ಕರ್ನಾಟಕ

karnataka

ETV Bharat / city

10 ಲಕ್ಷ ರೂ. ಮೌಲ್ಯದ ಹ್ಯಾಶ್ ಆಯಿಲ್ ಮಾರಾಟಕ್ಕೆ ಯತ್ನ: ಕೇರಳ ಮೂಲದ ವ್ಯಕ್ತಿ ಬಂಧನ - accused arrested for illegally sale hash oil

ಅಕ್ರಮವಾಗಿ 10 ಲಕ್ಷ ರೂ. ಮೌಲ್ಯದ ಹ್ಯಾಶ್ ಆಯಿಲ್ ಮಾರಾಟಕ್ಕೆ ಯತ್ನಿಸುತ್ತಿದ್ದ ಕಾಸರಗೋಡು ಮೂಲದ ಆರೋಪಿಯನ್ನ ಆಡುಗೋಡಿ ಠಾಣಾ ಇನ್ಸ್​ಪೆಕ್ಟರ್ ಮಂಜುನಾಥ್ ನೇತೃತ್ವದ ತಂಡ ದಾಳಿ ನಡೆಸಿ ಬಂಧಿಸಿದೆ..

ಆಡುಗೋಡಿ ಪೊಲೀಸ್​
ಆಡುಗೋಡಿ ಪೊಲೀಸ್​

By

Published : May 13, 2022, 1:05 PM IST

ಬೆಂಗಳೂರು: ರಾಜಧಾನಿಯಲ್ಲಿ ಮಾದಕ ವಸ್ತು ಸಾಗಾಟ ಪ್ರಕರಣಗಳು ಹೆಚ್ಚಾಗುತ್ತಿವೆ. ಇದೀಗ, ಹ್ಯಾಶ್ ಆಯಿಲ್ ಮಾರಾಟದಲ್ಲಿ ತೊಡಗಿದ್ದ ಕೇರಳ ಮೂಲದ ಆರೋಪಿಯನ್ನ ಆಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ‌. ಕಾಸರಗೋಡು ಮೂಲದ ರಾಹುಲ್ (25) ಎಂಬಾತ ಬಂಧಿತ ಆರೋಪಿ.

ಮೇ 10ರಂದು ಆಡುಗೋಡಿ ಠಾಣಾ ವ್ಯಾಪ್ತಿಯ ಮಹಾಲಿಂಗೇಶ್ವರ ಬಂಡೆ ಬಳಿ ಆರೋಪಿಯು ಗಿರಾಕಿಗಳಿಗೆ ಹ್ಯಾಶ್ ಆಯಿಲ್ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆ ಆಡುಗೋಡಿ ಠಾಣಾ ಇನ್ಸ್​ಪೆಕ್ಟರ್ ಮಂಜುನಾಥ್ ನೇತೃತ್ವದ ತಂಡ ದಾಳಿ ನಡೆಸಿ, ಮಾಲು ಸಮೇತ ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಬಂಧಿತನಿಂದ 10 ಲಕ್ಷ ರೂ. ಮೌಲ್ಯದ ಹ್ಯಾಶ್ ಆಯಿಲ್ ವಶಕ್ಕೆ ಪಡೆಯಲಾಗಿದೆ. ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಆರೋಪಿ ರಾಹುಲ್

ಇದನ್ನೂ ಓದಿ:ಬಾಲಿವುಡ್ 'ಬೇಬಿ ಡಾಲ್'​ಗೆ 41ನೇ ಜನ್ಮದಿನ ಸಂಭ್ರಮ: ಶುಭಾಶಯಗಳ ಮಹಾಪೂರ

ABOUT THE AUTHOR

...view details