ಕರ್ನಾಟಕ

karnataka

ETV Bharat / city

ಮೋಜಿನ ಜೀವನಕ್ಕೆ ಅಡ್ಡ ದಾರಿ: ಖದೀಮನಿಂದ 45 ವಿವಿಧ ದ್ವಿಚಕ್ರ ವಾಹನ ವಶ

ದ್ವಿಚಕ್ರ ವಾಹನಗಳ ಲಾಕ್ ಮುರಿದು ಕಳ್ಳತನ ಮಾಡುತ್ತಿದ್ದ ಆರೋಪಿ ಕೇವಲ ಮೂರ್ನಾಲ್ಕು ಸಾವಿರಕ್ಕೆ ದ್ವಿಚಕ್ರ ವಾಹನಗಳನ್ನು ಹಳ್ಳಿ ಜನರಿಗೆ ಮಾರಾಟ ಮಾಡುತ್ತಿದ್ದನು. ಬಂದ ಹಣದಲ್ಲಿ ಮೋಜು ಮಸ್ತಿ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

Two-wheelers confiscated by the accused
ಆರೋಪಿಯಿಂದ ವಶಕ್ಕೆ ಪಡೆದ ದ್ವಿಚಕ್ರ ವಾಹನಗಳು

By

Published : Jun 5, 2022, 12:55 PM IST

Updated : Jun 5, 2022, 1:49 PM IST

ಬೆಂಗಳೂರು: ಮೋಜಿನ ಜೀವನಕ್ಕಾಗಿ ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬೇಗೂರು ಠಾಣಾ ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶದ ಅನಂತಪುರ ಮೂಲದ ಹನುಮಂತ ರೆಡ್ಡಿ (34) ಬಂಧಿತ ಆರೋಪಿ.

ದ್ವಿಚಕ್ರ ವಾಹನಗಳ ಕೀ ಲಾಕ್ ಮುರಿದು ಕಳ್ಳತನ ಮಾಡುತ್ತಿದ್ದ ಆರೋಪಿ ಕೇವಲ ಮೂರ್ನಾಲ್ಕು ಸಾವಿರಕ್ಕೆ ದ್ವಿಚಕ್ರ ವಾಹನಗಳನ್ನು ಹಳ್ಳಿ ಜನರಿಗೆ ಮಾರಾಟ ಮಾಡುತ್ತಿದ್ದನು. ಬಂದ ಹಣದಲ್ಲಿ ಮೋಜು ಮಸ್ತಿ ಮಾಡುತ್ತಿದ್ದನು. ಇದೇ ರೀತಿ ಪುಟ್ಟೇನಹಳ್ಳಿ, ಜೆ.ಪಿ.ನಗರ, ಬೊಮ್ಮನಹಳ್ಳಿ ಸೇರಿದಂತೆ ನಗರದ ಹಲವೆಡೆ ಕಳ್ಳತನ ಮಾಡಿದ್ದನು.

ಮೋಜಿನ ಜೀವನಕ್ಕೆ ಅಡ್ಡ ದಾರಿ: ಖದೀಮನಿಂದ 45 ವಿವಿಧ ದ್ವಿಚಕ್ರ ವಾಹನ ವಶ

ಸದ್ಯ ಆರೋಪಿಯನ್ನು ಹೆಡೆಮುರಿ ಕಟ್ಟಿರುವ ಬೇಗೂರು ಠಾಣಾ ಪೊಲೀಸರು ಸರಿಸುಮಾರು 45 ಲಕ್ಷ ಮೌಲ್ಯದ 45 ವಿವಿಧ ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಮಹಾದೇವ್ ಜೋಶಿ ತಿಳಿಸಿದ್ದಾರೆ.

ಇದನ್ನೂ ಓದಿ:ಹೈದರಾಬಾದ್​​ ಗ್ಯಾಂಗ್​ರೇಪ್​​ ಪ್ರಕರಣ: ಕರ್ನಾಟಕದಲ್ಲಿ ಮೂವರು ಆರೋಪಿಗಳ ಬಂಧನ

Last Updated : Jun 5, 2022, 1:49 PM IST

ABOUT THE AUTHOR

...view details