ಕರ್ನಾಟಕ

karnataka

ETV Bharat / city

ಸಿಮ್ ಕಾರ್ಡ್​ ಎಗರಿಸಿ ಬ್ಯಾಂಕ್ ಖಾತೆಗೆ ಕನ್ನ ಹಾಕುತ್ತಿದ್ದ ಆರೋಪಿ ಅರೆಸ್ಟ್​ - SIM block

ಇದ್ದಕ್ಕಿದ್ದಂತೆ ನಿಮ್ಮ ಮೊಬೈಲ್ ಸಿಮ್ ಕಾರ್ಡ್ ಕೆಲಸ ಮಾಡುತ್ತಿಲ್ಲ ಎಂದರೆ ನಿರ್ಲಕ್ಷ್ಯ ವಹಿಸಬೇಡಿ. ಯಾಕಂದರೆ, ಈಶಾನ್ಯ ವಿಭಾಗದ ಸಿಇಎನ್ ಠಾಣೆ ಪೊಲೀಸರು ಸಿಮ್ ಕಾರ್ಡ್​ ಎಗರಿಸಿ ಬ್ಯಾಂಕ್ ಖಾತೆಗೆ ಕನ್ನ ಹಾಕುತ್ತಿದ್ದವನನ್ನು ಬಂಧಿಸಿ, ಆರೋಪಿಯಿಂದ 1ಲಕ್ಷದ 30 ಸಾವಿರ ರೂ. ನಗದು, 1 ಬೈಕ್ ಮತ್ತು 2 ಮೊಬೈಲ್ ವಶಕ್ಕೆ ಪಡೆದಿದ್ದಾರೆ.

arrest
ಆರೋಪಿ ಅರೆಸ್ಟ್​

By

Published : Aug 8, 2022, 12:06 PM IST

ಬೆಂಗಳೂರು: ಸಿಮ್ ಕಾರ್ಡ್ ಕದ್ದು ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕುತ್ತಿದ್ದ ಖತರ್ನಾಕ್ ಆರೋಪಿಯನ್ನ ಈಶಾನ್ಯ ವಿಭಾಗದ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಂಡ್ಯ ಮೂಲದ ಪ್ರಕಾಶ್ ಜೆ.ಬಿ (31) ಬಂಧಿತ ಆರೋಪಿ.

ಪರಿಚಯಸ್ಥರಿಂದ ಮೊಬೈಲ್ ಪಡೆಯುತ್ತಿದ್ದ ಆರೋಪಿ, ಗೊತ್ತಾಗದಂತೆ ಅವರ ಬ್ಯಾಂಕ್ ಖಾತೆಗಳಿಗೆ ಲಿಂಕ್ ಆಗಿರುವ ಸಿಮ್ ಕಾರ್ಡ್ ಕದ್ದು, ಅದೇ ರೀತಿಯ ಸಿಮ್ ಕಾರ್ಡ್ ಹಾಕಿ ವಾಪಸ್ ಕೊಡುತ್ತಿದ್ದ. ಬಳಿಕ ಅವರ ಖಾತೆಯಲ್ಲಿದ್ದ ಹಣ ಡ್ರಾ ಮಾಡುತ್ತಿದ್ದ. ಸಿಮ್ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಮೋಸ ಹೋದವರು ಹೊಸ ಸಿಮ್ ಪಡೆದು ಆಕ್ಟಿವೇಶನ್ ಮಾಡಿ ನೋಡಿದಾಗ ಹಣ ಖಾಲಿಯಾಗಿರುವುದು ಪತ್ತೆಯಾಗುತ್ತಿತ್ತು.

ಸದ್ಯಕ್ಕೆ ಆರೋಪಿಯನ್ನ ಬಂಧಿಸಿರುವ ಈಶಾನ್ಯ ವಿಭಾಗದ ಸಿಇಎನ್ ಠಾಣೆ ಪೊಲೀಸರು, 1 ಲಕ್ಷದ 30 ಸಾವಿರ ರೂ. ನಗದು, ಹಾಗೂ ವಂಚಿಸಿದ ಹಣದಿಂದ ಖರೀದಿಸಿದ್ದ ಬೈಕ್ ಮತ್ತು 2 ಮೊಬೈಲ್ ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ:ಖೈದಿಗೆ ಡ್ರಗ್ಸ್ ಸರಬರಾಜು: ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಜೈಲು ಸಹಾಯಕ ಅಧೀಕ್ಷಕ

ABOUT THE AUTHOR

...view details