ಬೆಂಗಳೂರು:ಗಾಂಜಾ ಮಾರಾಟ ಮಾಡುತ್ತಿದ್ದ ನೈಜೀರಿಯಾ ಮೂಲದ ಓರ್ವನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ವಿದ್ಯಾಭ್ಯಾಸಕ್ಕಾಗಿ ಬಂದು ಗಾಂಜಾ ಮಾರಾಟ : ನೈಜೀರಿಯಾ ಮೂಲದ ಓರ್ವನ ಬಂಧನ - undefined
ವಿದ್ಯಾಭ್ಯಾಸದ ನೆಪವೊಡ್ಡಿ ಭಾರತಕ್ಕೆ ಎಂಟ್ರಿಕೊಟ್ಟು ಇಲ್ಲಿ ಗಾಂಜಾ ಸೇರಿದಂತೆ ವಿವಿಧ ಮಾದಕ ವಸ್ತುಗಳನ್ನು ಮಾರಾಟ ಮಾಡುವ ಹಲವರು ಸಿಕ್ಕಿಹಾಕಿಕೊಳ್ಳುತ್ತಾರೆ. ರಾಜಧಾನಿ ಬೆಂಗಳೂರಲ್ಲಿ ನೈಜೀರಿಯಾ ಮೂಲದ ಓರ್ವನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ರಾಮಮೂರ್ತಿನಗರ ಪೊಲೀಸ್ ಠಾಣಾ ಸರಹದ್ದಿನ ಹೊರಮಾವು ಗಾರ್ಡನ್ ಬಳಿಯ ಬಾಡಿಗೆ ಮನೆಯಲ್ಲಿ, ನೈಜೀರಿಯಾ ದೇಶದ ಯೂಸುಫ್ ಅಬ್ದುಲಾಹಿ ಎಂಬಾತ ಗಾಂಜಾ ಮಾರಾಟ ಮಾಡುತ್ತಿದ್ದ. ಖಚಿತ ಮಾಹಿತಿ ಮೇರೆಗೆ ಮಾದಕ ದ್ರವ್ಯ ದಳದ ಅಧಿಕಾರಿ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಆತನಿಂದ 10 ಕೆ.ಜಿ ತೂಕದ ಗಾಂಜಾ, ಎರಡು ಮೊಬೈಲ್ ಫೋನ್, ಪಾಸ್ ಪೋರ್ಟ್ ಹಾಗೂ ನಗದು ವಶಪಡಿಸಿಕೊಂಡಿದ್ದಾರೆ.
ತನಿಖೆಯಲ್ಲಿ ಆರೋಪಿಯು ನೈಜೀರಿಯಾದಿಂದ ವಿದ್ಯಾಭ್ಯಾಸಕ್ಕಾಗಿ ಭಾರತಕ್ಕೆ ಬಂದು, ಕಲ್ಕರೆಯಲ್ಲಿ ವಾಸ್ತವ್ಯ ಹೂಡಿ, ತಮಿಳುನಾಡು ಮೂಲದ ಆಸಾಮಿಯಿಂದ ಕೆ.ಜಿಗಟ್ಟಲೆ ಗಾಂಜಾ ಖರೀದಿ ಮಾಡಿಕೊಳ್ಳುತ್ತಿದ್ದುದಾಗಿ ಹೇಳಿಕೊಂಡಿದ್ದಾನೆ. ಬಳಿಕ ತನ್ನದೇ ಜಾಲವನ್ನ ಸೃಷ್ಟಿಸಿ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಟೆಕ್ಕಿಗಳಿಗೆ ಮಾರಾಟ ಮಾಡ್ತಿರುವ ವಿಚಾರ ಬೆಳಕಿಗೆ ಬಂದಿದೆ.