ಕರ್ನಾಟಕ

karnataka

ETV Bharat / city

ಬೆಂಗಳೂರಲ್ಲಿ ಸ್ಪೈ ಕ್ಯಾಮರಾ ಬಳಸಿ ನಗ್ನ ಚಿತ್ರ ಸೆರೆ.. ಯುವತಿಗೆ ಅದೇ ಫೋಟೋ ಕಳಿಸಿ ಬ್ಲಾಕ್ ಮೇಲ್ - ಈಟಿವಿ ಭಾರತ್ ಕನ್ನಡ

ಸ್ಪೈ ಕ್ಯಾಮರಾ ಬಳಸಿ ಮಹಿಳೆಯರ ನಗ್ನ ಚಿತ್ರ ಸೆರೆ ಹಿಡಿದು ಬಳಿಕ ಹೆದರಿಸುತ್ತಿದ್ದ ಆರೋಪಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಲ್ಲಿ ಸ್ಪೈ ಕ್ಯಾಮರಾ ಬಳಸಿ ನಗ್ನ ಚಿತ್ರ ಸೆರೆ
ಬೆಂಗಳೂರಲ್ಲಿ ಸ್ಪೈ ಕ್ಯಾಮರಾ ಬಳಸಿ ನಗ್ನ ಚಿತ್ರ ಸೆರೆ

By

Published : Aug 20, 2022, 9:45 AM IST

ಬೆಂಗಳೂರು: ನಗರದಲ್ಲಿ ಸ್ಪೈ ಕ್ಯಾಮರಾ ಬಳಸಿ ಮಹಿಳೆಯರ ನಗ್ನ ಚಿತ್ರ ಸೆರೆ ಹಿಡಿದು ಬ್ಲಾಕ್ ಮೇಲ್ ಮಾಡುತ್ತಿದ್ದ ಆರೋಪಿಯನ್ನು ಈಶಾನ್ಯ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಸ್ಪೈ ಕ್ಯಾಮರಾ ಬಳಸಿ ಮಹಿಳೆಯರ ನಗ್ನ ಚಿತ್ರ ಸೆರೆ ಹಿಡಿಯುತ್ತಿದ್ದ ಮಹೇಶ ಬಂಧಿತ ಆರೋಪಿ. ಮೊದಲು ಯುವತಿಗೆ ನಕಲಿ ಇನ್​​ಸ್ಟಾಗ್ರಾಮ್ ಮೂಲಕ ಮೆಸೇಜ್ ಮಾಡಿದ್ದ ಮಹೇಶ, ತನ್ನ ಜೊತೆ ಚಾಟ್ ಮಾಡು ಇಲ್ಲದಿದ್ದರೆ ನಗ್ನ ವಿಡಿಯೋ ಬಿಡುಗಡೆ ಮಾಡುವುದಾಗಿ ಹೆದರಿಸಿದ್ದ ಎಂದು ಪ್ರಕರಣದ ಕುರಿತು ಈಶಾನ್ಯ ವಿಭಾಗದ ಸಿಇಎನ್ ಠಾಣೆಯ ಪೊಲೀಸರು ತಿಳಿಸಿದ್ದಾರೆ.

ಹೆದರಿದ ಯುವತಿ ನಕಲಿ ಇನ್​ಸ್ಟಾಗ್ರಾಮ್ ಖಾತೆಯನ್ನು ಬ್ಲಾಕ್ ಮಾಡಿದ್ದರು. ಆದರೆ, ಮತ್ತೊಂದು ಖಾತೆಯಿಂದ ಆರೋಪಿ ಯುವತಿಗೆ ಆಕೆಯ ನಗ್ನ ಫೋಟೋವನ್ನು ಕಳುಹಿಸಿದ್ದ. ಈ ಬೆಳವಣಿಗೆಗೆ ಹೆದರಿದ ಯುವತಿ ಈಶಾನ್ಯ ಸಿಇಎನ್ ಠಾಣೆಗೆ ದೂರು ನೀಡಿದ್ದರು. ಪ್ರಕರಣದ ಸಂಬಂಧ ಇದೀಗ ಆರೋಪಿ‌ ಮಹೇಶನನ್ನು ಬಂಧಿಸಿ ಹೆಚ್ಚಿನ ವಿಚಾರಣಗೊಳಪಡಿಸಲಾಗಿದೆ ಎಂದು ಹೇಳಿದ್ದಾರೆ.

ಚಾರ್ಜರ್​ನಲ್ಲಿ ಸ್ಪೈ ಕ್ಯಾಮರಾ

(ಇದನ್ನೂ ಓದಿ: ಬೆಂಗಳೂರು: ವೃದ್ಧೆ ಕೊಲೆ ಪ್ರಕರಣ, 6 ಜನ ನೇಪಾಳಿಗರ ಬಂಧನ)

ABOUT THE AUTHOR

...view details