ಕರ್ನಾಟಕ

karnataka

ETV Bharat / city

ಬೆಂಗಳೂರಲ್ಲಿ ಹೈ ಎಂಡ್ ಗಾಂಜಾ ಮಾರುತ್ತಿದ್ದ ಆರೋಪಿ ಬಂಧನ

ವಿದ್ಯಾರ್ಥಿಗಳಿಗೆ ಹಾಗೂ ಕೂಲಿ ಕಾರ್ಮಿಕರಿಗೆ ಹೈಎಂಡ್​ ಗಾಂಜಾ ಪೂರೈಕೆ ಮತ್ತು ಮಾರಾಟ ಮಾಡುತ್ತಿದ್ದ ಆರೋಪಿ ಇಮ್ರಾನ್​ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆತನ ಜೊತೆಗಿದ್ದ ಮತ್ತೋರ್ವ ತಪ್ಪಿಸಿಕೊಂಡಿದ್ದು, ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

Arrested accused Imran and drugs
ಬಂಧಿತ ಆರೋಪಿ ಇಮ್ರಾನ್​ ಹಾಗೂ ವಶಪಡಿಸಿಕೊಂಡ ಗಾಂಜಾ

By

Published : May 15, 2022, 1:12 PM IST

Updated : May 15, 2022, 2:44 PM IST

ಬೆಂಗಳೂರು :ನಗರದಲ್ಲಿ ಹೈಎಂಡ್ ಗಾಂಜಾ ಮಾರಾಟ ಮಾಡ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.‌ ಇಮ್ರಾನ್ ಬಂಧಿತ ಆರೋಪಿ. ಈತನಿಂದ 5 ಲಕ್ಷ ಮೌಲ್ಯದ ಐದು ಕೆಜಿ ಗಾಂಜಾ ಸೀಜ್ ಮಾಡಿದ್ದಾರೆ.‌ ಗಾಂಜಾ ಸೊಪ್ಪಿನ ಜೊತೆಗೆ ಗಾಂಜಾ ಹೂವನ್ನು ಕೂಡ ಹೆಚ್ಚಿನ‌ ಬೆಲೆಗೆ ಆರೋಪಿ ಮಾರಾಟ ಮಾಡುತ್ತಿದ್ದ.

1500-2000 ರೂ.ಗೆ ಒಂದು ಪ್ಯಾಕೆಟ್​ನಂತೆ ಕಾಲೇಜು ವಿದ್ಯಾರ್ಥಿಗಳು ಹಾಗೂ ನಾರ್ಥ್ ಇಂಡಿಯಾ ಕೂಲಿ ಕಾರ್ಮಿಕರಿಗೆ ಈ ಗಾಂಜಾ ಸಪ್ಲೈ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಸದ್ಯ ಬಂಧಿತನಿಂದ ಗಾಂಜಾ ಜತೆಗೆ ಮೊಬೈಲ್ ಫೋನ್, ವೇಯಿಂಗ್ ಮಶಿನ್ ಸೀಜ್ ಮಾಡಲಾಗಿದೆ. ಇಮ್ರಾನ್ ಜೊತೆಗಿದ್ದ ಮತ್ತೋರ್ವ ಆರೋಪಿ ಎಸ್ಕೇಪ್ ಆಗಿದ್ದು, ಆತನ ಪತ್ತೆಗೂ ಸಿಸಿಬಿ ಬಲೆ ಬೀಸಿದೆ.

ಇದನ್ನೂ ಓದಿ:ಧಾರವಾಡದ ಅಮ್ಮಿನಬಾವಿ ಗ್ರಾಮದ ವ್ಯಕ್ತಿ ಕೊಲೆ ಪ್ರಕರಣ : ಮೂವರು ಆರೋಪಿಗಳ ಬಂಧನ

Last Updated : May 15, 2022, 2:44 PM IST

ABOUT THE AUTHOR

...view details