ಬೆಂಗಳೂರು: ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿಯೊಬ್ಬ ಮೂತ್ರ ವಿಸರ್ಜನೆಗೆ ಎಂದು ಹೇಳಿ ಹೋಗಿ ಪೊಲೀಸರಿಂದ ತಪ್ಪಿಸಿಕೊಂಡು ಹೋಗುವಾಗ ಸ್ಕೈವಾಕ್ನಿಂದ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ಕೆ.ಆರ್.ಪುರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ನಡೆದಿದೆ.
ಕೆ.ಆರ್ ಪುರಂ ಠಾಣಾ ವ್ಯಾಪ್ತಿಯ ವಿಜಿನಾಪುರ ನಿವಾಸಿ ಶಕ್ತಿವೇಲು ಸಾವನ್ನಪ್ಪಿದ್ದ ಆರೋಪಿ. ಇತ್ತೀಚೆಗೆ ಶಕ್ತಿವೇಲು ಪತ್ನಿ ಸಂಗೀತಾ ಈತನ ಕಿರುಕುಳ ತಾಳಲಾರದೇ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದರು. ಪ್ರೀತಿಸಿ ಮದುವೆಯಾಗಿದ್ದ ಸಂಗೀತಾ ಹಾಗೂ ಶಕ್ತಿವೇಲು ದಾಂಪತ್ಯ ಜೀವನ ಆರಂಭದಲ್ಲಿ ಚೆನ್ನಾಗಿತ್ತು. ಆದರೆ ಕಾಲ ಕಳೆದಂತೆ ಗಂಡ ಹೆಂಡತಿ ನಡುವೆ ಕಲಹ ಶುರುವಾಗಿತ್ತು. ಇದು ಪದೇ ಪದೆ ಮರುಕಳಿಸಿತ್ತು. ಕಳೆದ ಎರಡು ದಿನಗಳ ಸಂಗೀತ ಆತ್ಮಹತ್ಯೆ ಮಾಡಿಕೊಂಡಿದ್ದರು.