ಬೆಂಗಳೂರು:ಕಳ್ಳತನ ಪ್ರಕರಣವೊಂದರಲ್ಲಿ ಕಲಾಸಿಪಾಳ್ಯ ಪೊಲೀಸ್ ಠಾಣೆಗೆ ಕರೆತಂದಿದ್ದ ಆರೋಪಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದಾನೆ.
ಪೊಲೀಸ್ ಠಾಣೆಯಲ್ಲಿದ್ದ ಆರೋಪಿ ಎಸ್ಕೇಪ್: ಖದೀಮನಿಗೆ ಶೋಧ - ಕಲಾಸಿಪಾಳ್ಯ ಪೊಲೀಸ್ ಠಾಣೆ
ಪ್ರಕರಣವೊಂದಕ್ಕೆ ಸಂಬಂಧಿಸಿ ಇಂದು ಬೆಳಗ್ಗೆ ಕಲಾಸಿಪಾಳ್ಯ ಪೊಲೀಸರು ಠಾಣೆಗೆ ಆರೋಪಿಯನ್ನು ಕರೆತಂದಿದ್ದರು. ಠಾಣೆಯಲ್ಲಿ ಕುಳಿತಿದ್ದ ಆರೋಪಿ ಏಕಾಏಕಿ ಎಸ್ಕೇಪ್ ಆಗಿದ್ದಾನೆ. ಇದನ್ನು ಕಂಡ ಪೊಲೀಸರು ಸುಮಾರು 1 ಕಿ.ಮೀ ವರೆಗೂ ಚೇಸ್ ಮಾಡಿದರೂ ಪೊಲೀಸರಿಗೆ ಕೈಗೆ ಸಿಕ್ಕಿಲ್ಲ.
ಆರೋಪಿ ಎಸ್ಕೇಪ್
ಪ್ರಕರಣವೊಂದಕ್ಕೆ ಸಂಬಂಧಿಸಿ ಇಂದು ಬೆಳಗ್ಗೆ ಕಲಾಸಿಪಾಳ್ಯ ಪೊಲೀಸರು ಠಾಣೆಗೆ ಆರೋಪಿಯನ್ನು ಕರೆತಂದಿದ್ದರು. ಠಾಣೆಯಲ್ಲಿ ಕುಳಿತಿದ್ದ ಆರೋಪಿ ಏಕಾಏಕಿ ಪರಾರಿ ಆಗಿದ್ದಾನೆ. ಇದನ್ನು ಕಂಡ ಪೊಲೀಸರು ಸುಮಾರು 1 ಕಿ.ಮೀ ವರೆಗೂ ಚೇಸ್ ಮಾಡಿದರೂ ಪ್ರಯೋಜನವಾಗಿಲ್ಲ.
ಸದ್ಯ ಆರೋಪಿ ತಲೆಮರೆಸಿಕೊಂಡಿದ್ದಾನೆ. ಆತನ ಹೆಸರು, ಎಷ್ಟು ಪ್ರಕರಣದಲ್ಲಿ ಭಾಗಿಯಾಗಿದ್ದ ಎಂಬುದರ ಬಗ್ಗೆ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.