ಕರ್ನಾಟಕ

karnataka

ETV Bharat / city

ಭೋವಿ ಅಭಿವೃದ್ಧಿ ನಿಗಮದ ಪ್ರಧಾನ ವ್ಯವಸ್ಥಾಪಕರಿಗೆ ಎಸಿಬಿ ಶಾಕ್ - ಬೆಂಗಳೂರಿನಲ್ಲಿ ಎಸಿಬಿ ದಾಳಿ

ಭೋವಿ ಅಭಿವೃದ್ಧಿ ನಿಗಮದ ಪ್ರಧಾನ ವ್ಯವಸ್ಥಾಪಕರಿಗೆ ಎಸಿಬಿ ಶಾಕ್ ನೀಡಿದ್ದು, ಅವರಿಗೆ ಸಂಬಂಧಪಟ್ಟ ಐದು ಸ್ಥಳಗಳಲ್ಲಿ ಅಧಿಕಾರಿಗಳು ಶೋಧ ಕಾರ್ಯಾಚರಣೆ ಕೈಗೊಂಡಿದ್ದಾರೆ.

ACB raid on Bhovi Development Corporation General Manager home, ACB raid conduct in Bengaluru, ACB raid news, ಭೋವಿ ಅಭಿವೃದ್ಧಿ ನಿಗಮದ ಪ್ರಧಾನ ವ್ಯವಸ್ಥಾಪಕರಿಗೆ ಎಸಿಬಿ ಶಾಕ್, ಬೆಂಗಳೂರಿನಲ್ಲಿ ಎಸಿಬಿ ದಾಳಿ, ಬೆಂಗಳೂರಿನಲ್ಲಿ ಎಸಿಬಿ ದಾಳಿ ಸುದ್ದಿ,
ಭೋವಿ ಅಭಿವೃದ್ಧಿ ನಿಗಮದ ಪ್ರಧಾನ ವ್ಯವಸ್ಥಾಪಕರಿಗೆ ಎಸಿಬಿ ಶಾಕ್

By

Published : May 19, 2022, 1:51 PM IST

ಬೆಂಗಳೂರು :ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಪ್ರಧಾನ ವ್ಯವಸ್ಥಾಪಕ ನಾಗರಾಜಪ್ಪಗೆ ಸಂಬಂಧಿಸಿದ ಐದು ವಿವಿಧ ಸ್ಥಳಗಳಲ್ಲಿ ಎಸಿಬಿ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ಕೈಗೊಂಡಿದೆ.

ಭೋವಿ ನಿಗಮದ ಹಣ ದುರ್ಬಳಕೆ ಹಾಗೂ ಅಸಮತೋಲಿತ ಆಸ್ತಿ ಹೊಂದಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿದ ಎಸಿಬಿ ತಂಡಗಳು ಬೆಂಗಳೂರಿನ ವಿಜಯನಗರದ ಎಂ‌.ಸಿ ಲೇಔಟ್​ನ ನಾಗರಾಜಪ್ಪರ ವಾಸದ ಮನೆ, ಆತನ ಸಹೋದರನ ಮನೆ, ಮಾಗಡಿ ರಸ್ತೆಯಲ್ಲಿರುವ ನಾಗರಾಜಪ್ಪ ಪರಿಚಿತರ ಅಪಾರ್ಟ್ಮೆಂಟ್, ಹೊಸಕೋಟೆ ತಾಲೂಕಿನ ಬೆನ್ನಿಗಾನಹಳ್ಳಿಯಲ್ಲಿರುವ ವಾಸದ ಮನೆ, ಚೆನ್ನಪಟ್ಟಣ ತಾಲೂಕಿನ ಹಾರೋಕೊಪ್ಪದಲ್ಲಿರುವ ನಾಗರಾಜಪ್ಪರ ಸಂಬಂಧಿಕರ ಮನೆಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ಕಾರ್ಯ ಮುಂದುವರೆಸಿವೆ.

ಓದಿ:ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಬಲೆಗೆ ಬಿದ್ದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ

ನಿನ್ನೆಯಷ್ಟೇ ಭೋವಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಲೀಲಾವತಿ ನಡೆಸಿದ್ದ ಪತ್ರಿಕಾಗೋಷ್ಟಿಯಲ್ಲಿ ಹಿರಿಯ ಐಎಎಸ್ ಅಧಿಕಾರಿಗಳಾದ ಮಂಜುನಾಥ್ ಪ್ರಸಾದ್ ಹಾಗೂ ಮಣಿವಣ್ಣನ್ ವಿರುದ್ಧ ಆರೋಪ‌ ಮಾಡಲಾಗಿತ್ತು. ಇದೇ ಸಂದರ್ಭದಲ್ಲಿ ಹಾಜರಿದ್ದ ನಾಗರಾಜಪ್ಪ 'ಗುರುವಾರ ನನ್ನ ಮೇಲೆ ಎಸಿಬಿ ದಾಳಿಯಾಗುತ್ತೆ' ಎಂದಿದ್ದರು.

ABOUT THE AUTHOR

...view details