ಕರ್ನಾಟಕ

karnataka

ETV Bharat / city

ಎಸಿಬಿ ದಾಳಿ : ಬ್ರೋಕರ್‌ಗಳ ಮನೆಯಲ್ಲಿ ಕಣ್ಣು ಹಾಯಿಸಿದಷ್ಟು ಚಿನ್ನಾಭರಣ ; ದುಬಾರಿ ಬೆಲೆಯ ಗಾಗಲ್ಸ್, ವಾಚ್‌ಗಳು ವಶ - ಬೆಂಗಳೂರಿನಲ್ಲಿ ಬ್ರೋಕರ್‌ಗಳ ಮನೆಗಳ ಮೇಲೆ ಎಸಿಬಿ ದಾಳಿ

ಬಿಡಿಎ ಅಧಿಕಾರಿಗಳ ಜೊತೆ ಸೇರಿ ಕೋಟಿ ಕೋಟಿ ಭ್ರಷ್ಟಾಚಾರದ ಆರೋಪ ಹೊತ್ತಿರುವ ಬ್ರೋಕರ್‌ಗಳಿಗೆ ಎಸಿಬಿ ಅಧಿಕಾರಿಗಳು ಇಂದು ಶಾಕ್‌ ನೀಡಿದ್ದು, ದಾಳಿ ವೇಳೆ ಅಪಾರ ಪ್ರಮಾಣದ ಚಿನ್ನಾಭರಣ, ಇತರೆ ಬೆಲೆ ಬಾಳುವ ವಸ್ತುಗಳನ್ನು ಪತ್ತೆ ಹಚ್ಚಿಸಿದ್ದಾರೆ..

acb raids in broker house in karnataka
ಬ್ರೋಕರ್‌ಗಳ ಮನೆಯಲ್ಲಿ ಕಣ್ಣು ಹಾಯಿಸಿದಷ್ಟು ಚಿನ್ನಾಭರಣ; ದುಬಾರಿ ಬೆಲೆಯ ಗಾಗಲ್ಸ್, ವಾಚ್‌ಗಳನ್ನ ಸೀಜ್‌ ಮಾಡಿದ ಎಸಿಬಿ

By

Published : Mar 22, 2022, 1:01 PM IST

Updated : Mar 22, 2022, 1:56 PM IST

ಬೆಂಗಳೂರು :ಬಿಡಿಎನಲ್ಲಿ ಕಾರ್ಯನಿರ್ವಹಿಸುತ್ತಿದ್ದ 9 ಮಂದಿ ಮಧ್ಯವರ್ತಿಗಳ ಮನೆಗಳ ಮೇಲೆ‌ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು ಶೋಧನೆಯನ್ನು ಚುರುಕುಗೊಳಿಸಿದ್ದಾರೆ.

ಎಸಿಬಿ ದಾಳಿ : ಬ್ರೋಕರ್‌ಗಳ ಮನೆಯಲ್ಲಿ ಕಣ್ಣು ಹಾಯಿಸಿದಷ್ಟು ಚಿನ್ನಾಭರಣ ; ದುಬಾರಿ ಬೆಲೆಯ ಗಾಗಲ್ಸ್, ವಾಚ್‌ಗಳು ವಶ

ನಗರದ ವಿವಿಧ ಕಡೆಗಳಲ್ಲಿ ವಾಸವಾಗಿರುವ ಐಷಾರಾಮಿ ಮನೆಗಳ ಮೇಲೆ‌ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿರುವ ಅಧಿಕಾರಿಗಳು, ಮಧ್ಯವರ್ತಿಗಳ ಆಸ್ತಿ ಕಂಡು ಶಾಕ್‌ ಆಗಿದ್ದಾರೆ. ದಾಳಿ ವೇಳೆ‌ ಅಪಾರ ಪ್ರಮಾಣದಲ್ಲಿ ಚಿನ್ನಾಭರಣ ಪತ್ತೆಯಾಗಿದೆ.

ಎಸಿಬಿ ದಾಳಿಯಲ್ಲಿ ಪತ್ತೆಯಾಗಿರುವ ಚಿನ್ನಾಭರಣಗಳು

ಕಳೆದ ವರ್ಷ ಬಿಡಿಎ ಅಧಿಕಾರಿಗಳ ಮನೆ ಹಾಗೂ‌ ಕಚೇರಿಗಳ ಮೇಲೆ‌ ದಾಳಿ ನಡೆಸಿದ್ದ ಎಸಿಬಿ ಅಧಿಕಾರಿಗಳು ಕೆಲ ಕಡತಗಳು ನಾಪತ್ತೆಯಾಗಿರುವುದನ್ನು ಕಂಡುಕೊಂಡಿದ್ದರು. ತನಿಖೆ ನಡೆಸಿದಾಗ ಬ್ರೋಕರ್‌ಗಳ ಮನೆಯಲ್ಲಿ ದಾಖಲಾತಿ ಇರಬಹುದೆಂಬ ಅಧಿಕಾರಿಗಳು ಶಂಕೆ ಮೇರೆಗೆ 9 ಮಂದಿ ಬ್ರೋಕರ್‌ಗಳ ಮನೆಗಳ ಮೇಲೆ‌ ಎಸಿಬಿ ದಾಳಿ ನಡೆಸಿದೆ‌.

ದಾಳಿ ವೇಳೆ ಪತ್ತೆಯಾಗಿರುವ ದುಬಾರಿ ಬೆಲೆಯ ಗಗಲ್ಸ್‌
ಸುಮಾರು 5 ಕೆಜಿ ಚಿನ್ನಾಭರಣ ಪತ್ತೆ: ಆರ್‌.ಟಿ.ನಗರದ ಮನೋರಾಯನಪಾಳ್ಯ ನಿವಾಸಿಯಾಗಿರುವ ಬಿಡಿಎ ಬ್ರೋಕರ್ ಮೋಹನ್‌ ಅವರು ಸುಲ್ತಾನ್‌ಪಾಳ್ಯದಲ್ಲಿ 20 ವರ್ಷಗಳಿಂದ ಆಟೋಮೊಬೈಲ್ಸ್ ಅಂಗಡಿ ಇಟ್ಟುಕೊಂಡಿದ್ದರು. ನಂತರ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿದ್ದರು.
ಅಪಾರ ಪ್ರಮಾಣದ ಚಿನ್ನಾಭರಣ
ನಂತರ ಬಿಡಿಎ ಅಧಿಕಾರಿ, ಸಿಬ್ಬಂದಿ ಜೊತೆಗೆ ಸಂಪರ್ಕ ಮಾಡಿಕೊಂಡು‌ ಮಧ್ಯವರ್ತಿಯಾಗಿ ಕೋಟಿ ಕೋಟಿ ಹಣ ಗಳಿಸಿದ್ದಾನೆ ಎನ್ನಲಾಗಿದೆ. ಈತನ ಮನೆಯಲ್ಲಿ ಅಪಾರ ಪ್ರಮಾಣದಲ್ಲಿ ಚಿನ್ನಾಭರಣ ಪತ್ತೆಯಾಗಿದೆ. 4.960 ಕೆಜಿ ಚಿನ್ನ,‌ 15 ಕೆಜಿ ಬೆಳ್ಳಿ, 61.9 ಗ್ರಾಂ ಡೈಮಂಡ್ ಪತ್ತೆಯಾಗಿದೆ.

8 ಕೋಟಿ ರೂ.ಐಷಾರಾಮಿ ಬಂಗಲೆಯಲ್ಲಿ 10 ಸಾವಿರ ಪತ್ತೆ..:ಬಿಡಿಎ ಏಜೆಂಟ್ ಆಗಿರುವ ಮಲ್ಲತ್ತಹಳ್ಳಿಯಲ್ಲಿರುವ ಮುನಿರತ್ನ ಮನೆ ಮೇಲೆ ಎಸಿಬಿ ದಾಳಿ ನಡೆಸಿದ್ದು, ಮನೆಯೊಳಗೆ ಪ್ರವೇಶಿಸುತ್ತಿದ್ದಂತೆ ಒಂದು ಕ್ಷಣ ಅಧಿಕಾರಿಗಳೇ ದಂಗಾಗಿದ್ದಾರೆ. ಬಂಗಲೆಯಂತಹ ಐಷರಾಮಿ‌ ಮನೆಯೊಳಗೆ ಸಿಮ್ಮಿಂಗ್ ಪುಲ್, ದುಬಾರಿಗೆ ಗ್ರಾನೈಟ್, ಪೀಠೋಪರಣಗಳು ಹಾಗೂ ಹೋಮ್ ಥಿಯೇಟರ್ ಇರುವುದು ಗೊತ್ತಾಗಿದೆ.

8 ಕೋಟಿಯ ಐಷಾರಾಮಿ ಬಂಗಲೆಯಲ್ಲಿ ಇದುವರೆಗೂ ಪತ್ತೆಯಾಗಿರುವ ನಗದು ಕೇವಲ ₹10 ಸಾವಿರ.‌ ಮೈಮೇಲಿರುವ ಚಿನ್ನಾಭರಣ ಮತ್ತು ದೇವರಮನೆಯ ಬೆಳ್ಳಿ ಬಿಟ್ರೆ ಒಂದೇ ಒಂದು ಉಂಗುರ ಕೂಡ ಮುನಿರತ್ನ ಮನೆಯಲ್ಲಿ ಪತ್ತೆಯಾಗಿಲ್ಲ. ಆದ್ರೆ, ಬಿಡಿಎ ಮತ್ತು ಆಸ್ತಿ ಪತ್ರಗಳು ಕಾರ್‌ನಲ್ಲಿ ಪತ್ತೆಯಾಗಿದೆ‌. ಕಾರ್ ಕೀ ಕೊಡಲು ಮುನಿರತ್ನ ನಕಾರ ಮಾಡಿದ್ದರು. ಕೊನೆಗೆ ಕೀ ಪಡೆದು ಕಾರ್‌ನಲ್ಲಿದ್ದ ದಾಖಲೆಯನ್ನ ಸೀಜ್ ಮಾಡಿದ್ದಾರೆ‌.

ಅಧಿಕಾರಿಗಳಿಂದ ಶೋಧ ಕಾರ್ಯ ಮುಂದುವರೆದಿದೆ

ಎಸಿಬಿ ಅಧಿಕಾರಿಗಳಿಗೆ ಮನೆ ನೋಡಿ ಶಾಕ್ ಆಗಿದ್ದು. ನಗದು, ಚಿನ್ನಾಭರಣ ಅಬೇಸ್ ಮಾಡಿಸಿರುವ ಗುಮಾನಿಯನ್ನ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಮನೆಯ ಮೂಲೆ ಮೂಲೆ, ಇಂಚಿಂಚು ತಡಕಾಡಿದ್ರೂ ಈವರೆಗೆ ಏನೂ ಸಿಕ್ಕಿಲ್ಲ. ಇನ್ನೂ ಮನೆಯ ಪೈಪ್ ಲೇನ್‌ಗಳಲ್ಲೂ ತಪಾಸಣೆ ಮುಂದುವರಿಸಿದ್ದಾರೆ.

ಬ್ರೋಕರ್‌ಗಳ ಮನೆಗಳಲ್ಲಿ ಪತ್ತೆಯಾದ ಚಿನ್ನಾಭರಣ
ಚಿನ್ನಾಭರಣ, ದುಬಾರಿ ಬೆಲೆಯ ಗಾಗಲ್ಸ್‌, ವಾಚ್‌ಗಳು ಪತ್ತೆ :ದೊಮ್ಮಲೂರಿನಲ್ಲಿರುವ ಬಿಡಿಎ ಬ್ರೋಕರ್ ಮನೋಜ್ ಮನೆ ಎಸಿಬಿ ಅಧಿಕಾರಿಗಳಿಗೆ ಶಾಕ್ ಆಗಿದ್ದಾರೆ.‌ ಸೆಲೆಬ್ರೆಟಿ ರೀತಿ ಶೋಕಿ ಮಾಡ್ತಿದ್ದ ಮನೋಜ್ ಬಳಸುತ್ತಿದ್ದ ಐಷಾರಾಮಿ ಗಾಗಲ್ಸ್ ಮತ್ತು ವಾಚ್‌ಗಳು ಪತ್ತೆಯಾಗಿವೆ. ಲಕ್ಷಾಂತರ ಮೌಲ್ಯದ 19 ಗಾಗಲ್, ರೋಲೆಕ್ಸ್, ಫಾಸೀಲ್, ಫಾಸ್ಟ್ ಟ್ರಾಕ್ ಸೇರಿ ಹಲವು ಕಂಪನಿಯ 20 ವಾಚ್‌ಗಳಿದ್ದು, ಇದ್ರಲ್ಲಿ ಬಂಗಾರದ ವಾಚ್‌ಗಳು ಇರುವ ಬಗ್ಗೆ ಎಸಿಬಿ ಅನುಮಾನ‌ ವ್ಯಕ್ತಪಡಿಸಿದೆ. ಇನ್ನು ಮನೆಯಲ್ಲಿ ಕೇವಲ 1.5ಲಕ್ಷ ನಗದು ಪತ್ತೆಯಾಗಿದ್ದು, ಸದ್ಯ ಎಸಿಬಿ ಅಧಿಕಾರಿಗಳು ಮನೆಯ‌ ಮೂಲೆ ಮೂಲೆ ಹುಡುಕಾಡುತ್ತಿದ್ದಾರೆ.

ಜೆರಾಕ್ಸ್ ಅಂಗಡಿ ತೆರೆದಿದ್ದ ತೇಜಸ್ವಿ ಕೋಟಿ ಬೆಲೆ ಬಂಗಲೆ ಮಾಲೀಕ :ಬಿಡಿಎ ಬ್ರೋಕರ್ ತೇಜಸ್ಚಿ ಶುರು ಮಾಡಿದ್ದು ಜೆರಾಕ್ಸ್ ಅಂಗಡಿ. ದ್ವಿತೀಯ ಪಿಯುಸಿ ಮುಗಿಸಿ ಜೆರಾಕ್ಸ್ ಅಂಗಡಿ ಶುರು ಮಾಡಿದ್ದರು.‌ ಆದರೆ, ಈಗ ತೇಜಸ್ವಿ ಕೋಟಿ ಕೋಟಿ ಬೆಲೆಯ ಬಂಗಲೆ ಮಾಲೀಕರಾಗಿದ್ದಾರೆ. ಆರ್‌ಆರ್ ನಗರದ ತೇಜಸ್ವಿ ಬಂಗಲೆ ತಮಿಳುನಾಡಿನ ಮಾಜಿ ಮಂತ್ರಿಯವರದ್ದು ಎನ್ನಲಾಗಿದೆ. ತಮಿಳುನಾಡಿನ ಡಿಎಂಕೆಯ ಮಾಜಿ ಮಂತ್ರಿ ದಿವಂಗತ ವೀರಪಾಂಡಿಯನ್ ಆರುಮುಗಂ ಮಗಳಿಂದ 14 ಕೋಟಿಗೆ ಬಂಗಲೆ ಖರೀದಿಸಿದ್ದರು ಎನ್ನಲಾಗಿದೆ. ಸದ್ಯ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ಇದನ್ನೂ ಓದಿ:ಬಿಡಿಎ ಅಧಿಕಾರಿ ಜೊತೆ ಸೇರಿ ಭ್ರಷ್ಟಚಾರ ಆರೋಪ.. ಮಧ್ಯವರ್ತಿ, ಏಜೆಂಟ್​ ಮನೆ - ಕಚೇರಿ ಮೇಲೆ ಎಸಿಬಿ ದಾಳಿ!

Last Updated : Mar 22, 2022, 1:56 PM IST

For All Latest Updates

TAGGED:

ABOUT THE AUTHOR

...view details