ಕರ್ನಾಟಕ

karnataka

ETV Bharat / city

ಬಾಂಗ್ಲಾ ನುಸುಳುಕೋರರಿಗೂ ಶ್ಯೂರಿಟಿ... ಆರೋಪಿಗಳ ವಿಚಾರಣೆ ವೇಳೆ ಮಾಹಿತಿ ಬಹಿರಂಗ - ಬೆಂಗಳೂರು ಕ್ರೈಂ ಲೇಟೆಸ್ಟ್​​ ಸುದ್ದಿ

ಮೂರು ದಿನಗಳ ಹಿಂದೆ ಬಂಧನವಾಗಿದ್ದ ಆರೋಪಿಗಳು, ಪುಡಿಗಾಸಿಗಾಗಿ ಬಾಂಗ್ಲಾ ನುಸುಳುಕೋರರಿಗೆ ಶ್ಯೂರಿಟಿ ನೀಡಿರುವ ವಿಚಾರ ಬೆಳಕಿಗೆ ಬಂದಿದೆ.

ಆರೋಪಿಗಳು

By

Published : Nov 16, 2019, 1:11 PM IST

ಬೆಂಗಳೂರು:ಆರೋಪಿಗಳ ಹಿನ್ನೆಲೆ ತಿಳಿದುಕೊಳ್ಳದೆ ಪುಡಿಗಾಸಿಗಾಗಿ ಬಾಂಗ್ಲಾ ನುಸುಳುಕೋರರಿಗೆ ಶ್ಯೂರಿಟಿ ನೀಡಿರುವ ವಿಚಾರ ಬೆಳಕಿಗೆ ಬಂದಿದೆ.

ಬಾಂಗ್ಲಾ ನುಸುಳುಕೋರರಿಗೂ ಶ್ಯೂರಿಟಿ ನೀಡಿದ್ದ ಆರೋಪಿಗಳು

ಮೂರು ದಿನಗಳ ಹಿಂದೆ ಮಧು, ರಮಾದೇವಿ, ಬಸವಕುಮಾರ್, ರತ್ನಮ್ಮ ಎಂಬುವವರನ್ನು ಸಿಸಿಬಿ ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಬಾಂಗ್ಲಾ ನುಸುಳುಕೋರರಿಗೆ ಶ್ಯೂರಿಟಿ ನೀಡಿದ ವಿಚಾರ ತಿಳಿದು ಬಂದಿದೆ.

ಇದೇ ವರ್ಷ ಫೆ. 15ರಂದು ನಕಲಿ ವೀಸಾ ಹಾಗೂ ಪಾಸ್​​ಪೋರ್ಟ್ ಸೃಷ್ಟಿಸಿ ಮಲೇಶಿಯಾಗೆ ಹೊರಟಿದ್ದ ಆರೋಪಿಗಳಾದ ಸಲ್ಮಾ ಬೇಗಂ, ಮೊಹಮ್ಮದ್ ತಾಹೀರ್, ಫಾರೂಲ್, ಮೊಹಮ್ಮದ್, ಹಲೇಕ್ ರೆಹಾನ ಬೇಗಂ ಮುಸ್ತಾಫ್ ಎಂಬುವವರು ಬೆಂಗಳೂರು ಏರ್​​ಪೋರ್ಟ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರು. ಬಳಿಕ ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಲಾಗಿತ್ತು. ಜಾಮೀನು ಅರ್ಜಿ ಸಲ್ಲಿಸಿದ ಬಳಿಕ ಷರತ್ತು ಹಾಕಿದ್ದ ನ್ಯಾಯಾಲಯ, ಸ್ನೇಹಿತರು, ಕಂಪನಿ ಅಥವಾ ಇನ್ನಿತರ ಸ್ಥಳೀಯ ದಾಖಲೆಗಳನ್ನು ಸಲ್ಲಿಸಲು ಆದೇಶಿತ್ತು.

ಕುಣಿಗಲ್​​ನ ವ್ಯಕ್ತಿಯಿಂದ ಬಂಧಿತರು ಬಾಂಗ್ಲಾ ನುಸುಳುಕೋರರಿಗೆ ಶ್ಯೂರಿಟಿ ಕೊಡಿಸಿದ್ದರು. ನಕಲಿ ಶ್ಯೂರಿಟಿ ನೀಡಲು ಬರುವ ವ್ಯಕ್ತಿಗೆ ಆರೋಪಿಗಳು 1 ಸಾವಿರ ರೂ. ನೀಡಿದ್ದರು ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ.

ABOUT THE AUTHOR

...view details