ಕರ್ನಾಟಕ

karnataka

ETV Bharat / city

1.5 ಲಕ್ಷ ಲಂಚದ ಬೇಡಿಕೆ: ಅಧಿಕಾರಿಗಳ ಮೇಲೆ ಎಸಿಬಿ ರೇಡ್! - ಲಂಚ

25 ಲಕ್ಷ ರೂ. ಮಂಜೂರು ಮಾಡಲು 1.5 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದ ಅಧಿಕಾರಿಗಳು ಎಸಿಬಿ ಬಲೆಗೆ ಬಿದ್ದಿದ್ದಾರೆ.

ACB Raid
ಅಧಿಕಾರಿಗಳ ಮೇಲೆ ಎಸಿಬಿ ರೇಡ್

By

Published : Nov 3, 2020, 2:55 AM IST

ಬೆಂಗಳೂರು: ಪೂರ್ಣಗೊಂಡಿರುವ ಕಾಮಗಾರಿಗೆ 25 ಲಕ್ಷ ರೂ. ಹಣ ಮಂಜೂರು ಮಾಡಲು 1.5 ಲಕ್ಷ ರೂ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಇಬ್ಬರು ಸರ್ಕಾರಿ ಅಧಿಕಾರಿಗಳು ಎಸಿಬಿ ಬಲೆಗೆ ಬಿದ್ದಿದ್ದಾರೆ.

ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಎಂ.ಎನ್.ಕಿಶೋರ್ ಮತ್ತು ಇಲಾಖೆಯ ಸೂಪರಿಟೆಂಡೆಂಟ್ ದತ್ತಾತ್ರೇಯ ನಾರಾಯಂಕರ್ ಎಸಿಬಿ ಬಲೆಗೆ ಬಿದ್ದ ಅಧಿಕಾರಿಗಳು.

ಗುತ್ತಿಗೆದಾರರೊಬ್ಬರು ತೆಗೆದುಕೊಂಡಿದ್ದ ಕಾಮಗಾರಿಯ 25 ಲಕ್ಷ ರೂ.ಗಳ ಹಣ ಮಂಜೂರು ಮಾಡಿಸಿಕೊಳ್ಳಲು 1.5 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆಯಲ್ಲಿ ಸೋಮವಾರ ಲಂಚ ಸ್ವೀಕರಿಸುತ್ತಿರುವ ವೇಳೆ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಲಂಚದ ಹಣವನ್ನು ವಶಪಡಿಸಿಕೊಂಡು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.

ABOUT THE AUTHOR

...view details