಷಿ ಪಾಳ್ಯ ಪೊಲೀಸರು ಎಫ್ಐಆರ್ ದಾಖಲಿಕೊಂಡು ದಾಳಿಕೋರನ ಪತ್ತೆಗಾಗಿ ಮೂರು ತಂಡ ರಚಿಸಿಕೊಂಡಿದ್ದಾರೆ. ಕಾಮಾಕ್ಷಿಪಾಳ್ಯ ಠಾಣಾ ಇನ್ಸ್​ಪೆಕ್ಟರ್ ಪ್ರಶಾಂತ್, ಬ್ಯಾಡರಹಳ್ಳಿ ಠಾಣಾ ಇನ್ಸ್​​ಪೆಕ್ಟರ್ ರವಿಕುಮಾರ್ ಹಾಗೂ ವಿಜಯನಗರ ಎಸಿಪಿ ತಂಡದಿಂದ ಆರೋಪಿಗಾಗಿ ಹುಡುಕಾಟ ಆರಂಭವಾಗಿದೆ. ಆ್ಯಸಿಡ್ ದಾಳಿಯ ವಿಚಾರ ತಿಳಿಯುತ್ತಿದ್ದಂತೆ ಆರೋಪಿಯ ಜತೆಗೆ ಆತನ ಇಡೀ ಕುಟುಂಬ ಕೂಡ ಪರಾರಿಯಾಗಿದ್ದು, ಹುಡುಕಾಟ ಮುಂದುವರೆದಿದೆ.

ಇದನ್ನೂ ಓದಿ:ಬೆಂಗಳೂರು: ಕೆಲಸಕ್ಕೆಂದು ತೆರಳಿದ್ದ ಯುವತಿ ಮೇಲೆ ಭಗ್ನ ಪ್ರೇಮಿಯಿಂದ ಆ್ಯಸಿಡ್ ದಾಳಿ...!

ABOUT THE AUTHOR

...view details