ಕರ್ನಾಟಕ

karnataka

ETV Bharat / city

ಎಸಿಬಿ ದಾಳಿಯಲ್ಲಿ ಭ್ರಷ್ಟ ನಿವೃತ್ತ ಅಧಿಕಾರಿಯ ವೈಭೋಗ ಬಯಲು.. ಆಧುನಿಕ ಕುಬೇರನ ಆಸ್ತಿ ಇಷ್ಟಿದೆ.. - bangalore acb raids on rn vasudev

ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ ನಡೆಸಿ ಅಪಾರ ಪ್ರಮಾಣದ ಆಸ್ತಿ ಪತ್ತೆ ಮಾಡುತ್ತಿದೆ. ಲಂಚ, ಭ್ರಷ್ಟಾಚಾರದಲ್ಲಿ ಮಿಂದೆದ್ದಿರುವ ಅಧಿಕಾರಿಗಳ ಕುಬೇರ ಸಂಪತ್ತು ನೋಡಿ ಸ್ವತಃ ಎಸಿಬಿ ಅಧಿಕಾರಿಗಳು ದಿಗ್ಬ್ರಾಂತರಾಗಿದ್ದಾರೆ. ಸದ್ಯ ಅತಿ ಹೆಚ್ಚು ಆಸ್ತಿ ಪತ್ತೆಯಾದ ಹಿನ್ನೆಲೆ ಬೆಂಗಳೂರು ಗ್ರಾಮಾಂತರ‌ ಜಿಲ್ಲೆಯ‌ ನಿರ್ಮಿತಿ ಕೇಂದ್ರದ ಮಾಜಿ ಯೋಜನಾ ನಿರ್ದೇಶಕ ಆರ್ ಎನ್ ವಾಸುದೇವ್​ ಅವರ ದಾಖಲೆ ಪರಿಶೀಲನೆ ಮುಂದುವರೆದಿದೆ. ಬಗೆದಷ್ಟು ಆಸ್ತಿ ಪತ್ತೆಯಾಗುತ್ತಿದೆ..

acb-ride
ಎಸಿಬಿ ದಾಳಿ

By

Published : Nov 27, 2021, 8:26 PM IST

ಬೆಂಗಳೂರು :ಇತ್ತೀಚೆಗೆ 15 ಮಂದಿ ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ ಹಿನ್ನೆಲೆ ತನಿಖೆ ಚುರುಕುಗೊಂಡಿದೆ. ಈ ಮಧ್ಯೆ ಎಲ್ಲರಿಗಿಂತ ಅತಿ ಹೆಚ್ಚು ಅಕ್ರಮ ಆಸ್ತಿ ಪತ್ತೆಯಾದ ಬೆಂಗಳೂರು ಗ್ರಾಮಾಂತರ‌ ಜಿಲ್ಲೆಯ‌ ನಿರ್ಮಿತಿ ಕೇಂದ್ರದ ಮಾಜಿ ಯೋಜನಾ ನಿರ್ದೇಶಕ ಆರ್.ಎನ್.ವಾಸುದೇವ್​ರ ಮತ್ತಷ್ಟು ದಾಖಲೆಗಳ ಪರಿಶೀಲನೆ‌ ಮುಂದುವರೆಸಿದ್ದಾರೆ.

ಕೆಲ ಸರ್ಕಾರಿ ಅಧಿಕಾರಿಗಳ ಆದಾಯಕ್ಕಿಂತ ಹೆಚ್ಚು ಆಸ್ತಿ ಪತ್ತೆ ಹಿನ್ನೆಲೆ ಎಸಿಬಿ ತಂಡ ಗಂಭೀರವಾಗಿ ಪರಿಗಣಿಸಿದೆ. ಈ ಮಧ್ಯೆ ಕೆಲ ಅಧಿಕಾರಿಗಳ ಬ್ಯಾಂಕ್ ಖಾತೆಗಳನ್ನ ಜಾಲಾಡುತ್ತಿರುವ ಅಧಿಕಾರಿಗಳು, ಹಣದ ವ್ಯವಹಾರದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಕೆಲವರು ಬೆಂಗಳೂರಿನಲ್ಲಿ ಬ್ಯಾಂಕ್ ಖಾತೆಗಳನ್ನ ಹೊಂದಿದ್ದಾರೆ. ಕಲಬುರಗಿ ಹಾಗೂ ಗದಗ ಸೇರಿದಂತೆ ಕೆಲ ಜಿಲ್ಲೆಗಳಿಂದ ಎಸಿಬಿ ಟೀಂ ಬಂದು, ಬ್ಯಾಂಕ್ ವಹಿವಾಟು ದಾಖಲೆಗಳನ್ನ ಪರಿಶೀಲಿಸಿ ಕ್ರೋಢೀಕರಿಸಿದ್ದಾರೆ. ಈ ಕುರಿತಾಗಿ ಎಸಿಬಿ ಮುಖ್ಯಸ್ಥರಿಗೆ ಅಧಿಕಾರಿಗಳ ಪ್ರತಿಯೊಂದು ತನಿಖಾ ರಿಪೋರ್ಟ್ ಸಲ್ಲಿಸಲಾಗಿದೆ.

ACB ride on RN Vasudev property : ಇನ್ನು ಕೆಲ ಸರ್ಕಾರಿ ಅಧಿಕಾರಿಗಳ ಆಸ್ತಿ ನೋಡಿಯೇ ಎಸಿಬಿ ಟೀಂ ಸುಸ್ತಾಗಿದೆ. ನಿರ್ಮಿತಿ ಕೇಂದ್ರದ ಅಧಿಕಾರಿಯಾಗಿದ್ದ ವಾಸುದೇವ್, ಬೆಂಗಳೂರು ನಗರದಲ್ಲಿ ಮಾತ್ರವಲ್ಲದೆ ಹೊರವಲಯದಲ್ಲೂ ಆಸ್ತಿ ಮಾಡಿರೋದು ಪತ್ತೆಯಾಗಿದೆ. ಬೆಂಗಳೂರಿನಲ್ಲೇ ಐದು ಕಟ್ಟಡಗಳಲ್ಲಿರುವ 28 ಮನೆಗಳನ್ನ ಬಾಡಿಗೆಗೆ ಬಿಟ್ಟಿದ್ದಾರೆ. ತನ್ನ ಸಂಪಾದನೆಯ ಆದಾಯಕ್ಕಿಂತ ಶೇ.1,408 ಅಧಿಕ ಆಸ್ತಿ ಹೊಂದಿರುವ ವಾಸುದೇವ್ ದಾಖಲಾತಿಗಳ ಪರಿಶೀಲನೆ ಮುಂದುವರೆದಿದೆ.

ಕೆಂಗೇರಿ ಉಪನಗರ, ಮಲ್ಲೇಶ್ವರ, ನೆಲಮಂಗಲ ಸಿದ್ದಗಂಗಾ ಲೇಔಟ್, ಸೋಂಪುರ ಗ್ರಾಮ, ಹೆಸರಘಟ್ಟ, ಕೆಂಗೇರಿಯ ಸೂಲಿಗೆರೆ, ಅರ್ಕಾವತಿ ಲೇಔಟ್, ಯಲಹಂಕ, ಜ್ಞಾನಭಾರತಿ ಬಿಡಿಎ ಸೈಟ್, ವಿಶ್ವೇಶ್ವರ ಲೇಔಟ್ ಬಿಡಿಎ ಸೈಟ್, ಹೊಸಕೆರೆಹಳ್ಳಿ ಸೇರಿದಂತೆ 16 ಕಡೆಗಳಲ್ಲಿ ನಿವೇಶನ ಹೊಂದಿರುವುದು ಪತ್ತೆಯಾಗಿದೆ.

ಸ್ಥಿರ ಆಸ್ತಿಗಳ ಅಂದಾಜು ಮೌಲ್ಯ ರೂ.25.78 ಕೋಟಿ ಹಾಗೂ ಚರಾಸ್ಥಿ ಮೌಲ್ಯ ಅಂದಾಜು ರೂ. 3.87 ಕೋಟಿಯಾಗಿದೆ‌. ಆರೋಪಿತನ ಒಟ್ಟು ಆಸ್ತಿಯು ₹30.60 ಕೋಟಿಯಾಗಿದೆ. ಈ ಪೈಕಿ 29.15 ಕೋಟಿ ಅಕ್ರಮ ಆಸ್ತಿಯ ಪ್ರಮಾಣವು ಶೇ.1408 ರಷ್ಟಾಗಿದೆ.

ಆರೋಪಿತರ ಬಳಿ ಇನ್ನು ಹೆಚ್ಚಿನ ಅಕ್ರಮ ಆಸ್ತಿಯು ಕಂಡು ಬರುವ ಸಾಧ್ಯತೆ ಇದ್ದು, ತನಿಖೆ ಮುಂದುವರೆಸಲಾಗಿದೆ. ಸದ್ಯ ಕೆಲ ಅಧಿಕಾರಿಗಳ ಸೂಕ್ತ ದಾಖಲೆಗಳ ಸಲ್ಲಿಕೆಗೆ ಸೂಚಿಸಲಾಗಿದೆ.‌ ಈ ನಡುವೆ ಮುಂದಿನ ಕಾನೂನು ಕ್ರಮಕ್ಕೆ ಎಸಿಬಿ ಅಧಿಕಾರಿಗಳು ತಜ್ಞರ ಸಲಹೆ ಪಡೆದಿದ್ದಾರೆ.

  • ವಾಸುದೇವ್ ಗೆ ಸಂಬಂಧಿಸಿ‌ದ ಪ್ರಾಪರ್ಟಿ ವಿವರಗಳು
  1. ಕೆಂಗೇರಿ ಉಪನಗರ ನಂ- 100 ವಾಸದ ಮನೆ
  2. ಕೆಂಗೇರಿ ಉಪನಗರ ಶಾಂತಿ ವಿಳಾಸ ಲೇಔಟ್ ನಂ-80
  3. ಮಲ್ಲೇಶ್ವರಂ 18 ಕ್ರಾಸ್ ನಂ-04 ವಾಸದ ಮನೆ
  4. ಕೆಂಗೇರಿ ಉಪನಗರ ನಂ-167 ವಾಸದ ಮನೆ
  5. ನೆಲಮಂಗಲ ಸಿದ್ದಗಂಗಾ ಲೇಔಟ್ ಸೋಂಪುರ ಗ್ರಾಮ ನಂ -49 ಸರ್ವೆ ನಂ 112/2
  6. ನೆಲಮಂಗಲ ಸಿದ್ದಗಂಗಾ ಲೇಔಟ್ ಸೋಂಪುರ ಗ್ರಾಮ ಸಂಖ್ಯೆ -50 ಸರ್ವೇನಂ-111/2
  7. ನೆಲಮಂಗಲ ಸಿದ್ದಗಂಗಾ ಲೇಔಟ್ ಸೋಂಪುರ ಗ್ರಾಮ ಸಂಖ್ಯೆ -32 ಸರ್ವೇ ನಂ 111/2
  8. ಹೆಸರಘಟ್ಟ ಸರ್ವೇನಂ 276/2/5
  9. ಕೆಂಗೇರಿ ಸೂಲಿಗೆರೆ ಗ್ರಾಮ ಸರ್ವೇನಂ1/3/4
  10. ಅರ್ಕಾವತಿ ಲೇಔಟ್ ನಲ್ಲಿ ಒಟ್ಟು ಮೂರು ಸೈಟ್ ಗಳು ನಿವೇಶನ ಸಂಖ್ಯೆ2477/ 2303/2596
  11. ಯಲಹಂಕ 44/80 ಸರ್ವೇ ನಂ 1163
  12. ಕೆಂಗೇರಿ ಉಪನಗರ ಕೆಹೆಚ್ ಬಿ ಕಾಲೋನಿ ನಂ-113
  13. ಜ್ಞಾನಭಾರತಿ ಬಿಡಿಎ ಸೈಟ್ ಸೈಟ್ ನಂ-11
  14. ವಿಶ್ವೇಶ್ವರ ಲೇಔಟ್ ಬಿಡಿಎ ಸೈಟ್ ನಂ-340
  15. ವಿಶ್ವೇಶ್ವರ ಲೇಔಟ್ ನಲ್ಲಿ ಎರಡು ಸಂಖ್ಯೆ 2807
  16. ಹೊಸಕೇರೆಹಳ್ಳಿ ಅಪಾರ್ಟ್ಮೆಂಟ್ ಫ್ಲಾಂ ನಂ-804
  17. ಕೆಂಗೇರಿ ಉಪನಗರ ವಾರ್ಡ್ ನಂ- 159 ನಿವೇಶನ ಸಂಖ್ಯೆ -37

ABOUT THE AUTHOR

...view details